ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ

ಕಕ್ಕೇರಿ 13: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚು ಗಮನ ಕೊಡದೆ ಮೊಬೈಲ್ ನಲ್ಲಿ ತಲ್ಲೀನರಾಗಿ, ಭವಿಷ್ಯದ ಕಡೆ ಗಮನ ಹರಿಸದೆ ಕಾಲಹರಣ ಮಾಡುತ್ತಿರುವುದು ಅಪಾಯಕಾರಿ,ಪಾಲಕರು ತಮ್ಮ ಮಕ್ಕಳಿಗೆ ಮನರಂಜನೆಗಾಗಿ  ಮೊಬೈಲ್, ಟಿವಿ ಹವ್ಯಾಸ ಬೆಳೆಸಿ,ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ,ಬಲಿದಾನ ಮಾಡಿರುವ ಮಹಾನ ವ್ಯಕ್ತಿಗಳ ಇತಿಹಾಸ ಕಡೆಗಣಿಸುತ್ತಿದ್ದೇವೆ. ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರನ್ನು ನಾಳಿನ ಸಮರ್ಥ ನಾಗರಿಕರನ್ನಾಗಿಸಲು ಯತ್ನಿಸಬೇಕು ಎಂದು ಹೊಸದಿಗಂತ ಪತ್ರಿಕೆಯ ಯುವ ಪತ್ರಕರ್ತ ಕಾಶೀಮ ಹಟ್ಟಿಹೊಳಿ ಹೇಳಿದರು. 

ಶುಕ್ರವಾರ  ತಾಲೂಕಿನ ಲಿಂಗನಮಠ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರು ಬಾಲಭವನ ಸೊಸೈಟಿ ,ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಖಾನಾಪುರ ತಾಲೂಕಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಾಲಭವನ ಸಮಿತಿ ಮತ್ತು ಶಿಶು ಅಭಿವೃದ್ಧಿ ಯೋಜನೆಗಳ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ 2019-20ನೇ ಸಾಲಿನ  ಮಕ್ಕಳಿಗೆ ಏರ್ಪಡಿಸಿದ ಚಿತ್ರಕಲೆ ಮತ್ತು ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮಕ್ಕಳಿಗೆ ದೇಶಾಭಿಮಾನ ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸಲು ಚಿತ್ರಕಲೆ ಮತ್ತು ದೇಶಭಕ್ತಿಗೀತೆಗಳ ಸ್ಪಧರ್ೆ ಏರ್ಪಡಿಸಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ನೀಡಿದರು.  ಸೋಲು-ಗೆಲುವು ಲೆಕ್ಕಿಸದೇ ಸ್ಪಧರ್ೆಯಲ್ಲಿ ಭಾಗವಹಿಸಿ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕು ಎಂದು ಅವರು ಕರೆ ನೀಡಿದರು. ಈ ಸಮಾರಂಭ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಪಾಂಡುರಂಗ ಮಿಟಗಾರ ವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಸಾವಂತ ನಿರೂಪಿಸಿ, ವಂದಿಸಿದರು. ಶಿಕ್ಷಕ ಶಿರಾಜ ಬಾಗವಾನ ಸ್ವಾಗತಿಸಿದರು.

ತಿಥಿಗಳಾಗಿ ಬೆಳಗಾವಿಯ ಕೆ.ಆರ್.ಎಸ್ ಸಂಸ್ಥೆಯ ಈಶ್ವರ ಪಟ್ಟಣಶೆಟ್ಟಿ ,ಎಮ್.ವಿ.ಎಸ್ ಸಂಸ್ಥೆಯ ರವಿ ನಾಯಕ, ಗ್ರಾಮದ ಯುವ ಮುಖಂಡ ರಾಜು ರಪಾಟಿ, ಬಸನಗೌಡ ಪಾಟೀಲ, ಕನ್ನಡ ಮತ್ತು ಉದರ್ು ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.