ಲೋಕದರ್ಶನ ವರದಿ
ಘಟಪ್ರಭಾ 09: ಗೋಕಾಕ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಾಕಲಾಗಿದ್ದ ಬೆಂಗಳೂರು ಅರಮನೆ ವಿನ್ಯಾಸದ ಭವ್ಯವಾದ ವೇದಿಕೆಯ ಮೇಲೆ ಸತೀಶ ಜಾರಕಿಹೋಳಿ ಪೌಂಡೇಶನ್ ಇವರ ಆಶ್ರಯದಲ್ಲಿ ನಡೆದ ಸತೀಶ ಶುಗರ್ಸ ಅವಾಡ್ರ್ಸ 2019-20ನೇ ಸಾಲಿನ ತಾಲೂಕಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಭಾಷಣ ಸ್ಪರ್ದೇಯಲ್ಲಿ ರಾಜಾಪೂರ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ಪ್ರವೀಣ ಮ. ಹೊಸೂರ "ಭಾರತ ದರ್ಶನ" ಎಂಬ ವಿಷಯದ ಕುರಿತು ಭಾಷಣ ಮಾಡಿ ದ್ವಿತೀಯ ಬಹುಮಾನ ಹಾಗೂ ಪ್ರೌಢ ಶಾಲಾ ವಿಭಾಗದ ಗಾಯನ ಸ್ಪರ್ಧೆಯಲ್ಲಿ ಘಟಪ್ರಭಾ ಕೆ.ಆರ್.ಎಚ್ ಪೌಢ ಶಾಲೆಯ ರುತಿಕಾ ಬಸವರಾಜ ಹೊಸೂರ ದ್ವಿತೀಯ ಬಹುಮಾನ ಪಡೆದು ಕ್ರಮವಾಗಿ 7000/- ಹಾಗೂ 13,000/- ರೂಪಾಯಿ ಬಹುಮಾನ ಹಾಗೂ ಆಕರ್ಷಕ ಟ್ರೋಪಿಯೊಂದಿಗೆ ಗೆಲುವಿನ ನಗೆ ಬೀರಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಮಾರ್ಗದರ್ಶಕರು, ಪಾಲಕರು, ಗ್ರಾಮಸ್ತರು ಮತ್ತು ಹಿರಿಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಮಕನಮರಡಿ ಶಾಸಕರಾದ ಸತೀಶ್ ಜಾರಕಿಹೋಳಿ ವಹಿಸಿಕೊಂಡಿದ್ದರು. ಸಾ. ಶಿ ಚಿಕ್ಕೋಡಿ ಇಲಾಖೆ ಉಪ ನಿರ್ಧೆಶಕರಾದ ಗಜಾನನ ಮನ್ನಿಕೇರಿ, ಮೂಡಲಗಿ ಬಿಇಒ ಎ.ಸಿ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ ಬಳಿಗಾರ, ಸೇರಿದಂತೆ ರಾಹುಲ ಸ. ಜಾರಕೀಹೋಳಿ ಹಾಗೂ ಕು. ಐಶ್ವರ್ಯಾ ಸ. ಜಾರಕಿಹೋಳಿ ಹಾಗೂ ಗಣ್ಯ ಮಾನ್ಯರು ಉಪಸ್ತಿತರಿದ್ದರು.