ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ

ಲೋಕದರ್ಶನವರದಿ

ರಾಣೆಬೆನ್ನೂರ. ಜು.03:  ನಗರದಿಂದ ಸಂಚರಿಸುವ ಈ ದೇವರಗುಡ್ಡ ರಸ್ತೆಯು ಅತ್ಯಂತ ವಾಹನ ಮತ್ತು ಜನಸಂಚಾರ ಸಂಪರ್ಕತೆಯ ಮಹತ್ವದ ರಹದಾರಿಯಾಗಿದೆ.  ಇತ್ತೀಚಗೆ ಸುರಿದ ಮಳೆಗೆ ನೀರು ನಿಂತು ಸಂಪೂರ್ಣ ಹಾಳಾಗಿದ್ದು, ಇದಕ್ಕಾಗಿಯೇ ಸರಿಪಡಿಸುವ ನಿಟ್ಟಿನಲ್ಲಿ 25 ಲಕ್ಷ ರೂ.ಗಳ  ವೆಚ್ಚದ ಸಿಡಿ ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಅವರು ಇಲ್ಲಿನ ಹರಳಯ್ಯ ನಗರದ ಮುಂಭಾಗದಿಂದ ದೇವರಗುಡ್ಡ ರಸ್ತೆಯ ರಹದಾರಿಯಲ್ಲಿ ಹಾನಿಗೊಂಡ ಸಿಡಿ ನಿಮರ್ಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು.  ಮಳೆ ಪ್ರಭಾವದಿಂದ ಮುಂದೆ ನೀರು ನಿಲ್ಲುವುದರಿಂದ ಯಾವುದೇ ವಾಹನಗಳು ಸಂಚರಿಸಲು ಹರಸಾಹಸ ಪಡೆಬೇಕಾಗಿತ್ತು.  ಈ ಭಾಗದ ಕೃಷಿ ಭೂಮಿಯು ಸಹ ನೀರು ನುಗ್ಗಿ ಬೆಳೆದು ನಿಂತ ಪೈರು ಸಹ ಹಾಳಾಗಿತ್ತು.  ಇಲ್ಲಿನ ರೈತಾಪಿ ವರ್ಗದವರ ಬೇಡಿಕೆಯಂತೆ ಈ ಯೋಜನೆ ರೂಪಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದ ಅವರು ಇಲಾಖೆ ಸಂಪೂರ್ಣವಾಗಿ ಗುಣಮಟ್ಟದ ಕಾಮಗಾರಿಗೆ ಆಧ್ಯತೆ ನೀಡಬೇಕು ಎಂದು ಸೂಚಿಸಿದರು. 

ಈ ಸಂದರ್ಭದಲ್ಲಿ ಮಾಜಿ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯ ಆರ್.ಶಂಕರ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭಾ ಸದಸ್ಯ ಮಲ್ಲಣ್ಣ ಅಂಗಡಿ, ಪ್ರಕಾಶ್ ಪೂಜಾರ, ಮಾಜಿ ಸದಸ್ಯ ಉಮೇಶ್ ಹೊನ್ನಾಳಿ, ವಾಡರ್್ ಸದಸ್ಯ ರಾಘವೇಂದ್ರ ಚಿನ್ನಿಕಟ್ಟಿ, ನಗರಸಭಾ ಪೌರಾಯುಕ್ತ ಡಾ|| ಎನ್.ಮಹಾಂತೇಶ್, ಬಿಜೆಪಿ ಮುಖಂಡರಾದ ಮಂಜುನಾಥ ಓಲೇಕಾರ, ವಿಶ್ವನಾಥ ಪಾಟೀಲ, ದೀಪಕ್ ಹರಪನಹಳ್ಳಿ, ರಾಘವೇಂದ್ರ ಕುಲಕಣರ್ಿ, ಬಸವರಾಜ ಕುಂಬಾರ, ರಘು ಹಾಡೂರ, ಮೈಲಪ್ಪ ಗೋಣಿಬಸಮ್ಮನವರ, ಮೈಲಪ್ಪ ದಾಸಪ್ಪನವರ, ವೆಂಕಟೇಶ್ ಗೊಲ್ಲರ ಸೇರಿದಂತೆ ಮತ್ತಿತರ ಗಣ್ಯರು, ನಗರಸಭಾ ಸಿಬ್ಬಂಧಿ ಪಾಲ್ಗೊಂಡಿದ್ದರು.