ಬರಗಾಲ ತಡೆಗೆ ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ: ಸಿಇಓ

ಬಾಗಲಕೋಟೆ೨೫: ಜಲಾನಯನ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಬರ ತಡೆಯುವ ನಿಟ್ಟಿನಲ್ಲಿ ಕೃಷಿಕರಿಗೆ ಕೃಷಿಹೊಂಡ ನಿಮರ್ಿಸಲು ಹೆಚ್ಚಿನ ಆದ್ಯತೆ ನೀಡುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಕೃಷಿ ಇಲಾಖೆಯ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಯುವಿಕೆಯ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬರಗಾಲ ತಡೆಯುವಿಕೆಯಲ್ಲಿ ಸತತ ಬರಗಾಲಕ್ಕೆ ತುತ್ತಾಗುವ ತಾಲೂಕುಗಳನ್ನು ಗುರುತಿಸಬೇಕು. ಜಲಾನಯನಕ್ಕೆ ಲಭ್ಯವಿರುವ ಪ್ರದೇಶವನ್ನು ಗುರುತಿಸಿ ಎರಡು ತಾಲೂಕುಗಳನ್ನು ಆಯ್ಕೆ ಮಾಡಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತಿಳಿಸಿದರು. 

  ಬರಗಾಲ ತಡೆಯುವಿಕೆಯ ಈ ಯೋಜನೆ ಹುನಗುಂದ ತಾಲೂಕಿನ ಗೂಡುರ ಪ್ರದೇಶಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಉಳಿದ ತಾಲೂಕುಗಳು ಮನೆಯ ಅಂಗಳ ಕೈತೋಟ ಚಟುವಟಿಕೆಯನ್ನು ಹಮ್ಮಿಕೊಳ್ಳಬೇಕು. ಜಲಾನಯನ ಸಮಿತಿಯನ್ನು ನಿಯೋಜಿಸಿ ಆಯಾ ಪ್ರದೇಶಗಳಿಗೆ ಸಂಬಂಧಿಸಿದಂತೆ 14 ರಿಂದ 19 ಸ್ಥಳೀಯರನ್ನು ಹಾಗೂ ಇಲಾಖೆಯ ಅಧಿಕಾರಿಗಳನ್ನು ಸದಸ್ಯರನ್ನಾಗಿ ಮಾಡಿ ಕಾರ್ಯನಿರ್ವಹಿಸಬೇಕು ಎಂದರು.

 ಬಾದಾಮಿ ಮತ್ತು ಹುನಗುಂದ ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದು, ಕೊಳವೆಬಾಯಿ ಕೊರೆಯಬೇಕಾದಲ್ಲಿ ಕಡ್ಡಾಯವಾಗಿ ಪರವಾನಿಗೆ ಪಡೆಯಲೇಬೇಕಾಗಿದೆ. ಆದ್ದರಿಂದ ರೈತರು ಅಂತರ್ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಜಾಗೃತಿ ಅಭಿಯಾನ ಅಗತ್ಯವಾಗಿದೆ. ಅಭಿಯಾನವನ್ನು ಗ್ರಾಮವಾರು, ಹೋಬಳಿವಾರು, ತಾಲೂಕಾವಾರು ವಿವಿಧ ಸಂಘ ಸಂಸ್ಥೆ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಕಾರ್ಯನಿವರ್ಾಹಕ ಅಧಿಕಾರಿಗಳು ಹಾಗೂ ಮಹಿಳಾ ಒಕ್ಕೂಟಗಳನ್ನು ಸಹಯೋಗದೊಂದಿಗೆ ಹಮ್ಮಿಕೊಳ್ಳುವಂತೆ ತಿಳಿಸಿದರು.  

   ಕೃಷಿ ಇಲಾಖೆಯ ಜಂಟಿ ನಿದರ್ೇಶಕರಾದ ಚೇತನಾ ಪಾಟೀಲ ಮಾತನಾಡಿ ಈ ಯೋಜನೆಯಡಿ ನಮ್ಮ ಇಲಾಖೆ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಯೋಜನೆಯನ್ನು ಲಭ್ಯವಿರುವ ಭೂ ಸಂಪನ್ಮೂಲ ಮಾಹಿತಿಯಿಂದ ತಯಾರಿಸಲಾದ ಭೂ ಸಂಪನ್ಮೂಲ ಸಮೀಕ್ಷಾ ಹಾಗೂ ಜಲಾನಯನದ ವೈಜ್ಞಾನಿಕ ಮಾಹಿತಿ ಆಧಾರದ ಮೇಲೆ ಈ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು. 

       ಈ ಯೋಜನೆಯು ಗರಿಷ್ಠ 5 ವರ್ಷಗಳ ಅವಧಿಯಲ್ಲಿ ಮುಕ್ತಾಯಗೊಳಿಸಲಾಗುತ್ತಿದ್ದು, ಯೋಜನೆಯ ಸವಲತ್ತುಗಳನ್ನು ಪಡೆಯಲು ರೈತರು ಜಲಾನಯನ ಅಭಿವೃದ್ಧಿ ನಿಧಿಗೆ ಖಾಸಗಿ ಭೂಮಿಗಳಲ್ಲಿ ವಿವಿಧ ಕಾಮಗಾರಿಗಳ ವೆಚ್ಚದ ಶೇ.5 ರಷ್ಟು ವಂತಿಕೆಯನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಸಣ್ಣ, ಅತೀ ಸಣ್ಣ ರೈತರಿಂದ ಹಾಗೂ ಇತರೆ ರೈತರಿಂದ ಕನಿಷ್ಠ 10 ರಷ್ಟು ವಂತಿಕೆಯನ್ನು ಸಂಗ್ರಹಿಸಿ ಅಭಿವೃದ್ಧಿ ನಿಧಿಗೆ ಜಮಾ ಮಾಡಲಾಗುವುದು ಎಂದರು. ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಉಪನಿದರ್ೇಶಕ ಪ್ರಭುರಾಜ ಹಿರೇಮಠ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.