ಚೆನ್ನೈಗೆ ಬಂದಿಳಿದ ಪ್ರಧಾನಿ: ಶೃಂಗಸಭೆಯಿಂದ ಇಂಡೋ-ಚೀನಾ ಸಂಬಂಧ ಬಲವರ್ಧನೆ

ಚೆನ್ನೈ, ಅ 11:    ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಎರಡು ದಿನಗಳ 2ನೇ ಅನೌಪಚಾರಿಕ ಶೃಂಗಸಭೆಗಾಗಿ ನವದೆಹಲಿಯಿಂದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆಗಮಿಸಿದರು.  ಇಲ್ಲಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಮಹಾಬಲಿಪುರಂನಲ್ಲಿ ಶೃಂಗಸಭೆ ನಡೆಯಲಿದೆ. ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಎಡಪ್ಪಡಿ ಕೆ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ, ಸಚಿವ ಪಿ.ತಂಗಮಣಿ ಮತ್ತು ಇತರರು ಸ್ವಾಗತಿಸಿದರು. ಸಂಕ್ಷಿಪ್ತ ಸ್ವಾಗತ ಕಾರ್ಯಕ್ರಮದ ನಂತರ, ಮೋದಿ ಅವರು ಹೆಲಿಕಾಪ್ಟರ್ ಮೂಲಕ ತಿರುವಿದಂತೈಗೆ ತಲುಪಿದರು, ಅಲ್ಲಿಂದ ಅವರು 20 ಕಿ.ಮೀ.ದೂರದಲ್ಲಿರುವ ಮಹಾಬಲಿಪುರಂನ ವಿಶ್ವ ಯುನೆಸ್ಕೋ ಹೆರಿಟೇಜ್ ಸೈಟ್ಗೆ ರಸ್ತೆ ಮೂಲಕ ಬಿಗಿ ಭದ್ರತೆಯ ನಡುವೆ ಆಗಮಿಸಿದರು.   ಹೆಲಿಪ್ಯಾಡ್ನಲ್ಲಿ ಅವರನ್ನು ಬಿಜೆಪಿಯ ಹಿರಿಯ ನಾಯಕರು, ಸಚಿವರು ಬರಮಾಡಿಕೊಂಡರು. ಮೋದಿ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆಯ ಇಕ್ಕೆಲಗಳಲ್ಲೂ ಜನರು ಸಾಲಾಗಿ ನಿಂತು ಸ್ವಾಗತ ಕೋರಿದರು. ಮೋದಿ ಅವರು ಮಹಾಬ್ಸ್ ಸ್ಟಾರ್ ಹೋಟೆಲ್ನಲ್ಲಿ ಉಳಿದು ವಿಶ್ರಾಂತಿ ಪಡೆದರು. ಜಿನ್ಪಿಂಗ್ ಅವರು ನಗರದ ಗಿಂಡಿಯಲ್ಲಿರುವ ಹೋಟೆಲ್ನಲ್ಲಿ ಉಳಿದುಕೊಂಡು ರಸ್ತೆಯ ಮೂಲಕ ಸಭೆ ನಡೆಯುವ ಸ್ಥಳ ಪ್ರಯಾಣಿಸಿದರು. ಮೋದಿ ಅವರು ಶೃಂಗಸಭೆ ಸ್ಥಳದಲ್ಲಿ ಸಂಜೆ ಜಿನ್ಪಿಂಗ್ ಅವರನ್ನು ಸ್ವಾಗತಿಸಲಿದ್ದಾರೆ. ಅಲ್ಲಿ ಅವರು ಇಂದು ಸಂಜೆ ಸಮುದ್ರ ತೀರದಲ್ಲಿರುವ ದೇವಸ್ಥಾನ, ಅರ್ಜುನ ತಪಸ್ಸು ಮಾಡಿದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಕಲಾಕ್ಷೇತ್ರ ತಂಡದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ನಂತರ ಮತ್ತು ಮೋದಿಯವರು ಆಯೋಜಿಸಿದ ಭೋಜನಕೂಟದಲ್ಲಿ ಭಾಗವಹಿಸುವರು. ಬಳಿಕ ಕ್ಸಿ ಅವರು ನಗರಕ್ಕೆ ಹಿಂದಿರುಗಿ ನಾಳೆ ಬೆಳಿಗ್ಗೆ ಶೃಂಗಸಭೆಗೆ ತೆರಳದ್ದಾರೆ.  ಈ ಶೃಂಗಸಭೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಲಿದೆ ಎಂದು ಚೆನ್ನೈಗೆ ಬಂದಿಳಿದ ಕೂಡಲೇ ಪ್ರಧಾನಿ ಮೋದಿ ಹೇಳಿದರು. ಮೋದಿ ಅವರು ಟ್ವೀಟ್ ಮಾಡಿ, ಚೆನ್ನೈಗೆ ಬಂದಿಳಿದಿದ್ದೇನೆ. ಅದ್ಭುತ ಸಂಸ್ಕೃತಿ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾದ ತಮಿಳುನಾಡಿನ ಭೂಮಿಗೆ ಬಂದಿರುವುದನ್ನು ತಮಗೆ ಸಂತೋಷವಾಗಿದೆ ಎಂದು ಮೋದಿ ಟ್ವೀಟ್ ಮಾಡಿದರು. ತಮಿಳುನಾಡು ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೆ ಆತಿಥ್ಯ ವಹಿಸುತ್ತಿರುವುದು ಸಂತೋಷದ ಸಂಗತಿ.  ಈ ಅನೌಪಚಾರಿಕ ಶೃಂಗಸಭೆ ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಅವರು ತಿಳಿಸಿದರು.