ಲಂಡನ್, ಮೇ 19,ಕೊರೊನಾ ವೈರಸ್ ಏಕಾಏಕಿ ಹಬ್ಬುತ್ತಿದ್ದ ಪರಿಣಾಮ ಮಾರ್ಚ್ 13 ರಂದು ಇಂಗ್ಲೆಂಡ್‌ನಲ್ಲಿ ಫುಟ್ಬಾಲ್ ಲೀಗ್ ಅನ್ನು ಸ್ಥಗಿತಗೊಳಿಸಿದ್ದು, ಪ್ರೀಮಿಯರ್ ಲೀಗ್ ಕ್ಲಬ್‌ಗಳಿಗೆ ಮಂಗಳವಾರದಿಂದ ತರಬೇತಿಯನ್ನು ಪ್ರಾರಂಭಿಸಲು ಅವಕಾಶ ನೀಡಲಾಗಿದೆ.ಈ ಬಗ್ಗೆ ಕ್ಲಬ್ ಗಳು ಸೋಮವಾರ ತಮ್ಮ ಅಭಿಪ್ರಾಯ ತಿಳಿಸಿದವು. 20 ಕ್ಲಬ್‌ಗಳು ಸೋಮವಾರ ಮತ ಚಲಾಯಿಸಿದ್ದು, ತರಬೇತಿಗೆ ಮರಳಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಗಿದೆ. ಎಲ್ಲಾ ಆಟಗಾರರು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು. "ಈ ಮೊದಲ ಹಂತವನ್ನು ಆಟಗಾರರು, ವ್ಯವಸ್ಥಾಪಕರು, ಪ್ರೀಮಿಯರ್ ಲೀಗ್ ಕ್ಲಬ್ ವೈದ್ಯರು, ಸ್ವತಂತ್ರ ತಜ್ಞರು ಮತ್ತು ಸರ್ಕಾರದೊಂದಿಗೆ ಸಮಾಲೋಚಿಸಿ ಒಪ್ಪಿಕೊಳ್ಳಲಾಗಿದೆ. ಅತ್ಯುನ್ನತ ಗುಣಮಟ್ಟದ ಕಟ್ಟುನಿಟ್ಟಾದ ವೈದ್ಯಕೀಯ ಪ್ರೋಟೋಕಾಲ್ಗಳು ಪ್ರತಿಯೊಬ್ಬರೂ ಸುರಕ್ಷಿತ ವಾತಾವರಣದಲ್ಲಿ ತರಬೇತಿಗೆ ಮರಳುವುದನ್ನು ಖಚಿತಪಡಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ. ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿಯನ್ನು ಜೂನ್‌ನಲ್ಲಿ ಮರುಪ್ರಾರಂಭಿಸುವ ಗುರಿಯನ್ನು ಹೊಂದಿದೆ.