ಐಟಿ ಆಯುಕ್ತ ಬಾಲಕೃಷ್ಣನ್ ವಿರುದ್ಧ ಕ್ರಮ ಜರುಗಿಸುವಂತೆ ಪ್ರಕಾಶ್ ರಾಠೋಡ್ ಆಗ್ರಹ

 ಬೆಂಗಳೂರು, ಆ 3  ಮೃತ ಉದ್ಯಮಿ ಸಿದ್ದಾರ್ಥ ಅವರ ಮರಣಪತ್ರ ಪರಿಗಣಿಸಿ ಸೆಕ್ಷನ್ 306 ರ ಪ್ರಕಾರ ತೆರಿಗೆ ಇಲಾಖೆ ಆಯುಕ್ತ ಬಾಲಕೃಷ್ಣನ್ ಅವರ ವಿರುದ್ಧ ಕ್ರಮಜರುಗಿಸಬೇಕು ಎಂದು ಮೇಲ್ಮನೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೋಡ್ ಆಗ್ರಹಿಸಿದ್ದಾರೆ ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದೇಶದಲ್ಲಿ ತೆರಿಗೆ ಭಯೋತ್ಪಾದನೆ ಆರಂಭವಾಗಿದೆ. ಐಟಿ ,ಇಡಿ ಇಲಾಖೆಗಳ ಮೂಲಕ ದ್ವೇಷಪ್ರೇರಿತ ದಾಳಿ ನಡೆಸುತ್ತಿದ್ದು, ತುರ್ತ ಪರಿಸ್ಥಿತಿ  ವಾತಾವರಣ ದೇಶದಲ್ಲಿ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ದಾಳಿಗಳು ಹಾಗೂ ಸಂಸ್ಥೆಗಳನ್ನು ದುರುದ್ದೇಶವಾಗಿ ಬಳಸಿಕೊಂಡಿದ್ದು ಅಕ್ರಮ.  ತೆಲುಗುದೇಶಂ ಪಕ್ಷದ ಚೌದರಿ,ಸಿಎಂ ರಮೇಶ್,ವೆಂಕಟೇಶ್ ಸೇರಿದಂತೆ ನಾಲ್ಕು ರಾಜ್ಯಸಭಾ ಸದಸ್ಯರ ಮೇಲೆ ಒತ್ತಡ ಹೇರುವ ಮೂಲಕ ಅವರು  ಬಿಜೆಪಿ ಸೇರುವಂತೆ ಮಾಡಲಾಗಿದೆ.  ಮುಕುಲ್ ರಾಯ್,  ಅಮೇಥಿಯಲ್ಲಿ ಸಂಜಯ್ ಸಿಂಗ್  ಅವರಿಗೆ ಐಟಿ ಭಯ ತೋರಿಸಿ ಬಿಜೆಪಿ ಸೇರ್ಪಡೆಯಾಗುವಂತೆ ಒತ್ತಡ ಹೇರಿದ್ದಾರೆ.  ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಬೆಂಬಲಿಗರ ಮೇಲೂ ಬಿಜೆಪಿ ಇದೇ ಮಾದರಿಯ ಭಯ ಹೇರುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಬೆಂಬಲಿತರ ಮೇಲೆ ಬಿಜೆಪಿ ದ್ವೇಷಪೂರಿತವಾಗಿ ದಾಳಿಗಳನ್ನು ಮಾಡಿಸುತ್ತಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ  ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸು ನಾಶಮಾಡಲು ಐಟಿ, ಇಡಿ, ಸಿಬಿಐ ಇಲಾಖೆಗಳಿಂದದ ದಾಳಿ ಮಾಡಿಸಲಾಗಿದ್ದು, ಕಾಂಗ್ರೆಸ್ ಅಭ್ಯಥರ್ಿಗಳನ್ನು ಭಯ ಬೀಳಿಸಲು ದಾಳಿ ನಡೆಸಲಾಗಿತ್ತು. ಇದು ರಾಜಕೀಯ ಪ್ರೇರಿತ ದಾಳಿ ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು. ಬಿಜೆಪಿ ನಾಯಕರಿಂದ ಸಂವಿಧಾನ ದುರ್ಬಳಕೆ ಆಗುತ್ತಿದೆ. ಸಾಮಾಜಿಕ ಸಂಸ್ಥೆಗಳನ್ನು ಬಿಜೆಪಿ ತನ್ನ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ಇದೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿವೆ. ಆದರೆ ಕೇಂದ್ರ ಸಕರ್ಾರ ಸಂವಿಧಾನ, ಪ್ರಜಾಪ್ರಭುತ್ವ ಯಾವುದನ್ನೂ ಪರಿಗಣಿಸದೇ ಕೇವಲ ರಾಜಕೀಯ ಸ್ವಾರ್ಥವನ್ನು ಮಾತ್ರ ತನ್ನ ಗುರಿಯಾಗಿಸಿ ನಿಯಮಗಳ ವಿರುದ್ಧವಾಗಿ ನಡೆಯುತ್ತಿದೆ ಎಂದರು. ಪಕ್ಷದ ಮುಖಂಡರಾದ ಸತೀಶ್ ಸೈಲ್,ಹೆಚ್.ಕೆ.ಪಾಟೀಲ್, ಆರ್ವಿ.ದೇಶ್ ಪಾಂಡೆ, ವಿನಯ್ ಕುಮಾರ್ ಸೊರಕೆ ಭೀಮಣ್ಣನಾಯ್ಕ, ಡಿ.ಕೆ.ಶಿವಕುಮಾರ್ ಹಾಗೂ ಅನರ್ಹ ಶಾಸಕರಾದ ಆನಂದ್ ಸಿಂಗ್, ಎಂಟಿಬಿ ನಾಗರಾಜು, ಜೆಡಿಎಸ್ ನ ಸಿ.ಎಸ್.ಪುಟ್ಟರಾಜು ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ  ಅವರ ಆಪ್ತ ಮರಿಗೌಡ ಅವರ ಆಸ್ತಿಗಳ ಮೇಲೂ ಐಟಿ ದಾಳಿ ನಡೆದಿವೆ. ಚುನಾವಣಾ ಸಮಯದಲ್ಲಿಯೇ ದಾಳಿ ಮಾಡಲಾಗಿತ್ತು. ಉದ್ಯಮಿಗಳ ಮೇಲೂ ಬಿಜೆಪಿ ರಾಜಕೀಯ ಪ್ರೇರಿತ ದಾಳಿ ನಡೆಸುತ್ತಿದೆ.ದೇಶದಲ್ಲಿ ಒಂದು ರೀತಿಯ ಅಘೋಷಿತ ತುರ್ತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಕಾಶ್ ರಾಠೋಡ್ ಕಿಡಿಕಾರಿದರು.