ನವದೆಹಲಿ, ಸೆ 22 ರಷ್ಯಾದಲ್ಲಿ ನಡೆದಿದ್ದ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನ ಪುರುಷರ ವಿಭಾಗದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಸಾಧನೆ ಮಾಡಿದ್ದ ಅಮಿತ್ ಪಂಘಾಲ್ ಅವರಿಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಶನಿವಾರ ನಡೆದಿದ್ದ ಪುರುಷರ 52 ಕೆ.ಜಿ ವಿಭಾಗದ ಫೈನಲ್ ಹಚಿಣಾಹಣಿಯಲ್ಲಿ ಅಮಿತ್ ಪಂಘಾಲ್ ಉಜ್ಬೇಕಿಸ್ತಾನದ ಶಾಖೋಬಿದ್ದಿನ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದರು. ಆ ಮೂಲಕ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಪಡೆದ ಮೊದಲ ಭಾರತೀಯ ಬಾಕ್ಸರ್ ಎಂಬ ಸಾಧನೆಗೆ ಪಂಘಾಲ್ ಶನಿವಾರ ಭಾಜನರಾಗಿದ್ದರು.
"ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಪಡೆದ ಭಾರತದ ಮೊದಲ ಬಾಕ್ಸರ್ ಅಮಿತ್ ಪಂಘಾಲ್ ಅವರಿಗೆ ಹೈದಯಪೂರ್ವಕ ಅಭಿನಂದನೆಗಳು. ಅವರಿಂದ ಇಡೀ ದೇಶಕ್ಕೆ ಹೆಮ್ಮೆ ಪಡುವಂತಾಗಿದೆ" ಎಂದು ಪ್ರಣಬ್ ಮುಖಜರ್ಿ ಟ್ವೀಟ್ ಮಾಡಿದ್ದಾರೆ.
ಮುಖರ್ಜಿ ಅಲ್ಲದೇ ಬಿಜೆಪಿಯ ಹಿರಿಯ ನಾಯಕಿ ವಸುಂಧರ ರಾಜೆ ಅವರು ಕೂಡ ಅಮಿತ್ಗೆ ಶುಭಕೋರಿದ್ದಾರೆ. "ಭಾರತದ ಪರ ಇತಿಹಾಸ ನೀರ್ಮಿಸಿರುವ ಅಮಿತ್ ಪಂಘಾಲ್, ಹೀಗೆ ಮುಂದುವರಿಸಿ ಎಂದು ಟ್ವೀಟ್ ಮಾಡಿದ್ದಾರೆ.