ಲೋಕದರ್ಶನ ವರದಿ
ರೋಣ 25: ಕಳಸ ಬಂಡೂರಿ ಮತ್ತು ಮಹದಾಯಿ ಯೋಜನೆಯನ್ನು ಶೀಘ್ರವೇ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ , ಕನ್ನಡ ರಕ್ಷಣಾ ಸೇನೆ. ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಮಂಗಳವಾರ ಪಟ್ಟಣದ ಪ್ರಮುಖ ರಸ್ತೆಗಳ ಮುಖಾಂತರ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಳಸ ಬಂಡೂರಿ ಯೋಜನೆಯ ಹೋರಾಟ ಸಮಿತಿ ಮುಖಂಡ ವಿಜಯ ಕುಲಕಣರ್ಿ ಮಾತನಾಡಿ ಉತ್ತರ ಕರ್ನಾಟಕ ರೈತರು ಕಳೆದ ಹಳವು ವರ್ಷಗಳಿಂದ ಸತತ ಬರಗಾಲವನ್ನು ಎದರಿಸುತ್ತ ಬರುತ್ತಿದಾರೆ. ಈ ಬಾರಿ ಅತಿಯಾದ ಮಳೆ ಯಾಗಿದರಿಂದ ರೈತರಿಗೆ ಸಮರ್ಪಕವಾದ ಬೆಳೆಗಳು ದೋರೆಯುತ್ತಿಲ್ಲ. ಕಳಸ ಬಂಡೂರಿ ಯೋಜನೆಯು ಈ ಬಾಗದ ಮಹತ್ತದ ಯೋಜನೆಯಾಗಿದ್ದು ಈ ಯೋಜನೆಯು ಜಾರಿಯದರೆ ರೈತರಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಈ ಕಳಸ ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಮ್ಮತಿ ಸೂಚಿಸಿತು. ಆದರೆ ಕೇಂದ್ರ ಸಕರ್ಾರವು ಗೋವ ಮುಖ್ಯಮಂತ್ರಿ ಹಾಗೂ ಇಬ್ಬರು ಸಂಸದರ ಮಾತಿಗೆ ಮಣೆಹಾಕಿ ಯೋಜನೆಗೆ ತಡೆಯೊಡಿದೆ.
ಕೇಂದ್ರದಲ್ಲಿ ಸರ್ಕಾರದವು ಕರ್ನಾಟಕಕ್ಕೆ ಮಹದಾಯಿ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಾ ಬಂದಿದೆ ಎಂದು ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯದ ರೈತ ಸಂಘ ಘಟಕದ ಮಹಿಳಾ ಉಪಾಧ್ಯಕ್ಷೆ ಲೀಲಾ ಚಿತ್ರಗಾರ ಮಾತನಾಡಿ ಸದ್ಯ ರಾಜ್ಯ ಹಾಗೂ ಕೆಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ್ಯೂ ಸಹ ಮಹದಾಯಿ ಯೋಜನೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದ ಹಿಂದೆಟು ಹಾಕುತ್ತಿದೆ. ಕರ್ನಾಟಕದಿಂದ ಆಯ್ಕೆಗೊಂಡ ಸಂಸದರು ಸಹ ಮಹದಾಯಿ ಯೋಜನೆಯ ಬಗ್ಗೆ ಮಾತನಾಡಲು ಮುಂದಾಗುತ್ತಿಲ್ಲ.ರಾಜಕಾರಣಿಗಳ ಇಚ್ಚಾಶಕ್ತಿ ಕೋರತೆಯಿಂದ ಮಹತ್ತರ ಯೋಜನೆಯು ನೆನಗುದಿಗೆ ಬಿದ್ದಿದೆ. ರೈತರಿಗೆ ನೀರು ಇಲ್ಲದೆ ಬೆಳೆಗಳನ್ನು ಹೇಗೆ ಬೆಳಯಲು ಸಾದ್ಯ ರೈತರಿಗೆ ಸಮರ್ಪಕವಾಗಿ ನೀರು ಒದಗಿಸುವಲ್ಲಿ ಸರ್ಕಾರ ಮುಂದಾಗವೇಕು. ಇಲ್ಲವಾದರೆ ಬ್ಯಾಂಕಿನಲ್ಲಿ ಪಡೆದ ಬೆಳಸಾಲವನ್ನು ತಿರಿಸಬಾರದು ಸರ್ಕಾರವೆ ಸಾಲ ಮನಾ ಮಾಡಬೇಕು ಎಂದು ಒತ್ತಾಯಿಸಿದರು.
ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎಫ್.ವಾಯ್.ಕುರಿ ಕನ್ನಡ ರಕ್ಷಣಾ ಸೇನೆಯ ಜಿಲ್ಲಾಅಧ್ಯಕ್ಷ ಹನಮಂತ ಅಬಿಗೇರಿ ನಿಂಗಪ್ಪ ಹೋನ್ನಾಪೂರ ಉಮೇಶ ಮೇಟಿ ಶಿರಾಜ್ ಹೊಸಮನಿ ನಾಗವ್ವ ಕುರಿ ಶಾಂತವ ಮೇಟಿ ಶಂಕರಮ್ಮ ಹೂಗಾರ ವಿಜಯ ಲಕ್ಷ್ಮೀ ಹೀರೆಲಿಂಗನಗೌಡರ ವಿ ಎಮ್ ಬಿರಕ್ತಮಠ ಸವಿತ್ರಾ ಕುರಿ ಸೇರಿದಂತೆ ಮತ್ತಿತರರು ಇದ್ದರು.