ಪರಿಸರ ರಕ್ಷಣೆ ಜನತೆಯ ಆದ್ಯ ಕರ್ತವ್ಯ: ಸುಭಾಷ ಆಡಿ

ಸ್ವಚ್ಛ ಸಂಕೇಶ್ವರ ಅಭಿಯಾನ: ದೀಪ ಪ್ರಜ್ವಲಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ

ವರದಿ: ಎಂ.ಬಿ. ಘಸ್ತಿ  

ಸಂಕೇಶ್ವರ 25: ಪರಿಸರ ರಕ್ಷಣೆ ಜನತೆಯ ಆದ್ಯ ಕರ್ತವ್ಯ, ಜನಸಾಮಾನ್ಯರ ಮನಸ್ಸು ಪರಿವರ್ತನೆಗೊಂಡರೆ ಮಾತ್ರ ಪರಿಸರವನ್ನು ಕಾಪಾಡಲು ಸಾಧ್ಯವೆಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ ಆಡಿ ಹೇಳಿದರು. 

ಅವರು ಸ್ವಚ್ಛ ಸಂಕೇಶ್ವರ ಅಭಿಯಾನ 2 ನೇ ಹಂತದ ಅಭಿಯಾನದಲ್ಲಿ ಮೇನದಬತ್ತಿಯಿಂದ ದೀಪ ಪ್ರಜ್ವಲಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡುತ್ತಾ ಮಧ್ಯಪ್ರದೇಶದ ಇಂದೋರ ನಗರದಲ್ಲಿ ಕಸದ ತ್ಯಾಜ್ಯದಿಂದ ತಯಾರಿಸಿದ ಗ್ಯಾಸ ಉತ್ಪಾದನೆ ಮಾಡಿ ಅಲ್ಲಿಯ ಬಸ್ಸುಗಳಿಗೆ ಪ್ರಯೋಗ ಮಾಡಿ ನೋಡಲಾಗಿದೆ, ಅಲ್ಲಿಯ ಬಸ್ಸುಗಳು ಓಡಾಡುತ್ತಿವೆ ಇದರಿಂದ ಪೆಟ್ರೋಲ್ ಡಿಸೇಲ್ ಇವುಗಳನ್ನು ಬಸ್ಸುಗಳಲ್ಲಿ ಉಪಯೋಗ ಮಾಡುವುದರಿಂದ ಜನತೆಯ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವಾಗುತ್ತಿತ್ತೆಂದು ಹೇಳಿದರಲ್ಲದೇ ಈ ಒಂದು ಅಭಿಯಾನದಿಂದ ಅಲ್ಲಿಯ ಪರಿಸರ ಮಾಲಿನ್ಯದಿಂದ ಸ್ವಚ್ಛ ಪರಿಸರ ನಗರವಾಗಿದೆ ಎಂದು ಹೇಳಿದರು.  

ಕೇಮಿಕಲ್ಸ ತರಕಾರಿಯನ್ನು ಸೇವಿಸಿ ಜನರು ತಮ್ಮ ಆರೋಗ್ಯಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಸಮಾರಂಭದಲ್ಲಿ ಮಾಜಿ ಸಚಿವ ಎ.ಬಿ. ಪಾಟೀಲರು ತಮ್ಮ ಭಾಷಣದಲ್ಲಿ ವಿಷಾದ ವ್ಯಕ್ತಪಡಿಸಿದರಲ್ಲದೇ ಮುಂದುವರೆದು ಅವರು ಮಾತನಾಡುತ್ತಾ ಜನತೆ ತಮ್ಮ ಕರ್ತವ್ಯಗಳನ್ನು ಮರೆಯುತ್ತಿದ್ದಾರೆ ಹಿರಣ್ಯಕೇಶೀ ಸಕ್ಕರೆ ಕಾರ್ಖಾನೆಯ ಚಿಲುಮೆಯಿಂದ ಕಬ್ಬಿನ ಸಿಪ್ಪೆಯಿಂದ ತಯಾರಾದ ಧೂಳೀನ ಕಣಗಳಿಂದ ಜನರಿಗೆ ಕಣ್ಣಿಗೆ ಸಾಕಷ್ಟು ನೋವುಗಳು ಸಂಭವಿಸಿ ಹಿರಣ್ಯಕೇಶಿ ನದಿಗೆ ಕಾರ್ಖಾನೆಯಿಂದ ಮೋಲ್ಯಾಸಿಸ ನೀರನ್ನು ಬಿಡುವುದರಿಂದ ದನಕರುಗಳು ಸಾವನ್ನಪ್ಪುವ ಸಂಭವವಿದ್ದು ಮತ್ತು ಪ್ಲಾಸ್ಟಿಕ್ ಇವುಗಳನ್ನು ಸಹ ದನಗಳು ನುಂಗಿ ಪ್ರಾಣ ಬಿಡುವ ಸಂಭವವಿರುತ್ತದೆ, ದನಕರುಗಳನ್ನು ಸಾಕುವ ಮಾಲೀಕರು ಜಾಗೃತೆ ವಹಿಸಬೇಕೆಂದು ಎ.ಬಿ. ಪಾಟೀಲರು ಜನತೆಯಲ್ಲಿ ಕರೆ ನೀಡಿದರು. 

