ಹೊರ ರಾಜ್ಯಗಳ ವಲಸೆ ಕಾರ್ಮಿಕರಿಂದ ಪ್ರತಿಭಟನೆ

ಬೆಂಗಳೂರು,  ಮೇ 12, ಬೇರೆ ಬೇರೆ ರಾಜ್ಯದಿಂದ ಬೆಂಗಳೂರಿಗೆ ಬಂದಿದ್ದ ವಲಸೆ ಕಾರ್ಮಿಕರು  ತಮ್ಮ ಊರಿಗೆ ವಾಪಸ್ಸು ಕಳುಹಿಸುವಂತೆ ಒತ್ತಾಯಿಸಿ ಸುಮಧುರಾ ಕಟ್ಟಡ ನಿರ್ಮಾಣ  ಸಂಸ್ಥೆಯಲ್ಲಿ  ಪ್ರತಿಭಟನೆ ನಡೆಸುತ್ತಿದ್ದಾರೆ.ತಮ್ಮ ರಾಜ್ಯಕ್ಕೆ ತೆರಳಲು ಅವಕಾಶ ನೀಡದ ಕಟ್ಟಡ ಮಾಲೀಕರ ವಿರುದ್ಧ ವಲಸೆ ಕಾರ್ಮಿಕರು ಆಕ್ರೋಶ ವ್ಯಕ್ತಡಿಸಿ ಪ್ರತಿಭಟಿಸುತ್ತಿದ್ದಾರೆ.ಪಶ್ಚಿಮ ಬಂಗಾಳ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ವಲಸೆ ಕಾರ್ಮಿಕರನ್ನು ಕಾಡುಗೋಡಿ  ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬನಹಳ್ಳಿ ಬಳಿ ಕೂಡಿ ಹಾಕಲಾಗಿದ್ದು, ಸೋಮವಾರ  ರಾತ್ರಿಯಿಂದ ನಿರಂತರವಾಗಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಊಟ‌, ನೀರು ಇಲ್ಲ, ಕೂಲಿಯೂ ಇಲ್ಲದೆ ಪರದಾಡುತ್ತಿರುವ ಕಾರ್ಮಿಕರು, ನಮ್ಮ ರಾಜ್ಯಕ್ಕೆ ನಮ್ಮನ್ನು ವಾಪಸ್ಸು ಕಳುಹಿಸಿ‌ ಕೊಡಿ ಎಂದು ಕಾಡುಗೋಡಿ ಪೊಲೀಸರನ್ನು ಅಂಗಲಾಚಿದ ಬೇಡಿಕೊಳ್ಳುತ್ತಿದ್ದಾರೆ.ಸುಮಾರು 300 ಜನ ಕಾರ್ಮಿಕರನ್ನು ಇಲ್ಲಿ ಕೂಡಿ ಹಾಕಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸುವಂತೆ ಅವರು ಆಗ್ರಹಿಸಿದ್ದಾರೆ.