ಲೋಕದರ್ಶನ ವರದಿ
ಕಕ್ಕೇರಿ 06: ಅಕ್ಟೋಬರ್ 7 ರಿಂದ ಜರುಗುವ ಭಿಷ್ಟಾದೇವಿ ಜಾತ್ರೆಯಲ್ಲಿ ಭಕ್ತರು ಯಾವುದೇ ಕಾರಣಕ್ಕೂ ಪ್ರಾಣಿ ಬಲಿ ನೀಡಬಾರದು. ಪ್ರಾಣಿ ಬಲಿ ನೀಡುವುದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಾನಾಪೂರ ಸಿಪಿಐ ಮೊತಿಲಾಲ್ ಪವಾರ್ ಹೇಳಿದರು. ದೇವಸ್ಥಾನದಲ್ಲಿ ಜರುಗಿದ ಶಾಂತಿ ಪಾಲನೆ ಹಾಗೂ ಪ್ರಾಣಿ ಬಲಿ ನಿಷೇಧ ಸಭೆಯಲ್ಲಿ ಅವರು ಮಾತನಾಡಿ, ಜಾತ್ರೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಪ್ರತಿಯೊಬ್ಬರೂ ನೋಡಿಕೊಳ್ಳಬೇಕು.ಅಂಗಡಿ ಹಾಕುವವರು ರಾಜ್ಯ ಹೆದ್ದಾರಿಯಿಂದ 10 ಅಡಿ ಬಿಟ್ಟು ಕೊಡಬೇಕು ಎಂದು ಹೇಳಿದರು.
ನಂದಗಡ ಪೋಲಿಸ್ ಠಾಣೆಯ ಪಿಎಸ್ಐ ಸುಮಾ ನಾಯಕ ಜಾತ್ರೆ ಹಿನ್ನೆಲೆಯಲ್ಲಿ ಅಕ್ಟೋ ಬರ್ 7 ರಿಂದ 14 ರ ವರೆಗೆ ತಾಳಗುಪ್ಪ-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಸಾಗುವ ಭಾರಿ ವಾಹನಗಳನ್ನು ನಿಷೇಧಿಸಲಾಗಿದೆ.ಯಲ್ಲಾಪೂರ ದಿಂದ ಬೆಳಗಾವಿ ಕಡೆಗೆ ಬರುವ ವಾಹನಗಳು ರಾಮನಗರ ಮತ್ತು ಬೆಳಗಾವಿ ಯಿಂದ ಬರುವ ವಾಹನಗಳು ಬೀಡಿ ಮಾರ್ಗವಾಗಿ ಕಿತ್ತೂರಿಗೆ ಹೋಗಬೇಕು ಎಂದು ಹೇಳಿದರು. ಬಹುಸಂಖ್ಯೆಯಲ್ಲಿ ಜಾತ್ರಾ ಕಮಿಟಿಯ ಪದಾಧಿಕಾರಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.