ವೇಶ್ಯಾವಾಟಿಕೆ ಜಾಲದಿಂದ ಬಾಲಕಿಯ ರಕ್ಷಣೆ

ಸಿಲಿಗುರಿ, ಅ 17:       ವೇಶ್ಯಾವಾಟಿಕಾ ಜಾಲಕ್ಕೆ ಬಲಿಯಾಗುತ್ತಿದ್ದ ಮೇಘಾಲಯ ಮೂಲದ ಹದಿಹರಯದ ಬಾಲಕಿಯನ್ನು ಉತ್ತರ ಬಂಗಾಳದ ಬ್ರಾಥೆಲ್ ನಲ್ಲಿ ಸರ್ಕಾರೇತರ ಸಂಘಟನೆಯೊಂದು ರಕ್ಷಿಸಿದೆ.  ಈಕೆಯನ್ನು ತುರಾ ಗುಡ್ಡಗಾಡು ಪ್ರದೇಶದಿಂದ ಅಪಹರಿಸಲಾಗಿತ್ತು. "ಮೇಘಾಲಯದ ತುರಾ ಗುಡ್ಡಗಾಡು ಪ್ರದೇಶದಿಂದ ಹದಿನೇಳು ವರ್ಷ ವಯಸ್ಸಿನ ಬಾಲಕಿಯನ್ನು ಅಪಹರಿಸಲಾಗಿತ್ತು. ಈ ಕೃತ್ಯದಲ್ಲಿ ಓರ್ವ ಮಹಿಳೆ, ಆಕೆಯ ಪತಿ ಹಾಗೂ ಸೋದರ ಭಾಗಿಯಾಗಿದ್ದರು.  ಇದೀಗ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ" ಎಂದು ಸರ್ಕಾರೇತರ ಸಂಘಟನೆಯ ಪ್ರಕಟಣೆ ತಿಳಿಸಿದೆ. ಅಪಹೃತ ಬಾಲಕಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗಿತ್ತು.  ವೇಶ್ಯಾವಾಟಿಕೆ ದಂಧೆಯಲ್ಲಿ ಸಾಕಷ್ಟು ಯುವತಿಯನ್ನು ಬಳಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಉತ್ತರ ಬಂಗಾಳ ಪೊಲೀಸರು ತಿಳಿಸಿದ್ದಾರೆ. "ಮಾಹಿತಿದಾರರ ಒಂದು ಸುಳಿವು ಮತ್ತು ಪೊಲೀಸರು ನೀಡಿದ ಸಂಪೂರ್ಣ ಸಹಕಾರದಿಂದ ಬಾಲಕಿಯನ್ನು ರಕ್ಷಿಸಲಾಯಿತು  ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಸಂತ್ರಸ್ತ ಬಾಲಕಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸರ್ಕಾರೇತರ ಸಂಘಟನೆ ಮಾಹಿತಿ ನೀಡಿದೆ.