ಲೋಕದರ್ಶನವರದಿ
ಶಿಗ್ಗಾವಿ21 : ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ನಾಶವಾಗುವಂತೆ ಶಿಗ್ಗಾವಿ ಮುಸ್ಲಿಂ ಸಮುದಾಯದ ಬಾಂಧವರು ಪಟ್ಟಣದ ಹಜರತ್ ಸಯ್ಯದ್ ಖಾಯಂಶಾವಲಿ ದಗರ್ಾದಿಂದ ಹಜರತ್ ಸಯ್ಯದ್ ಮಹ್ಮದ್ಶಾ ಖಾದ್ರಿ ದಗರ್ಾದವರೆಗೆ ಪ್ರಾಥರ್ಿಸುತ್ತ ಮುಸ್ಲಿಂ ಸಮುದಾಯದ ದರೂದ-ಎ-ಶರೀಫ್ ದಿನವನ್ನ ಹಮ್ಮಿಕೊಂಡಿದ್ದರು.
ನಂತರ ಮುಸ್ಲಿಂ ಸಮಾಜದ ಮುಖಂಡ ಅಬ್ದುಲ್ ಮಜೀದ್ ಮಾಳಗೀಮನಿ ಮಾತನಾಡಿ, ಜಗತ್ತನ್ನ ಕಾಡುತ್ತಿರುವ ಮಾರಕ ವ್ಯಾದಿ ತಡೆಗಟ್ಟಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ ಜೊತೆಗೆ ಸಂಯಮ ಮತ್ತು ಸಂಕಲ್ಪ ಮುಖ್ಯವಾಗಿದ್ದು ಸೋಂಕು ತಡೆಯಲು ಮುನ್ನಚ್ಚರಿಕೆಯಾಗಿ ಕ್ರಮಗಳನ್ನ ಪಾಲಿಸಬೇಕಿದೆ ಇಲ್ಲವಾದರೆ ಅಪಾಯ ಕಟ್ಟಿಟ್ಟಬುತ್ತಿ ಆದ್ದರಿಂದ ಅಪಾಯದ ಸಂದರ್ಭದಲ್ಲಿ ದೇವರುಗಳ ಮೊರೆ ಹೋಗುವುದು ಸಹಜ ಅದೇ ರೀತಿ ನಮ್ಮ ಸಮುದಾಯದವರೂ ಸಹಿತ ದೇಶದ ಒಳಿತಿಗಾಗಿ, ಆರೋಗ್ಯಕ್ಕಾಗಿ ಮತ್ತು ರಕ್ಷಣೆಗಾಗಿ ಈ ಧಾಮರ್ಿಕ ಕಾರ್ಯವನ್ನು ಮಾಡಿದ್ದೇವೆ ಮತ್ತು ಆ ಅಲ್ಲಾನಲ್ಲಿ ನಮ್ಮ ಪ್ರಾರ್ಥನೆ ಸಲ್ಲಿಸಿ ಸಕಲ ದೋಷವನ್ನು ದೂರ ಮಾಡುವಂತೆ ಮೊರೆ ಇಟ್ಟಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಯಲಾ ಮಸೂತಿ ಪೇಶ ಇಮಾಮಯವರು, ಮೌಲಾನಾ ಸಯ್ಯದ್ ಶಬ್ಬೀರ್ ಅಹ್ಮದ್ ಅಶರಫಿ, ಮೌಲಾನಾ ಅಲ್ತಾಫ್ ಅಹ್ಮದ್ ಅಶರಫಿ, ಗೌಸಮಯಾದ್ದರೀನ್ ಮೌಲಾ, ಅಹ್ಮದ್ ಭಾಷಾ ಗುಲಾಮುದ್ದೀನ್, ಮಹ್ಮದ್ ಸಾಧಿಕ್ ಮಲ್ಲೂರ, ಮಹ್ಮದ್ ಹನೀಫ್ ಅಂಬೂರ, ಅಬ್ದುಲ್ಕರೀಂ ಮೊಗಲಲ್ಲಿ, ಶಬ್ಬೀರ ಅಹ್ಮದ್ ಮಕಾಂದಾರ್, ಉಸ್ಮಾನ್ಖಾನ್ ಪಠಾಣ, ಮೆಹಬೂಬಸಾಬ್ ಟಪಾಲ, ಅಲ್ಲಾಉದ್ದೀನ್ ಮಾಲ್ದಾರ, ಅನೀಸ್ಬೀರಾಯ ಖಾನ್, ಮೌಲಾಲಿ ಎಲ್ ಝಡ್, ಗೌಸ ಅಗಸಿಮನಿ ಮತ್ತು ಸಮಸ್ಥ ಮುಸ್ಲಿಂ ಬಾಂಧವರು ಇದ್ದರು.