ಗಂಗಾಜಲ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ

Procession of Utsava Murti of Goddess Gangajala Chaudeshwari

ಗಂಗಾಜಲ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ  

ರಾಣಿಬೆನ್ನೂರ 15:  ನಗರದ ಮೇಡ್ಲೇರಿ ರಸ್ತೆಯ ಗ್ರಾಮದೇವತೆ ಗಂಗಾಜಲ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯು ಸಹಸ್ರಾರು ಭಕ್ತರ, ಅಭಿಮಾನಿಗಳ ಮಧ್ಯ  ಸೋಮವಾರ ರಾತ್ರಿ 8 ಗಂಟೆಯಿಂದ ಮಂಗಳವಾರ ಬೆಳಗಿನ ಜಾವ 5 ಂಟೆಯವರೆಗೂ ಅದ್ದೂರಿಯಾಗಿ  ನೆರವೇರಿತು.  

   ಇಲ್ಲಿನ  ತಳವಾರ ಗಲ್ಲಿಯ ಮೂಲ ದೇವಸ್ಥಾನದಿಂದ ಹೊರಟ ಮೆರವಣಿಗೆಗೆ ಶಾಸಕ ಪ್ರಕಾಶ್ ಕೋಳಿವಾಡ್ ಚಾಲನೆ ನೀಡಿದರು.  ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ,  ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಸಮಿತಿ ಅಧ್ಯಕ್ಷ ಬಸವರಾಜ ನಾಯಕ, ಕಾರ್ಯದರ್ಶಿ ನಾರಾಯಣಪ್ಪ ಬಿಷ್ಟಣ್ಣನವರ, ಶಶಿಧರ ಬಸೇನಾಯ್ಕರ, ಶಾಂತಲಿಂಗಪ್ಪ ಅಣಜೇರ, ಕೆ. ಶಿವಲಿಂಗಪ್ಪ, ಎಸ್‌.ಎಸ್  ರಾಮಲಿಂಗಣ್ಣನವರ್ ಸೇರಿದಂತೆ  ಮತ್ತಿತರರು ಹಾಗೂ ಸವಿರಾರು ಭಕ್ತರು ಭಾಗವಹಿಸಿದ್ದರು. 

   ಗ್ರಾಮೀಣ ಸೊಗಡಿನ ಕೋಲಾಟ, ಕುದುರೆ ಕುಣಿತ, ಛಾಮರಸ,ಬಣ್ಣಬಣ್ಣದ ಸಿಡಿಮದ್ದು, ಕತ್ತಿ ವರಸೆ,  ಲೇಜೀಮ್, ಸಮಾಳ, ಮಹಿಳೆಯರ ಡೊಳ್ಳು ಕುಣಿತ,  ಸೇರಿದಂತೆ ಮತ್ತಿತರ ವಾಧ್ಯಮೇಳಗಳು ಮೆರವಣಿಗೆಗೆ ಸಾಥ ನೀಡಿದವು.  ಜೊತೆಗೆ ಡಿಜೆ ಸದ್ದಿಗೆ ಯುವ ಜನತೆ ಕುಣಿದು ಕುಪ್ಪಳಿಸಿದರು. 

    ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಮಂಗಳವಾರ ಬೆಳಗಿನ ಜಾವ ಮೆಡ್ಡೇರಿ ರಸ್ತೆಯಲ್ಲಿನ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯತು. ಜ.18ರವರೆಗೂ ದೇವಿಯ ಜಾತ್ರೋತ್ಸವ ನಡೆಯಲಿದೆ. 

ಫೋಟೊ15ಆರ್‌ಎನ್‌ಆರ್01ರಾಣಿಬೆನ್ನೂರ: ಸ್ಥಳೀಯ ಗ್ರಾಮದೇವತೆ ಶ್ರೀ ಗಂಗಾಜಲ ಚೌಡೇಶ್ವರಿ ದೇವಿಯ ಮೆರವಣಿಗೆಯು ಸಹಸ್ರಾರು ಭಕ್ತರ, ಅಭಿಮಾನಿಗಳ ಮಧ್ಯ  ಸೋಮವಾರ ರಾತ್ರಿ ಅದ್ದೂರಿಯಾಗಿ  ನೆರವೇರಿತು.