ಬಿಜೆಪಿ ನಾಯಕರಿಂದ ಸಿಎಎ ಪರ ಕಾರ್ಯಕ್ರಮ

ನವದೆಹಲಿ, ಡಿಸೆಂಬರ್ 21 ಹೊಸ ಪೌರತ್ವ ಕಾನೂನಿನ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದ ನಂತರ ಮುಜುಗರಕ್ಕೊಳಗಾಗಿರುವ ಆಡಳಿತಾರೂಢ ಬಿಜೆಪಿ ಸಭೆ -ಸಮಾರಂಭಗಳನ್ನು ನಡೆಸಿ ಕಾಯ್ದೆಯ ಸಕಾರಾತ್ಮಕ ಅಂಶಗಳನ್ನು ವಿವರಿಸಲು ಮುಂದಾಗಿದೆ.ಅಸ್ಸಾಂ ಹಾಗೂ ಇತರ ರಾಜ್ಯಗಳಲ್ಲಿ ಕಳೆದ ಎರಡು ವಾರಗಳಿಂದ ಇಂತಹ ಸಮಾರಂಭಗಳನ್ನು ಆಯೋಜಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಬಿಜೆಪಿ, ಅಸ್ಸಾಂ ಮತ್ತು ತಮಿಳುನಾಡು ಆಯೋಜಿಸಿರುವ ಸಿಎಎ ಪರ ಸಭೆಗಳಲ್ಲಿ ಭಾರಿ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಳ್ಳುತ್ತಿದ್ದಾರೆ ಎಂದು ಹಿರಿಯ ನಾಯಕ ಮತ್ತು ಸಂಸದ ಡಾ.ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.ಕೇಂದ್ರ ಸಚಿವ ಮತ್ತು ಅಸನ್ಸೋಲ್ ಸಂಸದ ಬಾಬುಲ್ ಸುಪ್ರಿಯೋ ಕೂಡ ಟ್ವೀಟ್ ಮಾಡಿ, "ಟಿಎಂಸಿ ಗೂಂಡಾಗಳ ಎಲ್ಲಾ ರಾಜಕೀಯ ಪಿತೂರಿಗಳನ್ನು ವಿಫಲಗೊಳಿಸುವ ಮೂಲಕ ಸಿಎಎ ಪರವಾಗಿ ಆಸನ್ಸೋಲ್‌ನಲ್ಲಿ ಜನಸಾಗರವೇ ಸೇರಿತ್ತು.  ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದು ಬರೆದಿದ್ದಾರೆ.ಅದೇ ರೀತಿ ಸಿಎಎ ಪರ ಕಾರ್ಯಕ್ರಮ ಶುಕ್ರವಾರ ಅಸ್ಸಾಂನ ನಲ್ಬರಿ ಎಂಬಲ್ಲಿಯೂ ನಡದಿದ್ದು, ಸುಮಾರು 30 ಸಾವಿರ ಜನರು ಭಾಗವಹಿಸಿದ್ದರು ಎಂದು ಬಿಜೆಪಿ ಹೇಳಿದೆ.ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸಂಸತ್‌ನಲ್ಲಿ ಈ ಮಸೂದೆ ಅಂಗೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಇಂತಹ ಬೃಹತ್ ಕಾರ್ಯಕ್ರಮ ನಡೆದಿದೆ.ಸಮಾವೇಶವನ್ನು ಉದ್ದೇಶಿಸಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ ಹಾಗೂ ಹಣಕಾಸು ಸಚಿವ ಹಿಮಾಂತ ಬಿಸ್ವಾ ಮತ್ತಿತರ ಗಣ್ಯರು ಮಾತನಾಡಿದ್ದಾರೆ.ರಾಜ್ಯದಲ್ಲಿ ಶಾಶ್ವತ ಶಾಂತಿ ಮತ್ತು ಸಹನ ಸ್ಥಿತಿ ನೆಲೆಸಲು ಜನರು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.ಈ ಮಧ್ಯೆ, ಕರ್ನಾಟಕದ ಬಿಜೆಪಿ ಸಂಸದ ಶೋಭಾ ಕರಂದ್ಲಾಜೆ  ಐ ಸಪೋರ್ಟ್‌ ಸಿಎಎ,ಎನ್‌ಆರ್‌ಸಿ ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದಾರೆ ಮತ್ತು ಸಿಎಎ ವಿರೋಧಿ ಪ್ರತಿಭಟನಕಾರರಲ್ಲಿ ಕಂಡುಬರುವ ತಪ್ಪು ಮಾಹಿತಿಯನ್ನು ಬಹಿರಂಗ ಪಡಿಸುವ ಯತ್ನ ನಡೆಸುತ್ತಿದ್ದಾರೆ.