ಸಂಕೇಶ್ವರ : ಪತ್ರಿಬನದ ಬಳಿ ಸ್ಮಶಾನ ಜಾಗಕ್ಕೆ ವಿರೋಧ ವ್ಯಕ್ತಪಡಿಸಿರುವ ಡಾ. ಜೈಪ್ರಕಾಶ ಕರಜಗಿ ಅವರ ಮನೆ ಎದುರು ಶವ ಇಟ್ಟು ಪ್ರತಿಭಟನೆ ಮಾಡುವದಾಗಿ ಸಂಕೇಶ್ವರದ ವೀರಶೈವ ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಸಂಕೇಶ್ವರ ಪಟ್ಟಣದಲ್ಲಿ ಈ ಕುರಿತು ಹೇಳಿಕೆ ನೀಡಿರುವ ವೀರಶೈವ ಸಮಾಜದ ಮುಖಂಡರು, ನಮ್ಮ ವೀರಶೈವ ಸಮಾಜಕ್ಕೆ ಸ್ಮಶಾನ ಜಾಗೆ ಇಲ್ಲದಿರುವಾಗ ನಾವೆಲ್ಲರೂ ಸೇರಿ ಸ್ಮಶಾನ ಭೂಮಿ ಜಾಗೆ ಪಡೆಯುವ ಕಾರ್ಯಕ್ಕೆ ಮಾಡುತ್ತಿದ್ದು, ಅದಕ್ಕೆ ಡಾ. ಜೈಪ್ರಕಾಶ ಕರಜಗಿ ಅವರು ವಿರೋಧ ವ್ಯಕ್ತ ಮಾಡಿದ್ದಾರೆ.
ನಮ್ಮ ಸಮಾಜಕ್ಕೆ ಸದ್ಯ ಸ್ಮಶಾನ ಇಲ್ಲದಂತಾಗಿದ್ದು, ನಾವು ಸಮಾಜಕ್ಕೆ ಪತ್ರಿಬನದ ಬಳಿ ಸ್ಮಶಾನ ಭೂಮಿ ಪಡೆಯುವ ಕೆಲಸಕ್ಕೆ ಡಾ. ಜೈಪ್ರಕಾಶ ಕರಜಗಿ ಅವರು ವಿರೋಧ ಮಾಡಿರುವ ನಿಟ್ಟಿನಲ್ಲಿ ವೀರಶೈವ ಸಮಾಜದವರು ಯಾರಾದರು ತೀರಿಕೊಂಡಾಗ ಡಾ. ಕರಜಗಿ ಅವರ ಮನೆ ಎದುರು ಶವ ಇಟ್ಟು ಪ್ರತಿಭಟನೆ ಮಾಡಲಾಗುವದು ಎಂದು ವೀರಶೈವ ಸಮಾಜದ ಮುಖಂಡರಾದ ಬಸನಗೌಡಾ ಪಾಟೀಲ, ಸುನೀಲ್ ಪರ್ವರಾವ್, ನಂದು ಮುಡಸಿ, ಸಂತೋಷ ಮುಡಸಿ, ಚೇತನ ಬಸ್ಸೇಟ್ಟಿ, ಚಿದಾನಂದ ಕರ್ದನ್ನವರ, ಸಾಗರ ಜಕಾತೆ ತಿಳಿಸಿದ್ದಾರೆ.