ಪ್ರಧಾನಿ ನರೇಂದ್ರ ಮೋದಿ-ಸಿಂಧು ಭೇಟಿ

ನವದೆಹಲಿ, ಆ 27    ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಸಾಧನೆಯನ್ನು ಮಾಡಿದ ಪಿ ವಿ ಸಿಂಧು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಅವರ ನಿವಾಸದಲ್ಲಿ ಭೇಟಿ ಮಾಡಿದರು. 

ಈ ವೇಳೆ ಕ್ರೀಡಾರಂಗದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿರುವ ಸಿಂಧು ಅವರಿಗೆ ಪ್ರಧಾನಿ ಶುಭಕೋರಿದರು.  

ಪ್ರಧಾನಿ ಮೋದಿ ಭೇಟಿಯ ವೇಳೆ ಕ್ರೀಡಾ ಸಚಿವ ಕಿರಣ್ ರಿಜಿಜು ಹಾಗೂ ಕೋಚ್ ಪುಲ್ಲೇಲ್ ಗೋಪಿಚಂದ್ ಇದ್ದರು.  

ಈ ಬಗ್ಗೆ ಟ್ಟಿಟ್ ಮಾಡಿರುವ ಮೋದಿ, 'ಭಾರತದ ಹೆಮ್ಮೆ, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸಿಂಧು ಬಂಗಾರದ ಪದಕ ಗೆದ್ದು ಇತಿಹಾಸ ನಿಮರ್ಿಸಿದ್ದಾರೆ. ಅವರನ್ನು ಭೇಟಿ ಮಾಡಿದ್ದು ಖುಷಿಯಾಗಿದೆ' ಎಂದು ಬರೆದಿದ್ದಾರೆ.