ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನವರದಿ

ಬ್ಯಾಡಗಿ02: ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಸರ್ಕಾರ  ನೋಡುತ್ತಿರುವ ದೃಷ್ಟಿಕೋನ ಬದಲಾಗಬೇಕು ದೇಶಕ್ಕೆ ವಿದ್ಯಾವಂತರನ್ನು ಕೊಡುವ ಮೂಲಕ ಸಕರ್ಾರದ ಹೊರೆಯನ್ನು ಇಳಿಸಿದಂತಹ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದಿಗೂ ಸಮರ್ಪಕ ಅನುದಾನ, ಅಲ್ಲಿನ ಶಿಕ್ಷಕರಿಗೆ ಉದ್ಯೋಗ ಭರವಸೆ ಸೇರಿದಂತೆ ಇನ್ನೀತರ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿವೆ, ಕೂಡಲೇ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅವಶ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬಿಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಸಕರ್ಾರಕ್ಕೆ ಆಗ್ರಹಿಸಿದರು.

 ಮಾಧ್ಯಮಿಕ ಶಾಲಾ ಸಂಘದ ನೇತೃತ್ವದಲ್ಲಿ ಶನಿವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳೆಂದರೆ ಹಣ ಮಾಡುವ ಕೇಂದ್ರಗಳೆಂಬ ಒಂದು ಸಾಲಿನ ಆರೋಪವನ್ನು ಎಲ್ಲರೂ ಮಾಡುತ್ತಿದ್ದಾರೆ, ಸಾಲಶೂಲ ಆಡಳಿತ ಮಂಡಳಿಗಳು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಆಸಕ್ತಿ ಹೊಂದಿರುವುದನ್ನು ಯಾವುದೇ ಆಡಳಿತಾರೂಢ ಸಕರ್ಾರಗಳು ಶ್ಲಾಘಿಸಿಲ್ಲ ಎಂದು ಆರೋಪಿಸಿದರು.

ಇಬ್ಬಗೆ ನೀತಿ ಕೈಬಿಡಿ: 

  ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಸಕರ್ಾರ ತೋರುತ್ತಿರುವ ಇಬ್ಬಗೆ ನೀತಿಯಿಂದ ಮೊದಲು ಹೊರ ಬರ ಬೇಕು, ಉಚಿತ ಶಿಕ್ಷಣ ಸಕರ್ಾರಿ ಶಾಲೆಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿಲ್ಲ, ಇದ ರಿಂದ ಮಕ್ಕಳಲ್ಲಿಯೇ ತಾರತಮ್ಯ ಎಸಗಿಂತಾಗುವುದಿಲ್ಲವೇ..? ಎಂದು ಆರೋಪಿಸಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳನ್ನು ಸೇರಿಸಿದವರು ಎಲ್ಲರೂ ಆಥರ್ಿಕವಾಗಿ ಸ್ಥಿತಿವಂತರು ಎಂಬ ನಿಧರ್ಾರಕ್ಕೆ ಬರುವುದು ಸೂಕ್ತವಲ್ಲ, ಸಕರ್ಾರಿ ಶಾಲೆ ಗಳಲ್ಲಿ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದ್ದರಿಂದ ಬಹುತೇಕ ಕೂಲಿ ಕಾಮರ್ಿಕರೂ ಸಹ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಸುವುದಕ್ಕೆ ಮುಂದಾಗುತ್ತಿದ್ದಾರೆ ಎಂದರು. 

1995 ನಂತರದ ಶಾಲೆಗಳಿಗೆ ಖಾಯಂ ಅನುದಾನ ಕೊಡಿ: ಸಂಸ್ಥೆಯ ಅಧ್ಯಕ್ಷ ಬಿ.ವಿ.ಶೆಟ್ಟೆಪ್ಪನವರ ಮಾತನಾಡಿ, ರಾಜ್ಯ ಸಕರ್ಾರ ಇಲ್ಲಿಯವರೆಗೂ ಕೇವಲ 1992 ಕ್ಕೂ ಹಿಂದೆ ಪ್ರಾರಂಭವಾದ ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಶಾಶ್ವತ ಅನುದಾನಕ್ಕೊಳಪಡಿಸಿದೆ, ಆದರೆ ಕಳೆದ 25 ವರ್ಷಗಳಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಸಂಸ್ಥೆಯನ್ನು ಜೀವಂತವಾಗಿಟ್ಟುಕೊಂಡ ಬಂದಂತಹ (1995 ರ ಬಳಿಕ ಪ್ರಾರಂಭವಾದ) ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು, ಇದರಿಂದ ಅಲ್ಲಿದ್ದ ಶಿಕ್ಷಕರಿಗೆ ಕೊನೆಯ ಪಕ್ಷ ನಿವೃತ್ತಿ ಸಮಯದಲ್ಲಾದರೂ ಉತ್ತಮ ವೇತನ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದರು.

