ನೇಸರಗಿ 28: ಇಲ್ಲಿನ ಪ್ರತಿಷ್ಠಿತ ಸರ್ಕಾರಿ ಕುವೆಂಪು ಶತಮಾನೋತ್ಸವ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿಯರಾದ ಆರ್. ಎಸ್. ಸಂಬರಗಿ ಅವರಿಗೆ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ದೊರಕಿದ್ದು, ಹಾಗೂ ಇದೆ ಶಾಲೆಯ ಸಹ ಶಿಕ್ಷಕಿಯರಾದ ಆಶಾ ಬಾಳಿಗಡ್ಡಿ ಅವರಿಗೆ ಜಿಲ್ಲಾ ಮಟ್ಟದ ರಾಣಿ ಚನ್ನಮ್ಮ ಸೇವಾ ರತ್ನ ಪ್ರಶಸ್ತಿ ದೊರಕಿದ ಪ್ರಯುಕ್ತ ಅವರನ್ನು ನೇಸರಗಿ ಗ್ರಾಮದ ಹಿರಿಯರು, ಗುರುಮಾತೆಯರು, ಶಾಲಾ ಸುಧಾರಣಾ ಸಮಿತಿ ಸದಸ್ಯರು, ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಸೇರಿಕೊಂಡು ಪ್ರಶಸ್ತಿ ಪಡೆದ ಇಬ್ಬರು ಗುರು ಮಾತೆಯರಿಗೆ ಸತ್ಕರಿಸಿ, ಸನ್ಮಾನಿಸಿದರು.