ಪುತ್ರನಿಗೆ ರಾಷ್ಟ್ರಗೀತೆ ಹೇಳಿಕೊಟ್ಟ ನಟ ಪ್ರಕಾಶ್ ರಾಜ್

ಬೆಂಗಳೂರು, ಮಾ.29,  ಕೊರೊನಾ ವೈರಸ್ ಸೋಂಕು ತಡೆಗಟ್ಟಲು ದೇಶಾದ್ಯಂತ ಲಾಕ್‌ ಡೌನ್ ಮಾಡಲಾಗಿದ್ದು, ಭಾರತ ನಿವಾಸಿಗಳೆಲ್ಲ ಮನೆಯಲ್ಲೇ ಕಾಲ ಕಳೆಯುವಂತಾಗಿದೆ.ಈಗಾಗಲೇ ಚಲನಚಿತ್ರ ‌ಚಿತ್ರೀಕರಣವನ್ನು ಮೊಟಕುಗೊಳಿಸಲಾಗಿದ್ದು,‌ ಎಲ್ಲಾ ಸ್ಟಾರ್ ನಟ-ನಟಿಯರು ತಮ್ಮ ಕುಟುಂಬದವರ ಜೊತೆಯಲ್ಲಿ  ಕಾಲ ಕಳೆಯುತ್ತಿದ್ದಾರೆ.ಬಹುಭಾಷಾ ನಟ ಪ್ರಕಾಶ್ ರಾಜ್‌ ಅವರು ಕೂಡ ತಮ್ಮ  ಕುಟುಂಬಸ್ಥರೊಂದಿಗೆ ಕಾಲ ಹರಣ ಮಾಡುತ್ತಿದ್ದಾರೆ.
ಪ್ರಕಾಶ್  ರಾಜ್‌ ಅವರು ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ತಮ್ಮ  ಪುತ್ರನಿಗೆ ರಾಷ್ಟ್ರಗೀತೆ  ಹೇಳಿಕೊಟ್ಟಿರುವ, ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಪ್ರಕಾಶ್  ರಾಜ್‌ ಅವರು, ಮನೆಯಲ್ಲಿದ್ದು, ಸುತ್ತಮುತ್ತಲಿನವರನ್ನು ಕಾಪಾಡುವಂತೆ ಮನವಿ  ಮಾಡಿದ್ದಾರೆ. ವೈರಸ್ ಯಾವತ್ತೂ ಹರಡುವುದಿಲ್ಲ. ನಾವೇ ಅದನ್ನು ಹರಡುತ್ತೇವೆ. ಹೀಗಾಗಿ  ಎಲ್ಲರೂ ಮನೆಯಲ್ಲೇ ಇರಿ ಎಂದು ವಿನಂತಿಸಿಕೊಂಡಿದ್ದಾರೆ.