ಕಬಡ್ಡಿ ಆಟಗಾರರಿಗೆ ಪ್ರಧಾನಿ ಧನ್ಯವಾದ

ನವದೆಹಲಿ, ಏ 16,ಕೊರೊನಾ ವೈರಸ್  ಸೋಂಕಿನ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡುವ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಜನರನ್ನು ಒತ್ತಾಯಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಕಬಡ್ಡಿ ಆಟಗಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.ಫ್ರಾಂಚೈಸಿ ಯು ಮುಂಬಾ ಅವರ ಟ್ವೀಟ್‌ಗೆ ಉತ್ತರಿಸಿರುವ  ಪ್ರಧಾನಿ ಮೋದಿ, "ಉತ್ತಮ ಹೋರಾಟವನ್ನು ನೀಡುವ ಬಗ್ಗೆ ನಮ್ಮ ಕಬಡ್ಡಿ ಆಟಗಾರರಿಂದ ಒಂದು ಅಥವಾ ಎರಡು ವಿಷಯಗಳನ್ನು ತಿಳಿಯಲು ನಂಬಿರಿ. ಮತ್ತು ಇಲ್ಲಿ, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಏನು ಸಹಾಯ ಮಾಡುತ್ತದೆ ಎಂದು ಅವರು ನಿಮಗೆ ಹೇಳುತ್ತಿದ್ದಾರೆ" ಎಂದು ಬರೆದಿದ್ದಾರೆ.
ಪ್ರೊ ಕಬಡ್ಡಿ ಲೀಗ್ ಫ್ರ್ಯಾಂಚೈಸಿ ಯು ಮುಂಬಾ ಆಟಗಾರರಾದ ಅಜಿಂಕ್ಯ ಕಪ್ರೆ, ಅಥುಲ್ ಎಂಎಸ್, ಸುರಿಂದರ್ ಸಿಂಗ್ ಮತ್ತು ಅಭಿಷೇಕ್ ಸಿಂಗ್ ಅವರು ಸುರಕ್ಷಿತವಾಗಿರಲು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಜನರಲ್ಲಿ ಕೋರಿದ್ದರು.ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದ್ದು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಪ್ರಧಾನಿ ಇತ್ತೀಚೆಗಷ್ಟೇ ಜನರನ್ನು ಒತ್ತಾಯಿಸಿದ್ದರು."ಆರೋಗ್ಯ ಸೇತು ಕೋವಿಡ್-19 ವಿರುದ್ಧದ ನಮ್ಮ ಹೋರಾಟದ ಒಂದು ಪ್ರಮುಖ ಹೆಜ್ಜೆಯಾಗಿದೆ. ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಇದರಿಂದ ಹೆಚ್ಚಿನ ಮಾಹಿತಿ ಕಲೆಹಾಕಿರಿ. ಹೆಚ್ಚು ಹೆಚ್ಚು ಜನರು ಇದನ್ನು ಬಳಸುವುದರಿಂದ, ಅದರ ಪರಿಣಾಮಕಾರಿತ್ವವು ಹೆಚ್ಚಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಲು ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ" ಎಂದು ಪ್ರಧಾನಿ  ಹೇಳಿದ್ದಾರೆ.