ನವದೆಹಲಿ, ಡಿ 25 ಕರ್ನಾಟಕ ಸೇರಿದಂತೆ ಐದು ರಾಜ್ಯಗಳ
ಅಂತರ್ಜಲ ಅಭಿವೃದ್ಧಿಪಡಿಸುವ ಹಾಗೂ ಜಲ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆ ತರುವ ಅಟಲ್ ಭೂ ಜಲ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಆರು ಸಾವಿರ
ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಕೇಂದ್ರ ಸಚಿವ ಸಂಪುಟ
ಸಭೆ ಮಂಗಳವಾರ ಅನುಮೋದನೆ ನೀಡಿದ್ದು, ದೆಹಲಿಯಲ್ಲಿಂದು
ಯೋಜನೆಗೆ ಚಾಲನೆ ನೀಡಲಿದ್ದಾರೆ. ಪಂಚಾಯತ್ ಹಂತದಲ್ಲಿ
ಅಂತರ್ಜಲ ನಿರ್ವಹಣೆ ಹಾಗೂ ನೀರು ಬಳಕೆ ಕುರಿತಂತೆ ಪ್ರಾಥಮಿಕ ಮನೋಧೋರಣೆಯನ್ನು ಬದಲಾವಣೆ ಮಾಡುವ ಉದ್ದೇಶವನ್ನು
ಈ ಯೋಜನೆ ಒಳಗೊಂಡಿದೆ. ಕರ್ನಾಟಕ
ಸೇರಿದಂತೆ ಐದು ರಾಜ್ಯಗಳಲ್ಲಿ ಈ ಯೋಜನೆಯನ್ನು ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.
ಈ ಯೋಜನೆಯಿಂದ ರೈತರ ಆದಾಯದಲ್ಲಿ ಹೆಚ್ಚಳವಾಗಲಿದ್ದು, ಅಂತರ್ಜಲ ವೃದ್ಧಿ ಜೊತೆಗೆ ನಿರ್ವಹಣೆಯ ಕೌಶಲ್ಯ
ಹೆಚ್ಚಳವಾಗಲಿದೆ ಎಂದರು.