ಲೋಕದರ್ಶನವರದಿ
ಹುಬ್ಬಳ್ಳಿ22: ಶ್ರೀನಗರ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತೆ ಭೀಕರ ಅಟ್ಟಹಾಸ ಮೆರೆದಿದ್ದು, 44 ಸಿಆರ್ಪಿಎಫ್ ಯೋಧರ ಬಲಿಪಡೆದದ್ದು ಅತ್ಯಂತ ಹೇಯ, ನೀಚ್ ಕೃತ್ಯ, ಈ ಅಮಾನುಷ ಘಟನೆ ನಡೆದದ್ದು ಅತ್ಯಂತ ಖಂಡನೀಯವಾದದ್ದು, ತೀವ್ರ ನೋವನ್ನುಂಟು ಮಾಡಿದೆ ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕನರ್ಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾಯರ್ಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅಪರ್ಿಸಿದ್ದಾರೆ. ಗಡಿ ರಕ್ಷಣೆಯಲ್ಲಿ ಭಾರತೀಯ ಯೋಧರ ಕೊಡುಗೆ ಅಪಾರವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ, ಯೋಧರ ಕುಟುಂಬದ ಸದಸ್ಯರಿಗೆ ಆದ ದುಃಖವನ್ನು ಸಹಿಸುವ ಶಕ್ತಿ, ದೈರ್ಯ, ಆತ್ಮಬಲ ಪರಮಾತ್ಮ ನೀಡಲಿ ಎಂದು ಪ್ರಾಥರ್ಿಸಿದ್ದಾರೆ. ಕೇಂದ್ರ ಸರಕಾರ ಉಗ್ರರ ಮಟ್ಟ ಹಾಕಲು ಹಾಗೂ ಭಯೋತ್ಪಾದಕರಿಗೆ ಬೆಂಬಲ ನೀಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುರೇಶ ಡಿ. ಹೊರಕೇರಿ ಅವರು ವಿನಂತಿಸಿದ್ದಾರೆ.
ಬಸವ ಕೇಂದ್ರದ ಅಧ್ಯಕ್ಷ ಡಾ|| ಬಿ.ವಿ.ಶಿರೂರ, ಉಪಾಧ್ಯಕ್ಷರಾದ ಪ್ರೊ ಜಿ.ಬಿ.ಹಳ್ಳಾಳ, ಪ್ರೊ ಎಸ್.ಸಿ.ಇಂಡಿ, ಬಿ.ಎಲ್.ಲಿಂಗಶೆಟ್ಟರ, ಪ್ರೊ ಎಸ್.ವಿ.ಪಟ್ಟಣಶೆಟ್ಟಿ, ಕಾಯರ್ಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ, ಕಾರ್ಯದಶರ್ಿ ರಾಜು ಅಣೆಪ್ಪನವರ, ಪ್ರೊ ಎಸ್. ಎಂ. ಸಾತ್ಮಾರ, ಎಂ.ವಿ.ಗೊಂಗಡಶೆಟ್ಟಿ, ಎಸ್.ವಿ.ಕೊಟಗಿ, ಬಸವರಾಜ ಯಕಲಾಸಪೂರ, ಸುವರ್ಣಲತಾ ಗದಿಗೆಪ್ಪಗೌಡರ, ಬಸವರಾಜ ಹೊಸಕೇರಿ, ಬಸವರಾಜ ಶೇಡಬಾಳ, ಕೆ.ಎಸ್.ಇನಾಮತಿ, ಗುರುರಾಜ ಜಾಡಗೌಡರ, ಜಿ.ಬಿ.ಗೌಡಪ್ಪಗೋಳ, ಮೃತ್ಯುಂಜಯ ಮಟ್ಟಿ, ಸುನಿಲಾ ಬ್ಯಾಹಟ್ಟಿ, ನೀಲಾಂಬಿಕಾ ಇನಾಮತಿ ಮುಂತಾದವರು ಹುತಾತ್ಮ ಯೋಧರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.