ಅಮೃತ ಯೋಜನೆಯಡಿ ವಿಜಯಪುರ ನಗರಾಭಿವೃದ್ದಿ ವ್ಯಾಪ್ತಿ ಸೇರ್ಪಡೆಗೊಳಿಸಿ ಮಹಾಯೋಜನೆಗೆ ಅನುಮೋದನೆ
ವಿಜಯಪುರ ಏ. 15: ವಿಜಯಪುರ ನಗರಕ್ಕೆ ಮಹಾಯೋಜನೆ ಸಿದ್ಧಪಡಿಸಲು ಸರ್ಕಾರದಿಂದ ಅನುಮೋದನೆಯಾಗಿದೆ. ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ ಯೋಜನೆಯಡಿ ಜಿಐಎಸ್ ಆಧಾರಿತ ಮಹಾಯೋಜನೆ ಸಿದ್ಧಪಡಿಸಲು ರುದ್ರಾಭಿಷೇಕ್ ಎಂಟರ್‌ಪ್ರೈಸಸ್ ನವದೆಹಲಿ ಇವರಿಗೆ ಕಾರ್ಯಾದೇಶ ನೀಡಲಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸದರಿ ಸಂಸ್ಥೆಯೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಸಮಗ್ರ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಜಯಪುರ ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ ಯೋಜನೆಯಡಿ ಜಿಐಎಸ್ ಆಧಾರಿತ ಮಹಾಯೋಜನೆ ಸಿದ್ಧಪಡಿಸುವ ಕುರಿತು ಹಾಗೂ ವಿಜಯಪುರ ನಗರ ಸ್ಥಳೀಯ ಪ್ರದೇಶದಲ್ಲಿ ಕೈಗೊಳ್ಳಬೇಕಾಗಿರುವ ವಿವಿಧ ಕಾಮಗಾರಿಗಳ ಯೋಜನೆ ತಯಾರಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಭಾರತದ ಸರ್ಕಾರದ ಅಮೃತ ಯೋಜನೆಯಡಿ ಮೂಲಭೂತ ಸೌಕರ್ಯಗಳಾದ ನೀರು ಸರಬರಾಜು, ಒಳಚರಂಡಿ, ನಗರ ಸಾರಿಗೆ, ಉದ್ಯಾನವನ, ನಾಗರಿಕರಿಗೆ ಉತ್ತಮ ಯೋಜನೆ ಹಾಗೂ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ದೇಶದ 500 ನಗರಗಳನ್ನು ಗುರುತಿಸಲಾಗಿದೆ. ರಾಜ್ಯದ 26 ನಗರಗಳಲ್ಲಿ ವಿಜಯಪುರ ನಗರವನ್ನು ಅಮೃತ ಯೋಜನೆಯಡಿ ಗುರುತಿಸಿ, ಎರಡನೇ ಹಂತದ ಪ್ಯಾಕೇಜ್ 5ರಲ್ಲಿ ಸೇರೆ್ಡಗೊಳಿಸಲಾಗಿದ್ದು, ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವಿಸ್ತೀರ್ಣ 525 ಚ.ಕಿ.ಮೀ. ಇದ್ದು, ವಿಜಯಪುರ ಮಹಾನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಪ್ರಾಧಿಕಾರ ಹೊಂದಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸದರಿ ಸಂಸ್ಥೆ ಕೋರಿದ ಮಾಹಿತಿಯನ್ನು ಪರೀಶೀಲಿಸಿ, ಒದಗಿಸುವ ಮೂಲಕ ಸಂಸ್ಥೆಯೊಂದಿಗೆ ಸಮನ್ವಯತೆ ಸಾಧಿಸಬೇಕು. ಯಾವುದೇ ಮಾಹಿತಿ ಕೈಬಿಟ್ಟು ಹೋಗದಂತೆ ನೋಡಿಕೊಂಡು ಸಮಗ್ರ ಮಾಹಿತಿಯನ್ನು ಒದಗಿಸಬೇಕು ಎಂದು ಅವರು ಹೇಳಿದರು.
