ಗಾದೆಗಳು ಅನುಭವದ ಮೂಸೆಯಿಂದ ಮೂಡಿ ಬಂದಿವೆ

ಧಾರವಾಡ 16: ಗಾದೆಗಳು ಅನುಭವದ ಮೂಸೆಯಿಂದ ಮೂಡಿ ಬಂದಿವೆ. ಅವುಗಳು ನೈಜತೆಯಿಂದಕೂಡಿವೆ.  ಇಂತಹ ಕಾರ್ಯಕ್ರಮಗಳು ಮಹಿಳೆಯರ ಸೃಜನಾತ್ಮಕ ಕಲೆಗಳನ್ನು ಹೊರಹಾಕಲು ಸಹಾಯ ಮಾಡುತ್ತವೆಎಂದುಧಾರವಾಡಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕಿಡಾ. ವ್ಹಿ. ಬಿ. ಸಾವಿರಮಠ ಹೇಳಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ.ಆನಂದ ಚಿಗಟೇರಿ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಕನ್ನಡಗಾದೆ ಮಾತುಗಳ ಆಧರಿಸಿ ಕಥೆ ಹೇಳುವ ಸ್ಪರ್ಧೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆ.ಎಸ್‌.ಎಸ್‌. ಮಹಾವಿದ್ಯಾಲಯದ ಪ್ರಾಧ್ಯಾಪಕಿಡಾ.ರತ್ನಾಐರಸಂಗ ಮಾತನಾಡುತ್ತಾ, ಗಾದೆಗಳನ್ನು ಆಧರಿಸಿ ಕಥೆ ಹೆಣೆಯುವ ಕೆಲಸವು ತುಂಬಾಅರ್ಥಗರ್ಭಿತವಾಗಿದೆ ಮತ್ತುಅದು ಸ್ತ್ರೀಯರಲ್ಲಿ ಸುಪ್ತವಾಗಿ ಅಡಗಿರುವ ಕಲೆಯನ್ನು ತೋರಿ​‍್ಡಸುತ್ತದೆ ಎಂದರು.  

ಇನ್ನೋರ್ವ ಅತಿಥಿ ಕರ್ನಾಟಕ ಕಲಾ ಮಹಾವಿದ್ಯಾಲಯದ ಡಾ.ಶೈಲಜಾ ಅಮರಶೆಟ್ಟಿ ಮಾತನಾಡಿ, ಗಾದೆಗಳು ನಿಜ ಜೀವನಕ್ಕೆ ಎಷ್ಟು ಹತ್ತಿರವಾಗಿರಬೇಕೆಂದರೆ ಅವುಗಳ ಆಳಕ್ಕಿಳಿದು ಅದರ ಅರ್ಥವನ್ನು ಹುಡುಕುತ್ತ ಹೋದಂತೆಲ್ಲಾ, ಅದರ ವ್ಯಾಪ್ತಿ ವಿಸ್ತಾರವಾಗುತ್ತಾ ಹೋಗುತ್ತದೆ. ಚಿಗಟೇರಿ ಸಹೋದರಿಯರು ತಮ್ಮ ಸಹೋದರನ ಹೆಸರಿನಲ್ಲಿ ನಡೆಸುತ್ತಿರುವ ಈ ಕಾರ್ಯಕ್ರಮ ತುಂಬಾ ಪ್ರೋತ್ಸಾಹದಾಯಕವಾಗಿದೆ ಎಂದರು.  

ಕನ್ನಡಗಾದೆ ಮಾತುಗಳು ಸ್ಪರ್ಧೆಯಲ್ಲಿ 20 ಮಹಿಳೆಯರು ಭಾಗವಹಿಸಿ, ‘ಪ್ರತ್ಯಕ್ಷಕಂಡರೂ ಪ್ರಮಾಣಿಸಿ ನೋಡು’ ಮತ್ತು ‘ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ’ ಗಾದೆೆಗಳನ್ನಾಧರಿಸಿ ಅರ್ಥವತ್ತಾದ ಕಥೆಗಳನ್ನು ಹೇಳಿದರು. ಸ್ಪರ್ಧೆಯಲ್ಲಿ ಜಯಶ್ರೀ ಗುತ್ತಲ ಪ್ರಥಮ, ಮಧುಮತಿ ಸಣಕಲ್ ದ್ವಿತೀಯ ಹಾಗೂ ಮಂಜುಳಾ ಹೊಸೂರ ತೃತೀಯ ಸ್ಥಾನಗಳನ್ನು ಪಡೆದರು. 

ಕಲಾವತಿ ಪ್ರಾರ್ಥಿಸಿದರು ಶಂಕರ ಕುಂಬಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ನಿರೂಪಿಸಿದರು.ಡಾ. ಜಿನದತ್ತ ಹಡಗಲಿ ಸ್ಪರ್ಧಾಕಾರ್ಯಕ್ರಮ ನಡೆಸಿಕೊಟ್ಟರು. ಡಾ. ನಿರ್ಮಲಾಚಿಗಟೇರಿ ವಂದಿಸಿದರು. ದತ್ತಿದಾನಿಗಳ ಪರವಾಗಿ ಡಾ. ವಿ. ಶಾರದಾ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮಂಗಳಾ ಚಿಗಟೇರಿ, ಡಾ.ಎಂ.ಆರ್‌. ಈರಣ್ಣ, ಸುಜಾತಾ ಹಡಗಲಿ, ಕೊಪ್ಪದ ಸೇರಿದಂತೆ ಮೊದಲಾದವರಿದ್ದರು.