ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಪೃಥ್ವಿ-ಮಯಾಂಕ್

ಹ್ಯಾಮಿಲ್ಟನ್, ಫೆ.5, ಟೀಮ್ ಇಂಡಿಯಾದ ಯುವ ಆಟಗಾರರಾದ ಮುಂಬೈನ ಪೃಥ್ವಿ ಶಾ ಹಾಗೂ ಕರ್ನಾಟಕದ ಸ್ಟಾರ್ ಬ್ಯಾಟ್ಸ್ ಮನ್ ಮಯಾಂಕ್ ಅಗರ್ ವಾಲ್ ಏಕದಿನ ಅಂತಾರಾರಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಯುವ ಆಟಗಾರರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರು. ಭರವಸೆಯ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಈ ಉಭಯ ಆಟಗಾರರಿಗೆ ಅವಕಾಶ ಲಭಿಸಿದೆ. 

  ಈ ಮೂಲಕ ಆರಂಭಿಕರಿಬ್ಬರು ಒಂದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ನಾಲ್ಕನೆ ಜೋಡಿ ಇದಾಗಿದೆ. ಇದಕ್ಕೂ ಮೊದಲು ಜಿಂಬಾಬ್ವೆ ವಿರುದ್ಧ 2016ರಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್ ಹಾಗೂ ಕರುಣ್ ನಾಯರ್  ಅಂಗಳ ಪ್ರವೇಶಿಸಿತ್ತು. ಮಯಾಂಕ್ ಅಗರ್ ವಾಲ್ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಛಾಪು ಮೂಡಿಸಿದ ಆಟಗಾರ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ತಮ್ಮ ಕ್ಷಮತೆಯನ್ನು ಸಾಬೀತು ಮಾಡಿದವರು. ಮಯಾಂಕ್ ಆಡಿದ 9 ಟೆಸ್ಟ್ ಪಂದ್ಯಗಳಲ್ಲಿ 3 ಅರ್ಧಶತಕ, 3 ಅರ್ಧಶತಕದ ನೆರವಿನಿಂದ 872 ರನ್ ಕಲೆ ಹಾಕಿದ್ದಾರೆ. ಇನ್ನು ಮುಂಬೈನ ಪೃಥ್ವಿ ಶಾ ಎರಡು ಟೆಸ್ಟ್ ನಲ್ಲಿ 1 ಅರ್ಧಶತಕ, 1 ಶತಕ ಸಹಾಯದಿಂದ 237 ರನ್ ಸಿಡಿಸಿದ್ದಾರೆ.