ಜ್ಯೋತಿ ಸಂಜೀವಿನಿ, ಬೋಗಸ್ ಯೋಜನೆ: 

     ಸಕರ್ಾರಿ ನೌಕರರು ಬಹು ನಿರೀಕ್ಷೆಯನ್ನಿಟ್ಟುಕೊಂಡಿದ್ದ ಜ್ಯೋತಿ ಸಂಜೀವಿನಿ ರಾಜ್ಯದ ಯಾವುದೇ ಸಕರ್ಾರಿ ನೌಕರರಿಗೂ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿಯೂ ಕ್ಯಾಶ್ಲೆಸ್ ಟ್ರೀಟ್ಮೆಂಟ್ (ನಗದು ರಹಿತ ಚಿಕಿತ್ಸೆ) ಸಿಗದೇ, ಯೋಜನೆಯು ಬಹುದೊಡ್ಡ ಪ್ಲಾಪ್ಶೋನಂತಾಗಿದೆ, ಸದರಿ ಯೋಜನೆಯಡಿ ರೋಗಿಗಳನ್ನು (ನೌಕರರನ್ನು) ನೋಂದಣಿ ಮಾಡಿಸಿಕೊಳ್ಳದೇ ಖಾಸಗಿ ಆಸ್ಪತ್ರೆಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

  ಹೀಗಾಗಿ ರೋಗಕ್ಕೆ ತುತ್ತಾದ ಸಕರ್ಾರಿ ನೌಕರರು ತಮ್ಮ ಬಳಿಯಿದ್ದ ಆಸ್ತಿಪಾಸ್ತಿ ಮಾರಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು.

 ಇಲ್ಲವೋ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿಗೆ ತಲುಪಿದ್ದಾರೆ, ಕೂಡಲೇ ಸದರಿ ಯೋಜನೆಗೆ ಎಲ್ಲ ಆಸ್ತತ್ರೆಗಳಲ್ಲಿಯೂ ಮಾನ್ಯತೆ ಸಿಗುವಂತೆ ನೋಡಿಕೊಳ್ಳಬೇಕು ಮತ್ತು ಎಲ್ಲಾ ಖಾಸಗಿ ಶಾಲೆಗಳ ನೌಕರರನ್ನು ಸದರಿ ಯೋಜನೆಯ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿದರು. ಇದಕ್ಕೂ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ ಸಂಘದ ಕಾರ್ಯಕರ್ತರು ಬಳಿಕ ತಹಶೀಲ್ಧಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಎನ್ಪಿಎಸ್ ರದ್ದುಗೊಳಿಸಿ: 

ಎಸ್.ಎಸ್.ಪಿ.ಎನ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಸನ್ 2006 ಏಪ್ರಿಲ್ ತಿಂಗಳ ಬಳಿಕ ಕೇಂದ್ರ ಹಾಗೂ ರಾಜ್ಯ ಸಕರ್ಾರಿ ಸೇವೆಯಲ್ಲಿ ತೊಡಗಿದ ನೌಕರರಿಗೆ ಎನ್ಪಿಎಸ್ (ಹೊಸ ಪಿಂಚಣಿ ಯೋಜನೆ) ಎಂಬ ಮರಣ ಶಾಸನವನ್ನು ಬರೆದಿಟ್ಟಿದೆ, ಇದರಿಂದ ನಿವೃತ್ತಿಯ ಬಳಿಕ ಸದರಿ ನೌಕರ ಬದುಕು ಅತಂತ್ರವಾಗುವುದು ನಿಶ್ಚಿತ ಅಥವಾ ನಿವೃತ್ತಿಯ ಬಳಿಕವೂ ನೌಕರರು ಬೇರೆಡೆ ಎಲ್ಲಾದರೂ ಖಾಸಗಿ ವ್ಯಕ್ತಿಗಳ ದುಡಿದು ತಿನ್ನಲೇಬೇಕಾದ ಸ್ಥಿತಿ ಎದುರಿಸಬೇಕಾಗಬಹುದು ಆ ಕಾರಣಕ್ಕಾಗಿ ಕೂಡಲೇ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದರು. 

 ಈ ಸಂದರ್ಭದಲ್ಲಿ ಬಿಇಎಸ್ ಪ್ರಾಚಾರ್ಯ ಕೆ.ಜಿ.ಖಂಡೇಬಾಗೂರ, ಪ್ರಾದ್ಯಾಪಕ ಸಿ.ಶಿವಾನಂದಪ್ಪ, ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳಾದ ಸಿ.ಎನ್.ಬಣಕಾರ, ಬಿ.ಎಫ್.ದೊಡ್ಡಮನಿ, ಶಿವ್ಯಾ ನಾಯ್ಕ್, ಮಲ್ಲಿಕಾಜರ್ುನಗೌಡ ಚನ್ನಗೌಡ್ರ, ಮಲ್ಲನಗೌಡ ಪಾಟೀಲ, ಪಿ.ಬಸವರಾಜಪ್ಪ, ಎ.ಟಿ.ಪೀಠದ, ಕುಮಾರಸ್ವಾಮಿ ಮಠದ, ಪಿ.ಎಸ್.ಹಿರೇಮಠ, ಸುರೇಶ ಗೂಳೇರ, ಬಿ.ಎಲ್.ನಾಯಕ್, ಬಸನಗೌಡ ಗೌಡರ, ಎಂ.ಸಿ.ಪಾಟೀಲ. ಎಮ್.ಬಿ.ಪಾಟೀಲ, ಸಿ.ಎಸ್.ಪಾಟೀಲ, ಉಮಾಪತಿ, ಎಂ.ಎನ್.ಹೊಸ್ಮನಿ, ನಾಗರಾಜ ಹುತ್ತಣ್ಣನವರ, ಎನ್.ಎಸ್.ಯಲಿಮಣ್ಣನವರ, ವಿ.ಸಿ.ಹೊಂಡದಮಠ, ಮಹಾಂತೇಶ ಗಡಿಗೋಳ ವೈ.ಬಿ.ಕದಮ್, ಪ್ರಶಾಂತ್ ಎನ್.ಎಸ್, ಚನ್ನಬಸಪ್ಪ ಬಣಕಾರ, ವಿ.ಎಂ.ದೊಡ್ಮನಿ, ಪ್ರಶಾಂತ್ ಗೊರವರ, ಎ.ಎನ್.ಹಿರೇಹಳ್ಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.