ಲೋಕದರ್ಶನ ವರದಿ
ಬೆಳಗಾವಿ, 4: ಕೆ. ಎಲ್. ಎಸ್. ಗೋಗಟೆ ತಾಂತ್ರಿಕ ಮಹಾವಿದ್ಯಾಲಯ(ಜಿ ಐ ಟಿ), ಯಲ್ಲಿ ದಿನಾಂಕ 06 ಮೇ 2019 ರಂದು ವಿದ್ಯಾರ್ಥಿ ಗಳು ತಯಾರಿಸಿದ ಪ್ರಾಜೆಕ್ಟ್ ಗಳ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. ಈ ಪ್ರದರ್ಶನದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಹೆಸರಾಂತ ಉದ್ಯಮಿ ಬೆಳಗಾವಿಯ ಫೆರೋಕಾಸ್ಟ್ ಪ್ರೈ. ಲೀ. ಕಂಪನಿಯ ಎಂ. ಡಿ. ಆಗಿರುವ ಶ್ರೀ. ಸಚೀನ ಸಬ್ನಿಸ್ ಅವರು ಆಗಮಿಸಲಿದ್ದಾರೆ. ಮೇ 06 ರಂದು ಬೆಳಿಗ್ಗೆ 10:00 ಕ್ಕೆ ಪ್ರದರ್ಶನದ ಉದ್ಘಾಟನೆ ನಡೆಯಲಿದೆ.
ಈ ಪ್ರದರ್ಶನದಲ್ಲಿ ಸಾಮಾಜಿಕವಾಗಿ ಪರಿಣಾಮ ಬೀರುವ ಮತ್ತು ಸಂಶೋಧನಕ್ಕೆ ಮುನ್ನಡಿಯಾಗುವ ಸುಮಾರು 200 ಕ್ಕಿಂತ ಹೆಚ್ಚು ಪ್ರಾಜೆಕ್ಟ್ ಗಳನ್ನೂ ವಿದ್ಯಾಥರ್ಿಗಳು ಪ್ರದಶರ್ಿಸಲಿದ್ದಾರೆ. ಇದರಲ್ಲಿ ರಾಷ್ಟ್ರ ಮಟ್ಟದ ಪ್ರಾಜೆಕ್ಟ್ ವಿನ್ಯಾಸ ಮತ್ತು ರಚನೆ ಸ್ಪಧರ್ೆಯಲ್ಲಿ ಪ್ರಶಸ್ತಿ ಪಡೆದ, ಸ್ಮಾಟರ್್ ಇಂಡಿಯಾ ಹ್ಯಾಕಥಾನ್ -18 ರಲ್ಲಿ ಪ್ರಥಮ ಪ್ರಶಸ್ತಿ ಪಡೆದ ಮತ್ತು ಇ -ಯಂತ್ರ ಎಂಬ ರಾಷ್ಟ್ರಮಟ್ಟದ ರೊಬೊಟಿಕ್ಸ್ ಸ್ಪಧರ್ೆಯಲ್ಲಿ ಪ್ರಶಸ್ತಿ ಪಡೆದ ಪ್ರಾಜೆಕ್ಟ್ ಗಳನ್ನೂ ಪ್ರದರ್ಶನ ಮಾಡಲಿದ್ದಾರೆ.
ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು ಪಿ .ಯು.ಸಿ ಓದುತ್ತಿರುವ ಮತ್ತು ಮುಗಿಸಿದ ವಿದ್ಯಾರ್ಥಿಗಳಿಗೆ, ಡಿಪ್ಲೋಮಾ ವಿದ್ಯಾಥರ್ಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಮತ್ತು ಔದ್ಯೋಗಿಕ ರಂಗದವರಿಗೆ ಮುಕ್ತ ಅವಕಾಶವಿದ್ದು ಮಹಾವಿದ್ಯಾಲಯದ ಆಯೋಜಕ ತಂಡವು ಅವರನ್ನು ಪ್ರೀತಿಯಿಂದ ಆಹ್ವಾನಿಸಿದೆ ಮತ್ತು ಇದರ ಜೊತೆಗೆ ಮಹಾವಿದ್ಯಾಲಯದ ಸೌಲಭ್ಯಗಳ ಬಗ್ಗೆ, ಕಲಿಕೆಯ ವಿಧಾನದ ಬಗ್ಗೆಯೂ ತಿಳಿದಿಕೊಳ್ಳಲು ಅವಕಾಶವಿರುತ್ತದೆ ಆದ್ದರಿಂದ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪ್ರದರ್ಶನ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 12:30 ರ ವರೆಗೆ ಇರುತ್ತದೆ.