ಪ್ರಕಾಶ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Prakash selected for state level in 100 meter race

ಪ್ರಕಾಶ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ 

ಹೊಸಪೇಟೆ 10: ಕಾಕುಬಾಳು ಸ.ಹಿ.ಪ್ರಾ.ಶಾಲೆಯ ಶಿಕ್ಷಕರಾದ ಪ್ರಕಾಶ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ವಿಜಯನಗರ ಜಿಲ್ಲಾ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಕಾಶ್ ಶಿಕ್ಷಕರು 100ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು (50ವರ್ಷ ದಿಂದ 60ವರ್ಷದ ವಯೋಮಿತಿಯ ಪುರುಷರ ವಿಭಾಗದಲ್ಲಿ), 5ನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನಗೌಡ, ಹಾಗೂ ರಾಜ್ಯಪರಿಷತ್ ಸದಸ್ಯರಾದ ರಾಘವೇಂದ್ರ ಹೆಗಡೆಹಾಳ್, ಖಜಾಂಚಿಗಳಾದ ಮಲ್ಲೇಶಪ್ಪ, ಕಾರ್ಯದರ್ಶಿಗಳಾದ ಟಿ.ಪಂಪಣ್ಣ, ಹಾಗೂ ಕಡ್ಲಿವೀರಭದ್ರೇಶ್, ಮಾರ್ಗದಪ್ಪ, ರಾಜೀವ್, ಅಂದಾನಪ್ಪಗೌಡ, ಪ್ರಭಾಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧಾದೇವಿ, ಲತಾ, ಕಾರ್ಯಾಧ್ಯಕ್ಷರಾದ ಬಸವರಾಜ್‌.ಕೆ, ಜಿಲ್ಲಾದೈಹಿಕ ಶಿಕ್ಷಣಾಧಿಕಾರಿಗಳಾದ ಮಂಜುನಾಥಬಣಕಾರ್, ಹಾಗೂ ಜಾಕೀರ್, ಇವರು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ಸಾಧಕ ಶಿಕ್ಷಕನಿಗೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲೂಕು ನೌಕರರ ಸಂಘ ಹಾಗೂ ಕ.ಸ.ಪಾ ತಾಲೂಕು ಘಟಕ ಹೊಸಪೇಟೆ, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಕುಬಾಳು ಮುಖ್ಯಗುರುಗಳು ಹಾಗೂ ಎಸ್‌.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಾಲೆಯ ಸಿಬ್ಬಂದಿ ವರ್ಗ ಹಾರೈಸಿದರು.