ಪ್ರೀಮಿಯರ್ ಲೀಗ 4 ನೇ ದಿನದ ಪಂದ್ಯಾವಳಿಗೆ ಗಣ್ಯರಿಂದ ಚಾಲನೆ
Premier League Day 4 kicks off with dignitaries
ಲೋಕದರ್ಶನ ವರದಿ
ಮಹಾಲಿಂಗಪುರ 17 : ಐದು ದಿನಗಳ (ಜಿಲ್ಲಾ ಮೀಸಲು ಆಟಗಾರರ) ಪ್ರೀಮಿಯರ್ ಲೀಗ ಪಂದ್ಯಾವಳಿಯ 4ನೇ ದಿನದ ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆದಿರುವ ಜಮಖಂಡಿ ಉಮರ್ ಎಲಿವನ್ ಮತ್ತು ಮಹಾಲಿಂಗಪುರ ಸಜ್ಜಾದ್ ಎಲಿವನ್ ಪಂದ್ಯಕ್ಕೆ ಶನಿವಾರ ಪಟ್ಟಣದ ಗಣ್ಯರು ಚಾಲನೆ ನೀಡಿದರು.
ಈ ಪಂದ್ಯಾವಳಿಯಲ್ಲಿ ಪ್ರಾಯೋಜಕರು ಖರಿದಿಸಿದ 12 ತಂಡಗಳು ಜಿಲ್ಲೆಯಲ್ಲಿಯ ವಿವಿಧ ಊರುಗಳ ಹೆಸರುಗಳಿಂದ ಭಾಗವಹಿಸಿ ಪ್ರದರ್ಶನ ನೀಡುತ್ತಿವೆ.ರವಿವಾರ ಅಂತಿಮ ದಿನವಾಗಿದ್ದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯುವವು.ಅಂತಿಮ ಹಂತದ ವಿಜೇತ ತಂಡ 2 ಲಕ್ಷ ಮತ್ತು ಪರಾಭವ ತಂಡ 1 ಲಕ್ಷ ನಗದಿನೊಂದಿಗೆ ಟ್ರೋಫಿಗಳನ್ನು ಪಡೆದು ಬೀಗಲಿವೆ.
ಈ ಪಂದ್ಯಾವಳಿಯ ನೇರ ಪ್ರಸಾರ ಬಾಗಲಕೋಟ ಪ್ರೀಮಿಯರ್ ಲೀಗ್ ಸೀಸನ್ - 01 ಹೆಸರಿನ ಯುಟ್ಯೂಬ್ ಚ್ಯಾನಲ್ ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.ನಾಲ್ಕನೇ ದಿನದ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಕಣ್ಣೀರಿನ ಶೋಧನೆ ಪತ್ರಿಕಾ ಸಂಪಾದಕರಾದ ಕಲ್ಲಪ್ಪ ಕಡಬಲ್ಲವರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಶ್ರೀಶೈಲ ಹಿಪ್ಪರಗಿ, ಮಹಾಲಿಂಗಪ್ಪ. ಚನ್ನಪ್ಪ.ಕುಳ್ಳೋಳಿ, ಬಸವರಾಜ ರಾಯರ, ಶ್ರೀಶೈಲಪ್ಪ ಉಳ್ಳೇಗಡ್ಡಿ, ಫಕ್ರುದ್ದೀನ್ ಕುಂಟೋಜಿ, ಚನಬಸು ಹೊಸೂರ, ಮಹಾಲಿಂಗಪ್ಪ ಹೊಸೂರ, ಬಸವರಾಜ ಘಟ್ನಟ್ಟಿ, ಬಸಪ್ಪ ಕೊಪ್ಪದ, ಮಹಾದೇವ ಕಡಬಲ್ಲವರ, ಅಶೋಕ. ಜ.ಅಂಗಡಿ, ಪ್ರಭು ಕುಳ್ಳೋಳಿ, ಕೋರಿಶೆಟ್ಟಿ ಮಾಮಾ, ಬಾಬು ಘಟ್ನಟ್ಟಿ, ರಮೇಶ್ ಹರಕಂಗಿ, ಶಿವಾನಂದ ಪಟ್ಟೆದ್, ಸಯ್ಯದ್ ಶೇಖ, ಆಪ್ರೀದಿ ಪಕಾಲಿ, ಪ್ರಭು ನಿಲಾರಿ, ಇಜಾಜ್ ಯಾದವಾಡ ಮುಂತಾದವರು ಉಪಸ್ಥಿತರಿದ್ದರು.
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್ 