ಅಧ್ಯಕ್ಷೀಯ ಚುನಾವಣೆ ಯಶಸ್ವಿ: ಅಫ್ಘಾನಿಸ್ತಾನಕ್ಕೆ ಭಾರತದ ಅಭಿನಂದನೆ

 

ನವದೆಹಲಿ, ಸೆ 29: ಅಧ್ಯಕ್ಷೀಯ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಜನರು, ಸರ್ಕಾರ ಮತ್ತು ಭದ್ರತಾ ಪಡೆಗಳನ್ನು ಶ್ಲಾಘಿಸಿದ ಭಾರತ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಅಫ್ಘಾನಿಸ್ತಾನದ ಜನರನ್ನು ಭಾನುವಾರ ಅಭಿನಂದಿಸಿದೆ.

 "ಬೆದರಿಕೆಗಳು ಮತ್ತು ಹಿಂಸಾಚಾರದ ಹೊರತಾಗಿಯೂ ಪ್ರಜಾಪ್ರಭುತ್ವ ಆಡಳಿತ ಮತ್ತು ಸಾಂವಿಧಾನಿಕ ಪ್ರಕ್ರಿಯೆಗಳಲ್ಲಿ ತಮ್ಮ ನಂಬಿಕೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಕ್ಕಾಗಿ ನಾವು ಅಫಘಾನ್ ಜನರನ್ನು ಅಭಿನಂದಿಸುತ್ತೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

 "ಸವಾಲಿನ ಸನ್ನಿವೇಶಗಳ ಮಧ್ಯೆ ಸೆಪ್ಟೆಂಬರ್ 28 ರಂದು ಅಧ್ಯಕ್ಷೀಯ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಅಫ್ಘಾನಿಸ್ತಾನದ ಜನರು, ಸರ್ಕಾರ ಮತ್ತು ಭದ್ರತಾ ಪಡೆಗಳನ್ನು ಭಾರತ ಶ್ಲಾಘಿಸುತ್ತದೆ" ಎಂದು ಸಚಿವಾಲಯ ಹೇಳಿದೆ.

 ಈ ಚುನಾವಣೆಗಳು ತಮ್ಮ ದೇಶದಲ್ಲಿ ಶಾಂತಿ, ಭದ್ರತೆ, ಸ್ಥಿರತೆ, ಸಮೃದ್ಧಿ ಮತ್ತು ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಜನರ ಪ್ರಯತ್ನಗಳಲ್ಲಿ ಪ್ರಮುಖ ಮೈಲಿಗಲ್ಲು ಎಂದು ಸಚಿವಾಲಯ ತಿಳಿಸಿದೆ.

 ಬಿಗಿಯಾದ ಭದ್ರತೆಯೊಂದಿಗಿನ ಚುನಾವಣೆಯು ಶನಿವಾರದಂದು ಶಾಂತವಾಗಿ ನಡೆದಿದ್ದು, ಆದರೆ ಕಡಿಮೆ ಮತದಾನವಾಗಿದೆ.

 ಅಕ್ಟೋಬರ್ 19ರ ಮೊದಲು ಪ್ರಾಥಮಿಕ ಫಲಿತಾಂಶಗಳನ್ನು ಹೊರಬರುವುದು ಅನುಮಾನವಿದ್ದು ಮತ್ತು ಅಂತಿಮ ಫಲಿತಾಂಶಗಳು ನವೆಂಬರ್ 7ಕ್ಕೆ ಹೊರಬೀಳಬಹುದು. ಯಾವುದೇ ಅಭ್ಯರ್ಥಿಯು ಅರ್ಧದಷ್ಟು ಮತಗಳನ್ನು ಪಡೆಯದಿದ್ದರೆ, ಇಬ್ಬರು ಪ್ರಮುಖ ಅಭ್ಯರ್ಥಿಗಳ ನಡುವೆ ಎರಡನೇ ಸುತ್ತಿನ ಸಮರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.