ಸಿಂಧು ರಾಷ್ಟ್ರದ ಹೆಮ್ಮೆ: ಉಪರಾಷ್ಟ್ರಪತಿ

 ಹೈದರಾಬಾದ್, ಆಗಸ್ಟ್ 31       ಏಸ್ ಶಟ್ಲರ್ ಪಿ.ವಿ.ಸಿಂಧು ರಾಷ್ಟ್ರದ ಹೆಮ್ಮೆ ಮತ್ತು ಅವರಂತಹ ಕ್ರೀಡಾಪಟುಗಳು ಯುವಕರಿಗೆ ಆದರ್ಶಪ್ರಾಯ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು. 

 ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿಂಧು, ಶನಿವಾರ ತನ್ನ  ಪೋಷಕರೊಂದಿಗೆ ಉಪ ರಾಷ್ಟ್ರಪತಿಗಳನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ ವೆಂಕಯ್ಯ ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡಿದರು. 

 24 ವರ್ಷದ ಆಟಗಾತರ್ಿಯ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಯನ್ನು ಶ್ಲಾಘಿಸಿದ ಅವರು, ಎಲ್ಲಾ ದೇಶವಾಸಿಗಳಿಗೆ ದೊಡ್ಡ ಸ್ಫೂರ್ತಿ ಎಂದರು. 

 ತನ್ನ ಗುರಿ ಸಾಧಿಸಲು ಕಠಿಣ ಆಹಾರ ಪದ್ಧತಿ, ಕಠಿಣ ಮತ್ತು ಶಿಸ್ತುಬದ್ಧ ಅಭ್ಯಾಸವನ್ನು ಅನುಸರಿಸಿದ್ದಕ್ಕಾಗಿ ಸಿಂಧು ಅವರನ್ನು ಅಭಿನಂದಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಫಿಟ್ ಇಂಡಿಯಾ ಕರೆ ರಾಷ್ಟ್ರೀಯ ಚಳುವಳಿಯಾಗಬೇಕು. ಇದು ಸೂಕ್ತ, ಸಮಯೋಚಿತ ಮತ್ತು ಹೆಚ್ಚು ಅಗತ್ಯವಿರುವ ಅಭಿಯಾನ ಎಂದರು. 

 ಭಾರತವು 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನಸಂಖ್ಯೆಯ 65 ಪ್ರತಿಶತದಷ್ಟು ದೊಡ್ಡ ಜನಸಂಖ್ಯಾ ಬಲವನ್ನು ಹೊಂದಿದೆ ಮತ್ತು ದೇಶವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಆರೋಗ್ಯಕರ, ಸಕ್ರಿಯ ಮತ್ತು ಉತ್ಪಾದಕ ಸಾಮಥ್ರ್ಯದ ಯುವ ಬಲವನ್ನು ಹೊಂದುವ ಅವಶ್ಯಕತೆಯಿದೆ ಎಂದು ನಾಯ್ಡು ಹೇಳಿದರು. 

 ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಲ್ಲಿನ ಬದಲಾವಣೆಗಳಿಂದಾಗಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚುತ್ತಿರುವ ಸಮಯದಲ್ಲಿ ಫಿಟ್ ಇಂಡಿಯಾದಂತಹ ಪ್ರಯತ್ನಗಳು ಅತ್ಯಂತ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು.