ಮನೆಯಲ್ಲಿಯೇ ಪ್ರಾರ್ಥನೆ, ಖಬರಸ್ತಾನ್ಕ್ಕೆ ತೆರಳದಂತೆ ಮುಸ್ಲಿಂ ಮುಖಂಡರ ಮನವಿ

ಹಾವೇರಿ:ಎ. 09:  ಕರೋನಾ  ಹಿನ್ನೆಲೆಯಲ್ಲಿ ಸಕರ್ಾರದ ಆದೇಶದಂತೆ ಷಬ್ ಎ ಬರಾತ್ ಸಾಮೂಹಿಕ ಪ್ರಾರ್ಥನೆ ಹಾಗೂ ಖಬರಸ್ತಾನ್ಗಳಿಗೆ ಭೇಟಿ ನೀಡದೇ ಮನೆಯಲ್ಲಿಯೇ ಉಳಿದು ಆಚರಣೆ ಮಾಡುವುದಾಗಿ ಮುಸ್ಲಿಂ ಸಮಾಜದ ಮುಖಂಡರು ಘೋಷಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಷಬ್ ಎ ಬರಾತ್ ಸಾಮೂಹಿಕ ಪ್ರಾರ್ಥನೆ ಹಾಗೂ ಖಬರಸ್ತಾನ್ಗಳಿಗೆ ಭೇಟಿ ನೀಡುವ ಕುರಿತಂತೆ ವಕ್ಫ್ ಅಧಿಕಾರಿಗಳು ಹಾಗೂ ಅಂಜುಮ್ ಇಸ್ಲಾಂ ಕಮೀಟಿಯ ಪದಾಧಿಕಾರಿಗಳೊಂದಿಗೆ ಗುರುವಾರ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸಭೆ ನಡೆಸಿದರು.

ಕೋವಿಡ್- 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಪವಿತ್ರವಾದ ರಾತ್ರಿ ಎಂದು ಆಚರಿಸಲಾಗುವ ಷಬ್-ಎ-ಬರಾತ್ ಸಾಮೂಹಿಕ ಪ್ರಾರ್ಥನೆ, ಖಬರ್ಸ್ತಾನ್ಗಳಿಗೆ ಭೇಟಿ ನೀಡುವುದನ್ನು ಸಕರ್ಾರ ಹಾಗೂ ಕನರ್ಾಟಕ ರಾಜ್ಯ ವಕ್ಫ್ ಮಂಡಳಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಇದರ ಉದ್ದೇಶ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಇಲ್ಲವಾದರೆ ಕರೋನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ಮುಸ್ಲಿಂ ಬಾಂಧವರು ಮನೆಯಲ್ಲಿ ಉಳಿದು ಪ್ರಾರ್ಥನೆ ಮಾಡಬೇಕು ಹಾಗೂ ಮಸೀದಿ, ದಗರ್ಾ ಹಾಗೂ ಖಬರಸ್ತಾನ್ಗಳಿಗೆ ಭೇಟಿ ನೀಡಬಾರದು. ಈ ಕುರಿತಂತೆ ಸಮಾಜಕ್ಕೆ ಸಮಾಜದ ಮುಖಂಡರು ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಅವರು ಮಾತನಾಡಿ, ಕೋವಿಡ್ 19 ವ್ಯಾಪಕವಾಗಿ ಹರಡಿದೆ. ಜಾತಿ, ಧರ್ಮ, ಊರು ಎಲ್ಲವನ್ನೂ ಕರೋನಾ ವ್ಯಾಪಿಸುತ್ತಿರುವುದರಿಂದ ಕನರ್ಾಟಕ ಸಕರ್ಾರ ನೀಡಿರುವ ವಿವಿಧ ಆದೇಶಗಳಾನುಸಾರ ಸಾಮೂಹಿಕ ಪ್ರಾರ್ಥನೆಗಳನ್ನು ಅಮಾನತುಗೊಂಡಿದೆ. ಕನರ್ಾಟಕದ ಇಮಾರತ್-ಎ-ಶರಿಯಾ ಈ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದ್ದು, ಎಲ್ಲಾ ಮುಸಲ್ಮಾನ ಬಾಂಧವರು ಷಬ್ ಎ ಬರತ್ ದಿನ ಮನೆಯಲ್ಲಿಯೇ ಆಚರಣೆಗೆ ಮಾಡಬೇಕು. ಖಬರಸ್ತಾನ್ಕ್ಕೆ ತೆರಳಬಾರದು. ನಿಮ್ಮ ಬಂಧುಬಾಂಧವರಿಗೆ ಈ ವಿಷಯವನ್ನು ವಾಟ್ಸಪ್ ಹಾಗೂ ಮೊಬೈಲ್ ಮೂಲಕ ತಿಳಿಸಿ ಜಾಗೃತಿ ಮೂಡಿಸಬೇಕು ಎಂದು ಮುಸ್ಲಿಂ ಮುಖಂಡರಿಗೆ ಮನವಿ ಮಾಡಿಕೊಂಡರು.

 ಈಗಾಗಲೇ ಖಬರಸ್ತಾನ್ಗಳು/ದಗರ್ಾ ಸಮಿತಿಗಳಿಗೆ ಆದೇಶಗಳು ಬಂದಿವೆ. ಆದರೂ  ತಮಗೆ ಮತ್ತೊಮ್ಮೆ ಮಸೀದಿ, ಖಬರಸ್ತಾನ್ ಮತ್ತು ದಗರ್ಾಗಳ ಆಡಳಿತ ಮಂಡಳಿಗಳಿಗೆ ಮಾಹಿತಿ ನೀಡಲು ಸಭೆ ನಡೆಸಲಾಗಿದೆ. ತಾವೆಲ್ಲರೂ ಈವರೆಗೆ ನೀಡಿದ ಸಹಕಾರದಂತೆ  ಷಬ್ ಎ ಬಾರಾತ್ ದಿನದಂದು ಮನೆಯಲ್ಲೇ ಉಳಿದು ಪ್ರಾರ್ಥನೆಮಾಡಿ ಮಸೀದಿ, ದಗರ್ಾಗಳಿಗೆ ತೆರಳದಂತೆ ಜಾಗೃತಿ ಮೂಡಿಸಿ ಹಾಗೂ ಖಬರಸ್ತಾನ್ಗಳಿಗೆ  ತೆರೆಳದಂತೆ ತಿಳಿಸಿ ಎಂದು ಹೇಳಿದರು.

  ಸಭೆಯಲ್ಲಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಣಾಧಿಕಾರಿ ರಮೇಶ ದೇಸಾಯಿ ಅವರು ಮಾತನಾಡಿ, ಗುಂಪು ಗುಂಪಾಗಿ ಸೇರಿದರೆ ಕರೋನಾ ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಡಲಿದೆ. ಜಗತ್ತಿನ ಮುಂದುವರೆದ ಅಮೆರಿಕಾ, ಇಟಲಿಯಂತಹ ದೇಶಗಳು ಕರೋನಾಗೆ ನಲುಗಿ ಹೋಗಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಧಾಮರ್ಿಕ ಆಚರಣೆಗಳು, ಸಭೆ-ಸಮಾರಂಭಗಳನ್ನು ಗುಂಪು ಗುಂಪಾಗಿ ಜನ ಸೇರಿ ಆಚರಿಸುವುದನ್ನು ನಿಷೇಧಿಸಿದೆ. ಭವಿಷ್ಯದ ದೃಷ್ಟಿಯಿಂದ ನಾವೆಲ್ಲ ಸೇರಿ ಕರೋನಾ ತಡೆಗೆ ಗುಂಪು ಸೇರುವುದನ್ನು ತಡೆಯಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಸೀದಿ, ದಗರ್ಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಖಬರಸ್ತಾನ್ಗಳಿಗೆ ಭೇಟಿ ನೀಡದಂತೆ ಎಲ್ಲ ವಕ್ಫ್ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಜಾಗೃತಿ ಮೂಡಿಸುವಂತೆ ಸಭೆಯಲ್ಲಿ ತಿಳಿಸಿದರು.

      ಜಿಲ್ಲಾ ವಕ್ಫ್ ಸಮಿತಿಯ ಅಧ್ಯಕ್ಷರಾದ ಸಲೀಂ ಜವಳಿ, ನಾಸಿರಾಖಾನ್ ಪಠಾಣ, ಡಾ.ಸೌದಾಗರ, ನಿಷಾದ ಪಠಾಣ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದ ವಕ್ಫ್ ಸಲಹಾ ಸಮಿತಿಯ ಸದಸ್ಯರು, ಮುಸ್ಲಿಂ ಸಮಾಜದ ಮುಖಂಡರು ಸಭೆಯಲ್ಲಿ ಮಾತನಾಡಿ, ಸಕರ್ಾರದ ನಿದರ್ೆಶನ ಹಾಗೂ ವಕ್ಫ್ ಮಂಡಳಿಯ ಆದೇಶವನ್ನು ಪಾಲಿಸಲಾಗುವುದು. ಈಗಾಗಲೇ ಮುಸ್ಲಿಂ ಸಮುದಾಯಕ್ಕೆ ತಿಳುವಳಿಕೆ ನೀಡಲಾಗಿದೆ. ಷಬ್-ಎ-ಬರಾತ್ ಸಾಮೂಹಿಕ ಪ್ರಾರ್ಥನೆಯನ್ನು ಕೈಬಿಟ್ಟು ಮನೆಯಲ್ಲಿಯೇ ಪ್ರಾರ್ಥನೆ ಮಾಡಲಾಗುವುದು. ಖಬರಸ್ತಾನ್ ಹೋಗದಂತೆ ಈಗಾಗಲೇ ತಿಳಿಸಲಾಗಿದೆ. 

         ಯಾರೂ ಹೋಗುವುದಿಲ್ಲ. ನಮಾಜ ಅವಧಿಯನ್ನು ಕಡಿತಗೊಳಿಸಲಾಗಿದೆ. ಸಮಾಜದ ಪರವಾಗಿ  ಸಕರ್ಾರದ ಆದೇಶದಂತೆ ಪೇಷ್ ಇಮಾಮ್, ಮೌಜಾನ್ ಮಾತ್ರ ಮಸೀದಿಗಳಲ್ಲಿ ಎಲ್ಲರ ಪರವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸಕರ್ಾರದ ಮುಂದಿನ ಆದೇಶದವರೆಗೆ ಪಾಲಿಸುತ್ತೆವೆ ಎಂದು ಸಭೆಯಲ್ಲಿ ತಿಳಿಸಿದರು.ಅಭಿನಂದನೆ: ಇದೇ ಸಂದರ್ಭದಲ್ಲಿ ಜಿಲ್ಲಾ ಕರೋನಾ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಸೇರಿದಂತೆ ಆರೋಗ್ಯ, ಪೊಲೀಸ್ ಹಾಗೂ ಇತರ ಅಧಿಕಾರಿಗಳು ಶ್ರಮಿಸುತ್ತಿರುವ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿ ಆಡಳಿತ ವರ್ಗಕ್ಕೆ ವಕ್ಫ್ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಡಿ.ವೈ.ಎಸ್.ಪಿ. ವಿಜಯಕುಮಾರ ಸಂತೋಷ್, ಜಿಲ್ಲಾ ವಕ್ಫ್ ಅಧಿಕಾರಿ ತಾಜುದ್ದೀನ್ ಉಪಸ್ಥಿತರಿದ್ದರು.