ಲೋಕದರ್ಶನ ವರದಿ
ಶೇಡಬಾಳ 18: ಕಳೆದ ತಿಂಗಳ 7 ರಂದು ಶಿರಗುಪ್ಪಿಯಲ್ಲಿ ನಡೆದ ರೈತ ಬ್ರಹತ್ ಸಮಾವೇಶದಲ್ಲಿ ಕೈಗೊಂಡ ಠರಾವಿನಂತೆ ರಾಜ್ಯದ ಎಲ್ಲ ಕಾಖರ್ಾನೆಗಳು ಒಂದೇ ಕಂತಿನಲ್ಲಿ ರೂ. 2700 ಬಿಲ್ ನೀಡುವ ಭರವಸೆಯೊಂದಿಗೆ ಕಾಖರ್ಾನೆಯ ಪ್ರಸಕ್ತ ಹಂಗಾಮನ್ನು ಪ್ರಾರಂಭಿಸಿದ್ದು, ಕಾಖರ್ಾನೆಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಕೊಟ್ಟ ಭರವಸೆಯಂತೆ ನಡೆದುಕೊಂಡು ರೈತರ ಹಿತ ಕಾಪಾಡಬೇಕು ಎಂದು ರೈತ ಮುಖಂಡರಾದ ಸುರೇಶ ಚೌಗಲೆ ಕಾಖರ್ಾನೆಗಳಿಗೆ ಆಗ್ರಹಿಸಿದರು.
ಶಿರಗುಪ್ಪಿಯಲ್ಲಿ ಇತ್ತಿಚಿಗೆ ನಡೆದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಕಳೆದ ತಿಂಗಳ ನಡೆದ ರ್ಯಾಲಿಯ ನಡುವಳಿಗಳಂತೆ ಎಲ್ಲ ಕಾಖರ್ಾನೆಗಳು ರೂ. 2700/- ರಂತೆ ಒಂದೇ ಕಂತಿನಲ್ಲಿ ಬಿಲ್ ನೀಡಲು ಒಪ್ಪಿಕೊಂಡಿವೆ. ಈಗ ಒಂದು ತಿಂಗಳು ಕಳೆದರೂ ಬಿಲ್ ಪಾವತಿಸಿಲ್ಲ. ಶುಗರ್ ಕೇನ್ ಕಂಟ್ರೋಲ್ ಎಕ್ಟ್ 1966 ರ ಪ್ರಕಾರ ಕಾಖರ್ಾನೆಗಳು ಕಬ್ಬು ನುರಿಸಿದ 14 ದಿನಗಳ ಒಳಗಾಗಿ ಬಿಲ್ ಪಾವತಿಸಬೇಕು.
ಇಲ್ಲದಿದ್ದಲ್ಲಿ ವಿಳಂಬಕ್ಕೆ ವಾಷರ್ಿಕ 15% ರಂತೆ ಬಡ್ಡಿ ನೀಡಬೇಕಾಗುತ್ತದೆ. ಅದರಂತೆ ಕೂಡಲೇ ಎಲ್ಲ ಕಾಖರ್ಾನೆಗಳು ರೈತರ ಬಿಲ್ ನೀಡಬೇಕು. ತಮ್ಮ ಕಾರ್ಯವ್ಯಾಪ್ತಿಯ ಕಬ್ಬಿಗೆ ಮೊದಲು ಅಧ್ಯತೆ ನೀಡಿ ನಂತರ ಉಳಿದ ಕಡೆಯಿಂದ ಕಬ್ಬು ಪಡೆಯಬೇಕು.
ನೆರೆಯಿಂದ ಹಾನಿಗೊಳಗಾದ ಕಬ್ಬನ್ನು ಆಧ್ಯತೆ ಮೇರೆಗೆ ನುರಿಸಬೇಕು. ಇದಕ್ಕೆ ತಪ್ಪಿದಲ್ಲಿ ನಾವು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಸಕ್ಕರೆ ಸಚಿವರಿಗೆ ಮನವಿ ನೀಡಿ ಅವರಿಂದ ಸ್ಪಂದನೆ ಬರೆದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಮುಖಂಡ ವಿಜಯ ಅಕಿವಾಟೆ ಮಾತನಾಡಿ ಮಹಾರಾಷ್ಟ್ರದಲ್ಲಿಯ ಎಲ್ಲ ಕಾಖರ್ಾನೆಗಳು ಒಂದೇ ಕಂತಿನಲ್ಲಿ ಬಿಲ್ ನೀಡುತ್ತಿದ್ದು, ಅಲ್ಲದೇ ನೆರೆ ಪೀಡಿತ ಪ್ರದೇಶಗಳ ಕಬ್ಬಿಗೂ ಅಧ್ಯತೆ ನೀಡುತ್ತಿದೆ.
ನಮ್ಮಲ್ಲಿ ನೆರೆ ಪೀಡಿತ ಕಬ್ಬನ್ನು ಕಟಾವು ಮಾಡಿ ಸಾಗಿಸಲು ಕಾಖರ್ಾನೆಗಳು ಹಿಂದೆಟು ಹಾಕುತ್ತಿದ್ದು, ಇದು ಸರಿಯಾದ ಕ್ರಮವಲ್ಲ. ಕಾಖರ್ಾನೆಯಲ್ಲಿ ನೊಂದಣಿಯಾದ ಕಬ್ಬನ್ನು ಅದು ಚನ್ನಾಗಿರಲಿ ಅಥವಾ ನೆರೆಯಿಂದ ಹಾನಿಯಾಗಿರಲಿ ಅದನ್ನು ಕಾಖರ್ಾನೆಗಳು ಕಟಾವು ಮಾಡಬೇಕು ಎಂದರು.
ಸಭೆಯಲ್ಲಿ ಸುರೇಶ ಚೌಗಲಾ, ಶಶಿಕಾಂತ ಜೋಶಿ, ವಿಜಯ ಅಕಿವಾಟೆ, ವರ್ಧಮಾನ ಅಕಿವಾಟೆ, ಅಪ್ಪಾಸಾಬ ಕುರುಂದವಾಡೆ, ಸುಭಾಷ ಮೊನೆ, ರಾಜೇಂದ್ರ ಚೌಗಲೆ, ಅಣ್ಣಾಸಾಬ ಸರಡೆ, ಆನಂದ ಅರಗೆ, ರಾಜು ಪಾಟೀಲ, ಉದಯ ದೇಸಾಯಿ, ಚಿದಾನಂದ ಪಾಟೀಲ, ಭೀಮು ಭೋಲೆ, ಅಣ್ಣಾಸಾಬ ಅವಟಿ, ರಾಜು ಕರವ ಮುಂತಾದ ರೈತ ಮುಖಂಡರು ಉಪಸ್ಥಿತರಿದ್ದರು.