ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ 

ರೋಣ 22: ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿರುವ ಆಸರೆ ಮನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡ ಪ್ರಕಾಶ ಭಜಂತ್ರಿ ನೇತೃತ್ವದಲ್ಲಿ ಹೊಳೆ ಆಲೂರ ಗ್ರಾಮಸ್ಥರು ಕೊಣ್ಣೂರ ರಸ್ತೆ ತಡೆದು  ಸೋಮವಾರ ಪ್ರತಿಭಟನೆ ನಡೆಸಿದರು  

ಪ್ರಕಾಶ ಭಜಂತ್ರಿ ಮಾತನಾಡಿ ದಶಕದ ಹಿಂದೆ ಹೋಳೆ ಆಲೂರು ಭಾಗದಲ್ಲಿ ಸಂಭವಿಸಿದ  ಭೀಕರ ಪ್ರವಾಹದಿಂದಾಗಿ ವಿವಿಧ ಗ್ರಾಮಗಳ ಜನರು ಮನೆ ಕಳೆದುಕೊಂಡ ಅವರಿಗೆ ಸೂರು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅಂದಿನ ಸಕರ್ಾರ ಹೋಳೆ ಆಲೂರ ಸೇರಿದಂತೆ ವಿವಿಧ  ಪ್ರವಾಹ ಪೀಡಿತ  ಗ್ರಾಮಗಳಿಗೆ ಆಸರೆ ಮನೆಗಳನ್ನು ನಿಮರ್ಾಣ ಮಾಡಿಕೋಟಿತ್ತು ಆದರೆ ತಹಶೀಲ್ದಾರ  ಹಾಗೂ ಪಿಡಿಓ  ಅವರ ನಿರ್ಲಕ್ಷ ದಿಂದಾಗಿ ಇದುವರೆಗೆ ಹೊಳೆ ಆಲೂರ ಗ್ರಾಮಸ್ಥರಿಗೆ ಸಮರ್ಪಕವಾಗಿ ಆಸರೆ ಮನೆಗಳನ್ನು ಹಂಚಿಕೆ ಯಾಗಿಲ್ಲವೆಂದು ಆರೋಪಿಸಿದರು 

   ಕೆಲವರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಿಲ್ಲ. ನಾಲ್ಕು ತಿಂಗಳ ಹಿಂದೆ  ಮತ್ತೆ ಈ ಭಾಗದಲ್ಲಿ ಪ್ರವಾಹ ಸಂಭವಿಸಿದರಿಂದ ಗ್ರಾಮಕ್ಕೆ ನೀರು ನುಗ್ಗಿ ಗ್ರಾಮದ ಜನರು ಮನೆಗಳನ್ನು ಕಳೆದುಕೊಂಡದ್ದಾರೆ. ಪ್ರವಾಹದ ಸಂದರ್ಭದಲ್ಲಿ  ಅವರ ಮನೆಯಲ್ಲಿ ಜನರು ವಾಸವಿದ್ದರು ಮನೆಯ ಹಂಚಿಕೆಯ ಗೊಂದಲ ಉಂಟಾಗಿದೆ ಎಂದರು  

ತಹಶೀಲ್ದಾರರ ಜೆ.ಬಿ.ಜಕ್ಕನಗೌಡರ  ಸ್ಥಳಕ್ಕೆ ಭೇಟಿ ನೀಡಿ  ಸಂತ್ರಸ್ತರಿಗೆ ಆಗಿರುವ ಸಮಸ್ಯೆ ಹಾಗೂ ವಿಲಂಭಕೆ ಕ್ಷಮೆ ಯಾಚಿಸುತ್ತೆನೆ. ಹೋಳೆ ಆಲೂರಿನ ಮೂಲ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ 2007  ರ ಪಟ್ಟಿಯ ಪ್ರಸ್ತುತ ಪ್ರಕಾರ 412  ಕುಟುಂಬಗಳು ಇವೆ 2009 ರ ಪ್ರಕಾರ 450  ಕ್ಕೂ ಹೆಚ್ಚು  ಕುಟುಂಬಗಳು ಇವೆ. ಆದರೆ ಹೋಳೆ ಆಲೂರ  ಗ್ರಾಮದಲ್ಲಿ 580  ಮನೆಗಳನ್ನು ನಿಮರ್ಾಣ ಮಾಡಲಾಗಿದೆ ನಾಳೆನೆ ಅರ್ಹ ಫಲನುಭವಿಗಳ    ಪಟ್ಟಿ ಪ್ರಕಟ್ಟಿಸುತ್ತೆವೆ  ಆಕ್ಷೇಪಣೆಗಳನ್ನು ಅಲಿಸಿ ಡಿಸೆಂಬರ್ ತಿಂಗಳಲ್ಲಿ ಹಂಚಿಕೆ ಕಾರ್ಯವನ್ನು ಮುಗಿಸುತ್ತೆನೆ. ಎಂದು ತಹಶಿಲ್ದಾರ ಜೆ.ಬಿ.ಜಕ್ಕನಗೌಡರ  ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.