ಲೋಕದರ್ಶನ ವರದಿ
ಗದಗ: ವಿಲೀನಗೊಳ್ಳುವ ಹಿಂದಿನ ಸೇವೆಯನ್ನು ಪರಿಗಣಿಸುವಂತೆ ಆಗ್ರಹಿಸಿ ವೃತ್ತಿ ಶಿಕ್ಷಣ ಇಲಾಖೆ(ಜೆಓಸಿ)ಯಿಂದ ಸೇವಾ ಸಕ್ರಾಮಾತಿ ಹೊಂದಿ ವಿವಿಧ ಇಲಾಖೆ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್.ಎಂ.ಮಹದೇವಯ್ಯ ಅವರು ಮಾತನಾಡಿ, ನಾವು ವಿಲೀನಗೊಳ್ಳುವ ಮುಂಚೆ ವೃತ್ತಿ ಶಿಕ್ಷಣ ಇಲಾಖೆ(ಜೆಓಸಿ) ಯಲ್ಲಿ ಸಂಭಾವನೆ ಆಧಾರದ ಮೇಲೆ ಹಲವಾರು ವರ್ಷಗಳಿಂದ ನಿರಂತರವಾಗಿ ಸೇವೆಯನ್ನು ಸಲ್ಲಿಸಿರುತ್ತೆವೆ. ಬಹುತೇಕ ಸಿಬ್ಬಂದಿಗಳು ನಿವೃತ್ತಿ ಅಂಚಿನಲ್ಲಿರುವದರಿಂದ ಮತ್ತು ನಿವೃತ್ತಿ ಆಗಿದ್ದರಿಂದ ಅವರಿಗೆ ಕೊನೆಯ ತಿಂಗಳದ ವೇತನ ಬಿಟ್ಟು ನಿವೃತ್ತಿ ನಂತರದ ಯಾವುದೇ ರೀತಿಯ ಪಿಂಚಣಿ ಮತ್ತು ಇನ್ನಿತರ ಸೌಲಭ್ಯಗಳು ಸಿಕ್ಕಿರುವದಿಲ್ಲ ಅದ್ದರಿಂದ ವಿಲೀನತೆಯ ಹಿಂದಿನ ಸೇವೆಯನ್ನು ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣೆ ನೀಡಿದರೆ ನಿವೃತ್ತಿ ಜೀವನವನ್ನಾದರೂ ಗೌರಯುತವಾಗಿ ನಡೆಸಲು ಅನುಕೂಲವಾಗುತ್ತದೆ. ಅದ್ದರಿಂದ ವಿಲೀನತೆಗೊಳ್ಳುವ ಹಿಂದಿನ ಸೇವೆಯ ಅವಧಿಯನ್ನು ಪರಿಗಣಿಸಬೇಕು ಮತ್ತು ಹಿಂದಿನ ಸೇವೆಯ ಅವಧಿಯ ಬಾಕಿ ವೇತನವನ್ನು ನಾವುಗಳು ಕೇಳುವದಿಲ್ಲ ಎಂದು ಮನವಿ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೀಲಿನ ಗೊಂಡಿರುವ ಜೆಓಸಿ ಸಂಘದ ಗೌರವಾಧ್ಯಕ್ಷ ರುದ್ರಣ್ಣ ಗುಳಗುಳಿ, ಕಾರ್ಯದರ್ಶಿಅಮರೇಶ ಸಿ., ವೆಂಕಟೇಶ ನಾಗರಡ್ಡಿ, ವಸ್ತ್ರದ, ರವೀಶ ಬಿ.ಎಸ್., ಆರ್.ಎಂ.ಗುಲಬರೆ, ಸಿ.ಸಿ.ಪಾಟೀಲ, ಎಸ್.ಎ.ಗಾಡಗೋಳಿ, ಎಸ್..ವಿ.ಬೀಳಗಿಮಠ, ಎಸ್.ಸಿ.ಬಡಿಗೇರ, ಜಿ.ಆರ್.ಸಾತೇನಹಳ್ಳಿ, ವಿ.ಕೆ.ಚುಳಕಿ, ಬಿ.ಪಿ.ಕಾಗಿ, ಎಸ್.ಎಸ್.ಮುದಗಲ್, ಎಸ್.ಎಚ್.ಬಡಿಗಣ್ಣವರ, ಪಿ.ಎನ್.ನವಲೂರಕರ,ಎಸ್.ಎನ್.ಗುಡಿ, ಪಿ.ಎಂ.ಗಡಾದ, ಜೆ.ಎಸ್.ಅಬ್ಬಿಗೇರಿ, ಪಿ.ಎ.ಜಮಖಂಡಿ, ವಿ.ಬಿ.ಬೀಡಿ, ಆರ್.ಎನ್.ಜೋಶಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.