ಮಹಾನಗರ ಪಾಲಿಕೆ, ಹೆಸ್ಕಾಂ, ಜಲಮಂಡಳಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಹಾಲಿ ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳು ಸಹ ಜಿಐಎಸ್‌ನಲ್ಲಿ ಅಳವಡಿಸಿಕೊಳ್ಳುತ್ತಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಜಿಐಎಸ್ ಆಧಾರಿತ ಮಹಾಯೋಜನೆ ಸಿದ್ಧಪಡಿಸಲು ನಿಯೋಜಿತ ಸಂಸ್ಥೆ ಸಂಬಂಧಿಸಿದ ಇಲಾಖೆಗಳೊಂದಿಗೆ ದತ್ತಾಂಶ ಸಂಗ್ರಹಿಸಿಕೊಂಡಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳು, ಅಭಿವೃದ್ದಿ ಕಾರ್ಯಗಳಾದ ಕುಡಿಯುವ ನೀರು, ಒಳಚರಂಡಿ, ವಿದ್ಯುತ್, ಸರ್ಕಾರಿ ಕಟ್ಟಡ, ಜಾಗ, ಪ್ರವಾಸೋದ್ಯಮ ಸ್ಥಳ, ರಾಷ್ಟ್ರೀಯ ಹೆದ್ದಾರಿ ರಸ್ತೆ, ಇತ್ತೀಚಿನ ಮಾಹಿತಿಯನ್ನು ಬೇರೆ ಇಲಾಖೆಯಿಂದ ಪಡೆದುಕೊಂಡು ಪ್ರಸ್ತಾವಿತ ಮಾಹಿತಿಯಲ್ಲಿ ಸೇರೆ್ಡಗೊಳಿಸಿ ಒಂದು ತಿಂಗಳೊಳಗಾಗಿ ಕಾಲೋಚಿತಗೊಳಿಸಿದ ವಿವರನ್ನು ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ಹೊಂದಿರುವ ವಿಜಯಪುರ ಮಹಾನಗರ ಪಾಲಿಕೆ ಹಾಗೂ 10 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಭೆಯಲ್ಲಿ ಉದ್ಯಾನವನ, ಬಯಲು ಜಾಗೆ, ರಸ್ತೆ ಹಾಗೂ ನಾಗರಿಕ ಸೌಲಭ್ಯ ಜಾಗಗಳನ್ನು ಸ್ಥಳೀಯ ಸಂಸ್ಥೆಗಳ ಸುರಿ್ದಗೆ ಪಡೆಯುವ ದಾಖಲೆಗಳನ್ನು ಕಾಲೋಚಿತಗೊಳಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳ ಮಾಹಿತಿ, ಸಲಹೆ ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.
ವಿಜಯಪುರ ನಗರದ ಜಿಐಎಸ್ ಆಧಾರಿತ ಮಹಾ ಯೋಜನೆ 2041 ತಯಾರಿಸುವ ಕುರಿತಾಗಿ ರುದ್ರಾಭಿಷೇಕ ಸಂಸ್ಥೆಯು ಸಂಗ್ರಹಿಸಿದ ಮಾಹಿತಿ ವಿವರವನ್ನು ಪಿಪಿಟಿ ಮೂಲಕ ಇಂದು ನಡೆದ ಸಭೆಯಲ್ಲಿ ವಿವರಿಸಲಾಯಿತು.
ಪಾರಂಪರಿಕ ಪ್ರದೇಶದ ಸಂರಕ್ಷಣಾ ಸಮಿತಿ : ಸರ್ಕಾರದ ಅಧಿಸೂಚನೆಯಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಪರಿಣಿತ ಹೊಂದಿರುವ ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳು, ಐತಿಹಾಸಿಕ ವಾಸ್ತುಶಿಲ್ಪಿ, ಸಾಂಸ್ಕೃತಿಕ ಅಥವಾ ಪರಿಸರ ಸಂರಕ್ಷಣೆ ದಿಸೆಯಲ್ಲಿ ಸಮಿತಿ ರಚಿಸುವಂತೆ ಸಂಬಂಧಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಪಾರಂಪರಿಕ ಪ್ರದೇಶದ ಸಂರಕ್ಷಣಾ ಸಮಿತಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಅರಿವು-ಜ್ಞಾನ ಹೊಂದಿರುವ ವಿವಿಧ ಪರಿಣಿತರನ್ನೊಳಗೊಂಡ ಉಪ ಸಮಿತಿಯೊಂದನ್ನು ರಚಿಸಿ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಆನಂದ ಮಹಲ್ ಸೌಂದರ್ಯಿಕರಣಕ್ಕೆ ಸೂಚನೆ : ಐತಿಹಾಸಿಕ ಆನಂದ ಮಹಲ್ ಆವರಣದಲ್ಲಿ ಉದ್ಯಾನವನ ಅಭಿವೃದ್ದಿ, ಪ್ರವಾಸೋದ್ಯಮಕ್ಕೆ ಉತ್ತೇಜನ- ಮಾಹಿತಿಯುಳ್ಳ ಅತ್ಯಾಕರ್ಷಕ ಗೇಟ್ ಹಾಗೂ ಕಂಪೌಂಡ್ ನಿರ್ಮಾಣ, ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಸೂಕ್ತ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಭೂಮಾಪನ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುಳಗುಂದ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಭಿಯಂತ ಗೋವಿಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.