ಕಾರವಾರ, ಮಾ.20: ಹೆಸ್ಕಾಂ, ಹೊನ್ನಾವರ ವಿಭಾಗ ವ್ಯಾಪ್ತಿಯಲ್ಲಿನ ಶಿರಸಿಯಲ್ಲಿ ತುರ್ತಾಗಿ ಬ್ಯಾಟರಿ ಚಾರ್ಜರ್ ಹಾಗೂ ಬ್ಯಾಟರಿ ಸೆಟ್ ಬದಲಾವಣೆ ಕಾರ್ಯ ಇರುವುದರಿಂದ ಮಾ.22 ರಂದು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯ ವರೆಗೆ ಶಿರಸಿ- ಕುಮಟಾ 110 ಕೆವಿ.ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ ಕಾರಣ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಕಾರವಾರದಿಂದ ವಿದ್ಯುತ್ ಸರಬರಾಜು ಪಡೆಯಲಾಗುವುದು. ಈ ಸಮಯದಲ್ಲಿ 110 ಕೆವಿ ಕಾರವಾರ-ಕುಮಟಾ ಮಾರ್ಗವು ಓವರ್ ಲೋಡ್ ಆಗುವ ಕಾರಣ ಕುಮಟಾ, ಹೊನ್ನಾವರ ಹಾಗೂ ಭಟ್ಕಳ್ ತಾಲೂಕಿನ ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಮಾ.22 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಹೊನ್ನಾವರ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜೀನೀಯರ(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.