ಪ್ರಧಾನಿ ಮೋದಿ, ಗೃಹ ಸಚಿವ ಶಾ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ; ಭೂಪೇಶ್ ಬಘೇಲ್ ಆರೋಪ

ನವದೆಹಲಿ, ಜ ೨೪ :      ಚತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ,    ಪ್ರಧಾನಿ  ನರೇಂದ್ರ ಮೋದಿ,  ಕೇಂದ್ರ ಗೃಹ ಸಚಿವ  ಅಮಿತ್  ಶಾ  ಅವರನ್ನು  ಜರ್ಮನಿಯ  ಸರ್ವಾಧಿಕಾರಿ    ಅಡಾಲ್ಫ್  ಹಿಟ್ಲರ್ ಗೆ   ಹೋಲಿಸಿದ್ದಾರೆ.   

ದೇಶ  ವಿರೋಧಿ   ಹೇಳಿಕೆ ನೀಡಿದರೆ   ಅಂತವರನ್ನು ಜೈಲಿಗೆ  ಅಟ್ಟುವುದಾಗಿ   ಗೃಹ ಸಚಿವ  ಅಮಿತ್ ಶಾ ಇತ್ತಿಚಿಗೆ ನೀಡಿರುವ   ಹೇಳಿಕೆಗೆ  ಆಕ್ರೋಶ ವ್ಯಕ್ತಪಡಿಸಿದ   ಮುಖ್ಯಮಂತ್ರಿ ಬಘೇಲ್ ..  ಹಿಟ್ಲರ್   ಕೂಡಾ  ಹೀಗೆಯೇ...   ತನ್ನನ್ನು   ಯಾರು  ಏನೇ ಅಂದರೂ ಪರವಾಗಿಲ್ಲ,  ಜರ್ಮನಿಯನ್ನು  ನಿಂದಿಸುವುದನ್ನು ಮಾತ್ರ  ಸಹಿಸುವುದಿಲ್ಲ  ಎಂದು ಹೇಳುತ್ತಿದ್ದ..    ಮೋಟಾ ಬಾಯ್,  ಛೋಟಾ ಬಾಯ್  ಕೂಡಾ  ಅದೇ ಧ್ವನಿಯಲ್ಲಿ  ಮಾತನಾಡುತ್ತಿದ್ದಾರೆ ಎಂದು ಅವರು  ದೂರಿದ್ದಾರೆ. 

ದೇಶದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ( ಎನ್ ಆರ್ ಸಿ)  ಜಾರಿಗೆ ತರಲಾಗುವುದು ಎಂದು ಒಬ್ಬರು  ಹೇಳಿದರೆ,   ಇಲ್ಲ ಎಂದು ಮತ್ತೊಬ್ಬರು  ಹೇಳುತ್ತಿದ್ದಾರೆ.  ಇವರಲ್ಲಿ ಯಾರು   ಸತ್ಯ ಹೇಳುತ್ತಿದ್ದಾರೆ?.  ಯಾರು ಸುಳ್ಳು ಹೇಳುತ್ತಿದ್ದಾರೆ? ಎಂಬುದು  ದೇಶದ ಜನರಿಗೆ ತಿಳಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಒಂದೊಮ್ಮೆ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ  ಜಾರಿ ಮಾಡಿದ್ದೇ ಆದರೆ,  ಅದರ ವಿರುದ್ದ  ಸಹಿ ಹಾಕುವ ಮೊದಲ ವ್ಯಕ್ತಿ   ನಾನೇ  ಎಂದು  ಬಘೇಲ್ ಪುನರುಚ್ಚರಿಸಿದ್ದಾರೆ.   ಎನ್‌ಆರ್‌ಸಿ ಜಾರಿಯಿಂದಾಗಿ ಭೂರಹಿತಬಡವರು, ಅನಕ್ಷರಸ್ಥರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು  ಕಳವಳ ವ್ಯಕ್ತಪಡಿಸಿದ್ದಾರೆ.