ಕ್ಷಯರೋಗಿಗೆ ಮನೆ ನಿರ್ಮಿಸಲು ಪ್ರಣವಾನಂದರಾಮ ಶ್ರೀಗಳ ಸಹಕಾರ

ಲೋಕದರ್ಶನವರದಿ

ರಾಣೇಬೆನ್ನೂರು04: ತಾಲೂಕಿನ ಆರೇಮಲ್ಲಾಪೂರ ಗ್ರಾಮದ ಹೊರವಲಯದ ಜಮೀನಿನಲ್ಲಿ ಸಣ್ಣ ಗುಡಿಸಲಿನಲ್ಲಿ ಪತ್ನಿ ರೇಣುಕಳ ಜೊತೆಗೆ ಅನೇಕ ವರ್ಷಗಳಿಂದ ವಾಸವಾಗಿರುವ ಕ್ಷಯರೋಗಿ ಗುಡ್ಡಪ್ಪ ಮಲ್ಲಪ್ಪ ಬೇವಿನಮರದರವರಿಗೆ ದುಡಿಯಲು ಆಗದೇ ಜೀವನ ನಿರ್ವಹಣೆ ಅಸಾಧ್ಯವಾಗಿದೆ. ಇವರಿಗೆ ಗ್ರಾಪಂ, ತಾಲೂಕಾಡಳಿತವು ತುತರ್ಾಗಿ ಮನೆ ಮಂಜೂರು ಮಾಡುವುದರ ಮೂಲಕ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು ಎಂದು ಗ್ರಾಮದ ಶ್ರೀ ಶರಣ ಬಸವೇಶ್ವರ ಮಠದ ಪಿಠಾಧಿಪತಿ ಡಾ.ಪ್ರಣವಾನಂದರಾಮಸ್ವಾಮಿಗಳು ಆಗ್ರಹಿಸಿದ್ದಾರೆ.

     ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿದರು. ತೆಂಗಿನ ಗರಿಗಳನ್ನು ಗೋಡೆಯಂತೆ ಹಾಕಿಕೊಂಡು  ಅತೀ ಸಣ್ಣ ಗುಡಿಸಲಿನಲ್ಲಿಯೇ ವಾಸವಾಗಿದ್ದು, ಒಳಗೆ  ಕುಳಿತುಕೊಳ್ಳುವಷ್ಟು ಜಾಗವಿರುವ ಸ್ಥಳದೊಳಗೆ ಅಡಿಗೆ ಮಾಡಬೇಕು, ದಿನನಿತ್ಯ ಉಡುವ ಬಟ್ಟೆಗಳನ್ನು ನೇತು ಹಾಕಿದ್ದು, ಆಹಾರ ಧಾನ್ಯಗಳ ಪೊಟ್ಟಣ, ಊಟ ತಯಾರಿಸುವ ಸಾಮಗ್ರಿಗಳು, ಸ್ವಚ್ಚತೆ ಇಲ್ಲದ ಇಂತಹ ಅತೀ ಸಣ್ಣ ಸ್ಥಳದಲ್ಲಿಯೇ ಕಾಲು ಮುದುರಿಸಿಕೊಂಡು ಮಲಗುವ ಪರಿಸ್ಥಿತಿ ಎದುರಾಗಿದೆ. ಇವರಿಗೆ ಶೀಘ್ರವೇ ಮನೆ, ವಿದ್ಯುತ್, ನೀರು, ಶೌಚಾಲಯ, ಔಷಧಿಗಳು ಸೇರಿದಂತೆ ಅವಶ್ಯಕ ಸವಲತ್ತುಗಳನ್ನು ಮಾಡಬೇಕಿದೆ ಎಂದರು.

    ಗುಡ್ಡಪ್ಪನಿಗೆ ಸರಕಾರದಿಂದ ವ್ರದ್ದಾಪ್ಯ ವೇತನ ಹೊರತುಪಡಿಸಿದರೆ ಏನೂ ಪ್ರಯೋಜನ ಪಡೆದಿಲ್ಲ,ಜೆರಡೂ ಕಾಲಿನ 9 ಬೆರಳುಗಳು ಕುಷ್ಠರೋಗಕ್ಕೆ ಬಲಿಯಾಗಿದ್ದು, ಸರಿಯಾಗಿ ನಡೆಯಲು ಬಾರದ ಇವರು ಕುಡಿಯುವ ನೀರಿಗಾಗಿ ಕಿಮಿನಷ್ಟು ದೂರ ಸಾಗಬೇಕಿದೆ, ತಂತ್ರಜ್ಞಾನದ ಈ ಯುಗದಲ್ಲೂ ಇವರ ದುಸ್ಥಿತಿ ನೋಡಿದರೆ ಕಣ್ಣಿರು ಬಾರದಿರದು, ಸೀಮೆ ಎಣ್ಣೆ ದೀಪದ ಬೇಳಕಿನಲ್ಲಿಯೇ ಬದುಕು ಸವೆಸುತ್ತಿದ್ದಾರೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ವಾಸಿಸುವ ಇವರಿಗೆ ಹಾವು, ಚೇಳು, ಮಂಗಸಿ ಮತ್ತಿತರ ವಿಷಜಂತುಗಳ ಹಾವಳಿಯು ಇದೆ, ವಾಸಿಸುವ ಜಾಗೆ ಒಂದು ಸಾರೆ ನೋಡಿದರೆ ಎದೆ ಝಲ್ ಎನ್ನುವಂತಹ ಸನ್ನಿವೇಶ ಕಂಡು ಬರುತ್ತದೆ ಎಂದರು. 

    ಇದನ್ನು ಕಂಡು ಶ್ರೀಮಠದ ಹಾಗೂ ಭಕ್ತರ ಸಹಕಾರದಿಂದ ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯ ವಿತರಿಸಿದೆ, ನೀರಿನ ವ್ಯವಸ್ಥೆ ಮಾಡಲಾಗಿದೆ, ಪ್ರಸಾದಕ್ಕಾಗಿ ಮಠಕ್ಕೆ ಬರಲು ಅವರಿಗೆ ಹೇಳಿದೆ.ಇದೀಗ ಭಕ್ತರ ಸಹಕಾರದಿಂದ ಅವರಿಗಾಗಿ 12*10ಅಳತೆಯ ಒಂದು ಕೊಠಡಿ ನಿಮರ್ಿಸಲು ಮುಂದಾಗಿದ್ದು, ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ, ಭಕ್ತರು ಇಂತಹ ಮಾನವೀಯತೆಯ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಶ್ರೀಗಳು ವಿನಂತಿಸಿದರು. ಶೀಘ್ರವೇ ಗುಡ್ಡಪ್ಪ ಕುಟುಂಬದವರಿಗೆ ಮನೆ ಮಂಜೂರು ಮಾಡಿಸುವುದಾಗಿ ಹಾಗೂ ಕೊಠಡಿ ನಿಮರ್ಾಣಕ್ಕೆ ಸಹಕಾರ ನೀಡುವುದಾಗಿ  ಗ್ರಾಪಂ ಅಧಿಕಾರಿಗಳು  ಭರವಸೆ ನೀಡಿದ್ದಾರೆ.