ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಎರಡು ದಿನಗಳ ಕೇರಳ ಭೇಟಿ

ನವದೆಹಲಿ, 19 :           ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕೇರಳ ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದು ಮಂಗಳವಾರ ಸಂಜೆ ಕಣ್ಣೂರು ತಲುಪಲಿದ್ದಾರೆ.    ಬುಧವಾರ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಅವರು ಎಜಿಮಲಾದ ಭಾರತೀಯ ನೌಕಾ ಅಕಾಡೆಮಿಯಲ್ಲಿ ಪ್ರೆಸಿಡೆಂಟ್ಸ್ ಕಲರ್ ನೀಡಿ ಗೌರವಿಸಲಿದ್ದಾರೆ.    ಶ್ರೇಷ್ಠತೆಯ ಸಂಕೇತವಾದ ಪ್ರೆಸಿಡೆಂಟ್ಸ್ ಕಲರ್, ಯುದ್ಧ ಮತ್ತು ಶಾಂತಿ ಎರಡೂ ಸಂದರ್ಭಗಳಲ್ಲೂ ತೋರುವ ಬದ್ಧತೆ ಮತ್ತು ಮೌಲ್ಯಯುತ ಕೊಡುಗೆಯಿಂದ ಪಡೆಯುವಂತಹುದಾಗಿದೆ.