ಲೋಕದರ್ಶನ ವರದಿ
ಸಿಂದಗಿ 21: ಮಕ್ಕಳು ಮಕ್ಕಳಾಗಿಯೇ ಬೆಳೆಯಲು ಪೂರಕವಾಗಬಲ್ಲಂತಹ ವಾತಾವರಣ ಮಕ್ಕಳಿಗೆ ಕಲ್ಪಿಸೋಣ ಎಂದು ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಪೂಜಾರ ಹೇಳಿದರು.
ಮಂಗಳವಾರ ಪಟ್ಟಣದ ವಿದ್ಯಾನಗರದಲ್ಲಿನ ವಿದ್ಯಾಚೇತನ ಹಿರಿಯ ಪ್ರಾಥಮಿಕಶಾಲೆಯ ಸಭಾಭವನದಲ್ಲಿ ಮಕ್ಕಳ ಕಲ್ಯಾಣ ಪ್ರತಿಷ್ಠಾನ ಹಮ್ಮಿಕೊಂಡ 'ಮಕ್ಕಳ ಹಕ್ಕುಗಳ ದಿನ' ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಭಾವನೆಗಳನ್ನು, ಮುಗ್ಧತೆ ಅರ್ಥಮಾಡಿಕೊಳ್ಳುವಂತಹ ಮನೋಭಾವನೆ ಪಾಲಕರು, ಶಿಕ್ಷಕರು ಬೆಳೆಸಿಕೊಳ್ಳಬೇಕು. ಮಕ್ಕಳ ಸಮಸ್ಯೆಗಳನ್ನು ಅವಲೋಕಿಸಿ 1989ರ ನವೆಂಬರ್ನಲ್ಲಿ ಮಕ್ಕಳ ಹಕ್ಕುಗಳನ್ನು ಅಂಕಿಕರಿಸಿದೆ. ಜೀವಿಸುವ ಹಕ್ಕು, ಶಿಕ್ಷಣದ ಹಕ್ಕು, ಆರೋಗ್ಯದ ಹಕ್ಕು ಪೌಷ್ಠಿಕ ಆಹಾರ ಮತ್ತು ವಿಶ್ರಾಂತಿ ಪಡೆಯುವ ಹಕ್ಕು, ಆಟಗಳೊಂದಿಗೆ ಶಾರೀರಿಕವಾಗಿ ಸದೃಢವಾಗುವ ಹಕ್ಕು ಹೀಗೆ ಹಲವು ಹಕ್ಕುಗಳನ್ನು ಮಕ್ಕಳಿಗೆ ನೀಡಿದೆ. ಈ ಮಕ್ಕಳ ಹಕ್ಕುಗಳ ಕುರಿತು ಸಮಾಜದಲ್ಲಿ ಜಾಗೃತಿ ಮುಡಿಸುವುದು ಮಕ್ಕಳ ಕಲ್ಯಾಣ ಪ್ರತಿಷ್ಠಾನ ಪ್ರಮುಖ ಗುರಿಹೊಂದಿದೆ ಎಂದರು.
ಸ್ಥಳಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾಥರ್ಿನಿ ಸುಕೃತಾ ಜಗದೀಶ ಪಟ್ಟಣಶೆಟ್ಟಿ ಮಾತನಾಡಿ, ಮಕ್ಕಳು ತಮ್ಮ ಹಕ್ಕುಗಳನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಮಕ್ಕಳಿಗೆ ಹಕ್ಕುಗಳಿವೆ. ಆದರೆ ಅವುಗಳನ್ನು ಅನುಭವಿಸಲು ನಾವು ಅವರಿಗೆ ಅವಕಾಶ ಮಾಡಿಕೊಡುತ್ತಿಲ್ಲ. ನಮಗೆ ಇಷ್ಟವಾದಂತೆ ಅವರನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಅವರ ಮೇಲೆ ಒತ್ತಡ ಹೆರುತ್ತೇವೆ. ಹೀಗಾಗಿ ಮಕ್ಕಳ ಮನಸ್ಸು ವಿಕಾಸಗೊಳ್ಳುವ ಬದಲು ವಿಕಾರಗೊಳ್ಳುತ್ತದೆ. ಆಗ ಮಕ್ಕಳು ದಾರಿ ತಪ್ಪುತ್ತಾರೆ. ಆಮೇಲೆ ನಾವು ಪಶ್ಚಾತಾಪ ಪಡುತ್ತೇವೆ. ಆದ್ದರಿಂದ ಮಕ್ಕಳಿಗೆ ಮಾರ್ಗದರ್ಶಕರಾಗಿರುವ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಬಗ್ಗೆ ಎಚ್ಚರಿಕೆಯ ಹೆಜ್ಜೆಗಳನ್ನಿಡುವುದು ಅವಶ್ಯಕವಾಗಿದೆ ಎಂದರು. ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕಾರ್ಯದಶರ್ಿ ಜ್ಯೋತಿ ರಮೇಶ ಪೂಜಾರ ಅವರು ಮಾತನಾಡಿ, ಮಕ್ಕಳಲ್ಲಿ ತ್ಯಾಗ, ಶೌರ್ಯ, ಪ್ರೀತಿ, ಸೇವೆಯಂತಹ ಗುಣಗಳನ್ನು ಬೆಳೆಸಬೇಕಾಗಿದೆ. ಮಕಳ್ಳ ಹಕ್ಕುಗಳ ರಕ್ಷಣೆಗೆ ಮಹತ್ವ ಕೊಡಬೆಕಾಗಿದೆ ಎಂದರು.
ಜಗದೀಶ ಪಟ್ಟಣಶೆಟ್ಟಿ, ಸುರೇಶಬಬು ಕೋಟಿಖಾನಿ, ಮೇರಿ ಮಿಸ್, ಜಾರ್ಜ ಡಿಸೋಜಾ, ದಾನಮ್ಮ ಗಣಾಚಾರಿ, ಮೈನುದ್ದಿನ ದೇವಿಕೇರಿ, ರಾಜು ಹಿರೇಕುರಬರ, ಸುಧಾ ಹಿರೇಮಠ, ಯಶೋಧಾ ಕುಂಬಾರ, ವಿಜಯಲಕ್ಷ್ಮಿ ಶಹಾಪೂರ, ಆಶ್ವಿನಿ ಲೋಣಿ, ಸಾಧನಾ ಇಮಡೆ, ಮಂಗಳಾ ಬಮ್ಮಣ್ಣಿ, ವಿಜಯಲಕ್ಷ್ಮಿ ಮಠಪತಿ, ಭಾಗ್ಯಶ್ರೀ ಬಡಿಗೇರ, ಶರಣು ಗೋಜರ್ಿ, ಶ್ರೀಶೈಲ ಹೂಗಾರ, ಸುಲ್ತಾನಬಿ, ರೇಣುಕಾ ಕುಂಬಾರ ಹಾಗೂ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿದ್ಯಾಥರ್ಿನಿ ಈಶ್ವರಿ ಬಿರಾದಾರ ಸ್ವಾಗತಿಸಿದರು. ವಿದ್ಯಾಥರ್ಿನಿ ಸ್ಪುತರ್ಿ ಹನರ್ಾಳ ನಿರೂಪಿಸಿದರು. ವಿದ್ಯಾಥರ್ಿ ಯುವರಾಜ ಚಂಡ್ರೆಪ್ಪಗೋಳ ವಂದಿಸಿದರು.