ನುರಿತ ಕ್ಯಾನ್ಸರ ತಜ್ಞ ವೈದ್ಯರು ಮಹಾತ್ಮಾ ಗಾಂಧಿ ಕ್ಯಾನ್ಸರ ಆಸ್ಪತ್ರೆಯ ಡಾ: ಶರದ ದೇಸಾಯಿಯವರು ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡಿ ಮೊದಲು ತಮ್ಮ-ತಮ್ಮ ಮನೆಗಳನ್ನು ಮತ್ತು ದಿನಪ್ರತಿ ತಮ್ಮ ಮನೆಗಳಲ್ಲಿರುವ ಶೌಚಾಲಯಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಮತ್ತು ಸಂಕೇಶ್ವರ ಪಟ್ಟಣವು ಸ್ವಚ್ಛತೆಯಿಂದ ಇದ್ದರೇ ಇಲ್ಲಿ ಯಾವು ಬೇಕಾದ ಉದ್ದಿಮೆಗಳು ಬರಬಹುದೆಂದು ಎಂದರು.  

ಜನತೆಯಲ್ಲಿ ಸ್ವಚ್ಛತೆ ಅಭಿಯಾನದ ಬಗ್ಗೆ ಅರಿವು ಮೂಡಿಸುವುದು ಕರ್ತವ್ಯವಾದರೆ ರಸಾಯನದಿಂದ ರೈತರನ್ನು ಮುಕ್ತಗೊಳಿಸಬೇಕು. ಸಾಂಕೇತಿಕ ಪರಿಕಲ್ಪನೆ ಜನಮಾನಸದಲ್ಲಿ ಅರಿವಿನ ಕೊರತೆ ಇದೆ ಎಂದು ಸ್ವಚ್ಛ ಅಭಿಯಾನದ ಕಾರ್ಯಕ್ರಮದಲ್ಲಿ ಸಿದ್ಧ ಸಂಸ್ಥಾನ ಮಠ ನಿಡಸೋಶಿ ಮಠದ ಉತ್ತರಾಧಿಕಾರಿಗಳಾದ ನಿಜಲಿಂಗೇಶ್ವರ ಸ್ವಾಮಿಗಳು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದದಲ್ಲದೇ ಜನತೆ ಇನ್ನೂ ಕಸದ ವಿಂಗಡಣೆಯನ್ನು ಸರಿಯಾಗಿ ಮಾಡುತ್ತಿಲ್ಲವೆಂದು ಖೇದ ವ್ಯಕ್ತಪಡಿಸಿದರು. 

ಈ ಸ್ವಚ್ಛತೆ ಅಭಿಯಾನದ ಸಮಾರಂಭದಲ್ಲಿ  ಸ್ವಚ್ಛ ಸಂಕೇಶ್ವರ ಫೌಂಡೇಶನ ಅಧ್ಯಕ್ಷರಾದ ಡಾ. ರಮೇಶ ದೊಡಭಂಗಿ ಇವರು ಸ್ವಾಗತ ಹಾಗೂ ಪರಿಚಯ ಭಾಷಣ ಮಾಡಿದರು, ಪುಪುಷ್ಪಾರ್ಪಣೆ, ಪ್ರಸ್ತಾವನೆಯನ್ನು ಡಾ. ಗುರುಪಾದ ಮರಿಗುದ್ದಿಯವರು ಮಾಡಿದರು, ಸ್ವಚ್ಛ ಅಭಿಯಾನದ ಉಪಾಧ್ಯಕ್ಷರಾದ ಸುನೀಲ ಅಣ್ಣಾಸಾಹೇಬ ಪರ್ವತರಾವ, ಪುರಸಭೆಯ ಅಧ್ಯಕ್ಷೆ ಸೀಮಾ ಬಂಡು ಹತನೂರೆ, ಪುರಸಭೆಯ ಮಾಜಿ ಅಧ್ಯಕ್ಷ ಗಜಾನನ ಕ್ವಳ್ಳಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು, ನಾಸೀರ ಮೋಮಿನ, ಸಂತೋಷ ನೇಸರಿ, ಪ್ರಿಯಾಂಕಾ ಗಡಕರಿ, ಡಾ. ವಿನೋದ ಗಾಯಕವಾಡ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಾ. ವಿಜಯಲಕ್ಷ್ಮೀ ಬೆಳವಿ, ರೋಹನ ನೇಸರಿ, ಪುರಸಭೆ ಸದಸ್ಯ ನಂದು ಮುಡಸಿ ಮೊದಲಾದ ಗಣ್ಯ ವ್ಯಕ್ತಿಗಳು ಸಭೆಯಲ್ಲಿ ಭಾಗವಹಿಸಿದ್ದರು, ಕೊನೆಗೆ ಪ್ರೋ. ಡಿ.ಡಿ. ಕುಲಕರ್ಣಿಯವರಿಂದ ಆಭಾರ ಮನ್ನಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.