ಕನರ್ಾಟಕ ವಿವಿ ನೂತನ ಕುಲಸಚಿವರಾಗಿ ಪ್ರೊ. ವಿಜಯಲಕ್ಷ್ಮೀ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ

ಧಾರವಾಡ03 : ಕನರ್ಾಟಕ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಶನಿವಾರ ಮುಂಜಾನೆ ಕವಿವಿ ಸಮಾಜ ವಿಜ್ಞಾನ ನಿಖಾಯದ ಡೀನ್ ಹಾಗೂ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ವಿಜಯಲಕ್ಷ್ಮೀ ಎ ಅಮ್ಮಿನಭಾವಿ  ಅಧಿಕಾರ ವಹಿಸಿಕೊಂಡರು. 

ಈ ಮೊದಲು ಕುಲಸಚಿವರಾಗಿದ್ದ ಪ್ರೊ. ಕೆ.ಎಂ. ಹೊಸಮನಿ ಅವರನ್ನು ಬದಲಾಯಿಸಿ ರಾಜ್ಯ ಸರಕಾರ ಹೊರಡಿಸಿದ ಆದೇಶದನ್ವಯ ಅವರನ್ನು ನೇಮಕಮಾಡಲಾಗಿದೆ.  ಪ್ರೊ. ವಿಜಯಲಕ್ಷ್ಮೀ ಎ. ಅಮ್ಮಿನಭಾವಿ ಅವರು ಕಳೆದ 30 ವರ್ಷಗಳಿಂದ ಮನಶಾಸ್ತ್ರವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ 13 ಜನ ವಿದ್ಯಾಥರ್ಿಗಳಿಗೆ ಪಿಎಚ್.ಡಿ ಮಾರ್ಗದರ್ಶನ ಮಾಡಿದ್ದಾರೆ. ಅಲ್ಲದೆ, ನಿಮ್ಹಾನ್ಸ್ನ ಕನರ್ಾಟಕ ರಾಜ್ಯದ ಏಡ್ಸ ನಿಯಂತ್ರಣ ಸೊಸೈಟಿಗೆ ಧಾರವಾಡ ವಿಭಾಗದ ತರಬೇತುದಾರರರಾಗಿ ಕೆಲಸ ನಿರ್ವಹಿಸಿದ್ದಾರೆ. 

150ಕ್ಕೂ ಹೆಚ್ಚು ರಾಷ್ಟ್ರೀಯ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಮಾಜ ವಿಜ್ಞಾನ ನಿಖಾಯದ ಡೀನರಾಗಿ 13 ವಿಭಾಗಗಳ ಮೇಲ್ವಿಚಾರಣೆ ಜೊತೆಗೆ ಪತ್ರಿಕೋದ್ಯಮವಿಭಾಗ , ಪ್ರಭಾರ ಮುಖ್ಯಸ್ಥರಾಗಿ ಹಾಗೂ ಸರ್. ಸಿದ್ದಪ್ಪ ಕಂಬಳಿ ಕಾನೂನು ಮಹವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಶೋಧನಾ ಜರ್ನಲ್ಗಳಲ್ಲಿ 56 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ. ಅಲ್ಲದೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಮತ್ತು ಪ್ರತಿಷ್ಠಿತ ಸಂಶೋಧನಾ ಜರ್ನಲ್ಗಳ ಸಂಪಾಕೀಯ ಮಂಡಳಿಗಳಲ್ಲಿ ಸಲಹೆಗಾರರಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.