ಕೃಷಿ ಸಾಲ ಮನ್ನಾ ಕುರಿತು ಮೋದಿ ಸರ್ಕಾರವನ್ನು ಟೀಕಿಸಿದ ಪ್ರಿಯಾಂಕಾ

ನವದೆಹಲಿ, ಅಕ್ಟೋಬರ್ 11:    ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಮ್ಸಿ) ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ 76,000 ಕೋಟಿ ರೂ.ಗಳ ಸಾಲವನ್ನು ಯಾರಿಗೆ ಮನ್ನಾ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಪ್ರಶ್ನಿಸಿದ್ದಾರೆ. ಪಿಎಮ್ಸಿ ಬ್ಯಾಂಕ್ ವಂಚನೆಯನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ  ಅವರು,  ಪಿಎಮ್ಸಿ ಬ್ಯಾಂಕಿನೊಂದಿಗೆ  ಖಾತೆದಾರರು ಸಂಕಷ್ಟದಲ್ಲಿದ್ದಾರೆ ಮತ್ತು ಸಹಾಯಕ್ಕಾಗಿ ಕೋರುತ್ತಿದ್ದಾರೆ ಎಂದಿದ್ದಾರೆ. ಎಸ್ಬಿಐ 76000 ಕೋಟಿ ರೂ.ಗಳ  ಅನುತ್ಪಾದಕ ಸಾಲವನ್ನು ಹೊಂದಿದ್ದು, ಸುಮಾರು 220 ಜನ ಈಗ ಅದನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದಿದೆ. ಈ ಅಂಶ ಆರ್ಟಿಐ ಮೂಲಕ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಪ್ರಿಯಾಂಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 76000 ಕೋಟಿ ರೂ.ಗಳ ಸಾಲವನ್ನು ಸರ್ಕಾರ ಯಾರಿಗೆ ಮನ್ನಾ ಮಾಡುತ್ತಿದೆ ಎಂದು ಸುದ್ದಿ ವರದಿಯನ್ನು ಉಲ್ಲೇಖಿಸಿದ ಅವರು, ಬಡ ರೈತರು, ಪಿಎಮ್ಸಿ ಬ್ಯಾಂಕ್ಗೆ ಸಂಬಂಧಿಸಿದ ಜನರು ಸಂಕಷ್ಟದಲ್ಲಿದ್ದಾರೆ ಎಂದರು. ರೈತರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಆರ್ಥಿಕತೆಯು ಅಸ್ತವ್ಯಸ್ತವಾಗಿದೆ. ಜನರನ್ನು ತಮ್ಮ ಉದ್ಯೋಗದಿಂದ ವಜಾ ಮಾಡಲಾಗುತ್ತಿದೆ, ಪಿಎಮ್ಸಿ ಬ್ಯಾಂಕ್ಗೆ ಸಂಬಂಧಿಸಿದ ಜನರು ಅಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.