ಬೆಳಗಾವಿ,2: ರೈತರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಗಳ ಜೊತೆಗೆ ಕಾನೂನಾತ್ಮಕ ಹೋರಾಟ ನಡೆಸಬೇಕು. ನ್ಯಾಯವಾದಿಗಳು ರೈತರಿಗೆ ಕಾನೂನು ನೆರವು ನೀಡಲು ಮುಂದಾಗಬೇಕು ಎಂದು ರೈತ ಮುಖಂಡರುಗಳ ಕರೆ ನೀಡಿದ್ದಾರೆ.
ಗುರುವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಹಿರಿಯ ರೈತ ಮುಖಂಡ ಹಾಗೂ ನ್ಯಾಯವಾದಿ ಬಿ.ಪಿ.ಶೇರಿ ಅವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅನೇಕ ರೈತ ಮುಖಂಡರುಗಳು, ಕೇವಲ ಪ್ರತಿಭಟನೆಗಳಿಂದ ನಮ್ಮ ಬೇಡಿಕೆಗಳು ಈಡೇರುತ್ತಿಲ್ಲ. ಬೇಡಿಕೆಗಳ ಈಡೇರಿಕೆಗೆ ಕಾನೂನು ನೆರವು ಪಡೆಯುವದು ಅನಿವಾರ್ಯವಾಗಿದೆ ಎಂದರು.
ದಿ. ಬಿ.ಪಿ.ಶೇರಿ ಅವರು ಕಬ್ಬಿನ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದರು. ಕಬ್ಬಿನ ಬಾಕಿ ಹಣ ಪಾವತಿಗಾಗಿ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯ ದೊರಕಿಸುವಲ್ಲಿ ಯಶಸ್ವಿಯಾಗಿದ್ದರು. ನ್ಯಾಯಾಲಯದ ತೀಪರ್ಿನ ನಂತರವೂ ಸಕ್ಕರೆ ಕಾಖರ್ಾನೆಗಳು ಬಾಕಿ ಹಣ ಸಂದಾಯ ಮಾಡದಿದ್ದಾಗ ನ್ಯಾಯಾಲಯ ನಿಂಧನೆ ದಾವೆ ಹೂಡಿದ್ದರು. ನ್ಯಾಯಾಂಗ ನಿಂದನೆಗೆ ಬೆದರಿದ ಕಾಖರ್ಾನೆ ಮಾಲಿಕರು ಬಾಕಿ ಹಣ ಸಂದಾಯ ಮಾಡಿದ್ದರು ಎಂದು ನೆನಪಿಸಿಕೊಂಡರು.
ಸಕ್ಕರೆ ಕಾಖರ್ಾನೆಗಳ ಮಾಲಿಕರು ಕೋಟರ್್ ತೀಪರ್ಿನ ವಿರುದ್ಧ ಸುಪ್ರೀಂ ಕೋಟರ್ಿನ ಮೋರೆ ಹೋದಾಗ ದಿ.ಬಿ.ಪಿ.ಶೇರಿ ಅವರು ಸುಪ್ರೀಂ ಕೋಟರ್ಿನಲ್ಲೂ ವಾದ ಮಂಡಿಸಿ, ಅಲ್ಲಿಯೂ ಯಶಸ್ವಿಯಾಗಿದ್ದರು. ಅವರೊಬ್ಬ ಪ್ರಾಮಾಣಿಕ ರೈತ ಹೋರಾಟಗಾರರಾಗಿದ್ದರು. ಪ್ರತಿಭಟನೆಗಳಿಗಿಂತ ಅವರು ನ್ಯಾಯಾಲಯಗಳ ಮೇಲೆ ಅತಿಯಾದ ವಿಶ್ವಾಸ ಹೊಂದಿದ್ದರು ಎಂದು ಬಣ್ಣಿಸಿದರು.
ಕಬ್ಬಿನ ಬಾಕಿ ಹಣ ವಸೂಲಿ ಮತ್ತು ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವ ಮೂಲಕ ರಾಜ್ಯ ಸರಕಾರ ಬಿ.ಪಿ.ಶೇರಿ ಅವರಿಗೆ ನಿಜವಾದ ಶ್ರದ್ದಾಂಜಲಿ ಸಲ್ಲಿಸಬೇಕು ಎಂದು ಆಗ್ರಹಿಸಿದ ಈ ಮುಖಂಡರುಗಳು ಕಬ್ಬಿನ ಬಾಕಿ ಹಣ ವಸೂಲಿ, ವೈಜ್ಞಾನಿಕ ಬೆಲೆ ಹಾಗೂ ರೈತ ಸಮುದಾಯದ ಇತರ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಿರಂತವಾಗಿ ಮುಂದುವರೆಯಲಿದೆ ಎಂದು ಘೋಷಿಸಿದರು.
ಸಭೆಯ ಪ್ರಾರಂಭದಲ್ಲಿ ಎರಡು ನಿಮಿಷ ಮೌನ ಆಚರಿಸುವ ಮೂಲಕ ದಿ. ಬಿ.ಪಿ.ಶೇರಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಹಿರಿಯ ರೈತ ಮುಖಂಡ ಜಯಪ್ಪ ಬಸರಕೊಡ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ, ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ, ರೈತ ಮುಖಂಡರಾದ ಘೂಳಪ್ಪ ಭಾವಿಕಟ್ಟಿ, ವೈ.ಎಚ್.ಪಾಟೀಲ, ದುಗರ್ಾಸಿಂಗ ಮ್ಯಾಗೇರಿ, ಪಾರೀಶ ತೇರದಾಳೆ, ಸುನಿಲ ಸಾಣೆಕೊಪ್ಪ, ಜಯಶ್ರೀ ಸೂರ್ಯವಂಶಿ ಅವರುಗಳು ಮಾತನಾಡಿದರು. ಗುರುರಾಜ ಹುಳೇರ ಸೇರಿದಂತೆ ನೂರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.