ಸವಿತಾ ಸಮುದಾಯದ ಪರಿಶಿಷ್ಠ ಜಾತಿ ಸೇರಿಸುವಲ್ಲಿ ಸರ್ಕಾರ ಮುಂದಾಗಲಿ ಅಧ್ಯಕ್ಷ ಎ.ಹನುಮಂತಪ್ಪ ಒತ್ತಾಯ

President A. Hanumanthappa urges the government to include the Scheduled Caste of the Savita communi

ಸವಿತಾ ಸಮುದಾಯದ ಪರಿಶಿಷ್ಠ ಜಾತಿ ಸೇರಿಸುವಲ್ಲಿ ಸರ್ಕಾರ ಮುಂದಾಗಲಿ ಅಧ್ಯಕ್ಷ ಎ.ಹನುಮಂತಪ್ಪ ಒತ್ತಾಯ  

ಕಂಪ್ಲಿ05ಶೈಕ್ಷಣಿಕ ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದ ಸವಿತಾ ಸಮುದಾಯವಾಗಿದ್ದು ಪರಿಶಿಷ್ಠ ಜಾತಿ ಸೇರಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಇಲ್ಲಿನ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಎ.ಹನುಮಂತಪ್ಪ ಹೇಳಿದರು ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಸವಿತಾ ಸಮುದಾಯದವರಿಗೆ ರಾಜಕೀಯ ಪ್ರಾತಿನಿಧ್ಯತೆ ನೀಡುವಲ್ಲಿ ಎಲ್ಲಾ ರಾಷ್ಟ್ರೀಯ ಪಕ್ಷಗಳು ಮುಂದಾಗಬೇಕು. ಸವಿತಾ ಸಮುದಾಯದವರು ಇಂದಿಗೂ ಮನೆ, ಅಂಗಡಿಗಳ ಬಾಡಿಗೆ ನೀಡುವಲ್ಲಿ ಹಿಂದೇಟು ಹಾಕುತ್ತಾರೆ. ಎಸ್ಸಿಗೆ ಸೇರೆ​‍್ಡಗೊಳಿಸಬೇಕು. ಪಟ್ಟಣದಲ್ಲಿ ಸವಿತಾ ಸಮುದಾಯ ಭವನಕ್ಕಾಗಿ ನಿವೇಶನ ಮತ್ತು ಅನುದಾನ ಒದಗಿಸಬೇಕು ಸರ್ಕಾರ ವಿಶೇಷ ಸೌಲಭ್ಯಗಳನ್ನು ಒದಗಿಸುವಲ್ಲಿ ಜಾಗೃತಿ ತೋರಬೇಕು ಎಂದು ಒತ್ತಾಯಿಸಿದರು.ತಹಶೀಲ್ದಾರ ಶಿವರಾಜ ಶಿವಪುರ ಮಾತನಾಡಿದರು  ಮುಖ್ಯಗುರು ಜಿಲಾನ್‌ಸಾಬ್  ಮಾತನಾಡಿ ರಥಸಪ್ತಮಿದಿನ ಮಾಗಮಾಸದ ಶುಕ್ಲ ಪಕ್ಷದಲ್ಲಿ ಸವಿತಾ ಮಹರ್ಷಿ ಜನನ ವಾಯಿತು ಧಾರ್ಮಿಕವಾಗಿ ಶಿವನ ಬಲಕಣ್ಣಿನಿಂದ ಜನಿಸಿದವರೇ ಸವಿತಾ ಮಹರ್ಷಿ ಎಂದು ಪ್ರತೀತಿ ಇದೆ ಈ ಸಮಾಜವನ್ನು ಸೂರ್ಯವಂಶಕ್ಕೆ ಸೇರಿದವರೆಂದು ಹೆಮ್ಮೆಯಿಂದ ಹೇಳಬಹುದು ಎಂದರು ಪ್ರಮುಖರಾದ ಕರೇಕಲ್ ಮನೋಹರ, ಸಿದ್ದಪ್ಪ ನಾಗೇಂದ್ರ ವೆಂಕಟರಮಣ ಭಾಸ್ಕರ್‌ರೆಡ್ಡಿ ಸವಿತಾ ಸಮಾಜದ ಪದಾಧಿಕಾರಿಗಳಾದ ಈರಣ್ಣ ಪಿ.ಪಾಂಡುರಂಗ, ಎ.ಅಂಜಿನಪ್ಪ,ಎನ್‌.ಶ್ರೀನಿವಾಸ್, ನಾಗಮ್ಮ ಸೇರಿ ಇತರರಿದ್ದರು. ನಟರಾಜ ಕಲಾವಿಜಯ ಸಂಘದ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿತನಕ ಬೈಕ್ ರಾ​‍್ಯಲಿ ಜರುಗಿತು.  ಫೆ03ಕಂಪ್ಲಿ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸವಿತಾ ಮಹರ್ಷಿ ಜಯಂತ್ಯುತ್ಸವ ಜರುಗಿತು.