ಜಾಗತಿಕ ಪೈಪೋಟಿಗೆ ಸಿದ್ಧರಾಗಿ: ಪ್ರೊ.ಎಸ್‌.ವಿ.ಸಂಕನೂರ

Prepare for global competition: Prof. SV Sankanur

ಹಾವೇರಿ 10:  ಇಂದು ಜಾಗತೀಕರಣಕ್ಕೆ ನಾವು ಒಡ್ಡಿಕೊಂಡಿದ್ದೇವೆ, ಬೆಂಗಳೂರಲ್ಲಿ ಬೆಳಗಿನ ಉಪಹಾರ ಸೇವಿಸಿ ಇನ್ನೊಂದು ದೇಶದಲ್ಲಿ ಮಧ್ಯಾಹ್ನದ ಊಟ ಸೇವಿಸಬಹುದಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಇಡೀ ಜಗತ್ತು ಜಾಗತಿಕ ಗ್ರಾಮವಾಗಿದೆ. ಈ ದಿಸೆಯಲ್ಲಿ ಜಾಗತಿಕ ಪೈಪೋಟಿಗೆ ಸಿದ್ಧಗೊಳ್ಳಲು ಸನ್ನದ್ದರಾಗಬೇಕು ಎಂದು ವಿಧಾನ ಪರಿಷತ್ ಶಾಸಕರಾದ ಪ್ರೊ.ಎಸ್‌. ವ್ಹಿ. ಸಂಕನೂರ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಮೇವುಂಡಿ ಸರ್ಕಾರಿ ಪ್ರೌಢಶಾಲೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಾವು ಮಂಜೂರು ಮಾಡಿದ ರೂ.3.45 ಲಕ್ಷ ವೆಚ್ಚದಲ್ಲಿ  ನಿರ್ಮಾಣವಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಇತ್ತೀಚೆಗೆ ಲೋಕಾರೆ​‍್ಣಮಾಡಿ ಅವರು ಮಾತನಾಡಿದರು. 

ಗಾಳಿಯ ನಂತರದ ಜೀವನಾವಶ್ಯಕ ವಸ್ತು ಜಲ ಅಮೃತ ಸಮಾನ. ಕಾಲರಾ, ಡಯೆರಿಯಾ, ವಾಂತಿ, ಬೇದಿ, ಹೆಪಟೈಟಸ್‌-ಬಿ, ಲಿವರ್ ಸಂಬಂಧಿ ತೊಂದರೆಗಳೆಲ್ಲವು ಅಶುದ್ಧ ನೀರಿನ ಸೇವನೆಯಿಂದಲೇ ಕಾಣಿಸಿಕೊಳ್ಳುವ ಕಾಯಿಲೆಗಳಾಗಿವೆ. ಪ್ರತಿ ದಿನ 3 ರಿಂದ 4 ಲೀಟರ್ ಶುದ್ಧ ನೀರು ಸೇವಿಸಿ ಈ ಮಾರಣಾಂತಿಕ ಕಾಯಿಲೆಗಳಿಂದ ದೂರವಿರಬಹುದು ಎಂದು ಹೇಳಿದರು. 

ರಾಷ್ಟ್ರ​‍್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಆರ್‌.ಎಸ್‌. ಪಾಟೀಲ ಮಾತನಾಡಿ,  ನಾವೆಲ್ಲರೂ ಉಸಿರಾಡುವುದೊಂದೆ ಗಾಳಿ., ಸೇವಿಸುವುದೊಂದೇ ಜಲ, ದೇಹರಚನೆಯಲ್ಲೂ ವ್ಯತ್ಯಾಸವಿಲ್ಲ. ಇಂತಹ ಅವಕಾಶಗಳು ಪ್ರತಿಯೊಬ್ಬರಿಗೂ ಸಮಾನವಾಗಿವಾಗಿವೆ. ಜಗತ್ತಿನಲ್ಲಿರುವ ಸುಮಾರು 700 ಮಿಲಿಯನ್ ಜನಸಂಖ್ಯೆಯಲ್ಲಿ ಯಾರೊಬ್ಬರು ಇನ್ನೊಬ್ಬರಂತಿಲ್ಲ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯ ಉದಯ ಜಗತ್ತಿನಅದ್ಭುತವೇ ಆಗಿದೆ. ಪ್ರತಿಯೊಬ್ಬರಲ್ಲಿ ಅಡಗಿರುವ ಅದ್ಭುತವನ್ನು ಅನಾವರಣಗೊಳಿಸಿಕೊಂಡು ಮಾಣಿಕ್ಯದಂತೆ ಮೆರೆಯಬೇಕೆಂದು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿತುಂಬಿದರು. 

ಮಾರುತಿ ಗೊರವರ ಅವರು ಶಾಲೆಯಲ್ಲಿ ಶಾಸಕರ ನಿಧಿಯಲ್ಲಿ ಶುದ್ಧ ನೀರಿನಘಟಕ ಸ್ಥಾಪಿಸಿದಕ್ಕೆ ಅಭಿನಂದಿಸಿದರು. ಎಸ್‌.ಡಿ.ಎಂ.ಸಿ. ಅಧ್ಯಕ್ಷ ಪರಮೇಶಪ್ಪ ಕಿತ್ತೂರ ಅಧ್ಯಕ್ಷತೆ ವಸಹಿದ್ದರು.  

ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್‌. ಬಿ. ಲಿಂಗಯ್ಯ, ಶಿದ್ದಪ್ಪ ಕರೆಮ್ಮನವರ, ದ್ಯಾಮನಗೌಡ ಹೊನ್ನನಗೌಡ್ರ, ವಿಜಯರೆಡ್ಡಿ ಭರಮರೆಡ್ಡಿ, ಖತಲ್‌ಸಾಬ್ ನಧಾಫ್, ಶ್ರೀಮತಿ ಜಯಲಕ್ಷ್ಮೀ ಸರವಂದ, ಆನಂದಗೊರವರ, ಸುನೀಲ ದೇವರಗುಡ್ಡ್ಲ ಪ್ರೌಢಶಾಲಾ ಸಿಬ್ಬಂದಿಗಳಾದ  ಮಂಜುನಾಥ ಕೆಂಚಮಲ್ಲ, ಪ್ರದೀಪ ವಿಜಾಪೂರ, ಸಚಿನ ವಾಲ್ಮೀಕಿ, ಸವಿತಾ ಗೊಲ್ಲರ, ಸುಜಾತಾ ಕಡಕೋಳ, ನೀಲಮ್ಮ ದ್ಯಾವನಗೌಡ್ರ ಉಪಸ್ಥತರಿದ್ದರು 

ಮುಖ್ಯೋಪಾದ್ಯಾಯ ವಿರೇಶ ಗಡ್ಡದೇವರಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್‌. ರಿತ್ತಿ ನಿರೂಪಿಸಿದರು ಹಾಗೂ ಶಿಕ್ಷಕ ಬಿ.ಎಮ್‌.ಪೂಜಾರ ವಂದಿಸಿದರು.