ಸೇತುವೆ ತಡೆಗೋಡೆಯ ಕಳಪೆ ಮಟ್ಟದ ಕಾಮಗಾರಿ

ತಲ್ಲೂರ 25: ಕಳೆದ ತಿಂಗಳ ಹಿಂದೆ ಸತತ ಸುರಿದ ಮಳೆಯಿಂದಾಗಿ ತಾಲೂಕಿನ ವಿವಿದ ಭಾಗಗಳಲ್ಲಿ ರಸ್ತೆಗಳು ಸೇತುವೆಗಳು ತೆಗ್ಗು ಗುಂಡಿಗಳು ಬಿದ್ದು ಹಾಳಾಗಿವೆ. ಈ ಪೈಕಿ ಸವದತಿ ತಾಲೂಕಿನ ಸುಬ್ಬಾಪೂರ ಗ್ರಾಮದಲ್ಲಿ ಲೋಕೂಪಯೋಗಿ ಇಲಾಖೆ ನಿಮರ್ಿಸಿರುವ ಸೇತುವೆ ಮತ್ತು ತಡೆಗೋಡೆಯ ಮಣ್ಣು ಕುಸಿದಿದ್ದು ಕಟ್ಟಡ ಕಳಪೆ ಮಟ್ಟದಾಗಿದ್ದು ಈ ಸೇವತುವೇ ಮೇಲೆ ನೂರಾರು ವಾಹನಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚಾರ ಮಾಡುವಂತಾ ಸನ್ನಿವೇಶ ಉದ್ಬವಿಸಿದೆ.

ಈ ಸೇತುವೆ ನಿಮರ್ಿಸಿ ಇನ್ನೂ ತಿಂಗಳು ಪೂರ್ಣಗೊಂಡಿಲ್ಲ ಆಗಲೆ ಈರೀತಿ ಮಣ್ಣು ಕುಸಿದಿದ್ದು ಇದು ಕಳಪೆ ಮಟ್ಟದ ಕಾಮಗಾರಿಗೆ ಕೈಗನ್ನಡಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಾರ್ಗವಾಗಿ ಸವದತ್ತಿ ಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ, ಗೋಡಚಿ ವೀರಭದ್ರೇಶ್ವರ ದೇವಸ್ಥಾನಕ್ಕೆ, ಜಾಲಿಕಟ್ಟಿ ಬಸವೇಶ್ವರ ದೇವಸ್ಥಾನಕ್ಕೆ, ಬೆನಕಟ್ಟಿ ದುಗರ್ಾದೇವಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ರಸ್ತೆಯನ್ನೆ ಅವಲಂಬಿಸಿದ್ದು ವಾಹನಗಳ ಮುಖಾಂತರವೆ  ಸಂಚರಿಸುವುದು ಅನಿವಾರ್ಯವಾಗಿದೆ. ಈ ಸಂದರ್ಬದಲ್ಲಿ ಎನಾದರು ಈ ಸೇತುವೆ ಕುಸಿದರೆ ಎನು ಗತಿ ಎಂದು ಭಕ್ತಾಧಿಗಳು ಪ್ರಶ್ನಿಸುತ್ತಾರೆ ಇದು ಎತ್ತರ ಸೇತುವೆ ಇದ್ದು ಇದರ ಕೇಲಗಡೆ ನೀರು ಸದಾವ ಕಾಲ ಹರಿಯುತ್ತದೆ ಇಂತಹ ಸಂದರ್ಬದಲ್ಲಿ ಆಗುವ ಅನಾಹುತಕ್ಕೆ ಯಾರು ಜವಾಬ್ದಾರರು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸೇತುವೆ ನಿಮರ್ಿಸುವ ವೇಳೆಯಲ್ಲಿ ಇಲಾಖೆಯ ಅಧಿಕಾರಿಗಳಿಗೆ ಗುಣಮಟ್ಟಕ್ಕೆ ಆದ್ಯೆತೆ ನೀಡುವಂತೆ ಹೇಳಿದ್ದರು ಇದಿಗ ಸೇತುವೇ ದುರಸ್ತಿ ನೋಡಿದರೆ ಗುಣಮಟ್ಟ ಕಾಮಗಾರಿ ನಿರ್ವಹಿಸಿಲ್ಲದಿರುವುದು ಸ್ಪಸ್ಟವಾಗಿದೆ. ಇನ್ನಾದರು ಅಧಿಕಾರಿಗಳು ಎಚ್ಚೆತ್ತುಕೊಂಡು ಸೇತುವೆಯನ್ನು ದುರಸ್ತಿ ಮಾಡುತ್ತಾರಾ ಇಲ್ಲವೂ ಕಾಯ್ದು ನೋಡಬೇಕು. ಬೈಲಹೊಂಗಲ 

ಶಾಸಕ ಮಹಾಂತೇಶ ಕೌಜಲಗಿ: ಕುಸಿದಿರುವ ಸೇತುವೆ ತಡೆಗೋಡೆಯನ್ನು ಪರಿಶೀಲನೆಗೆ ಅಧಿಕಾರಿಗಳನ್ನು ಕಳಿಸಲಾಗುವುದು ಎಂದರು.

ಮುರಗೋಡ ಜಿಪಂ ಸದಸ್ಯ ಬಸವರಾಜ ಬಂಡಿವಡ್ಡರ: ತಲ್ಲೂರ ಮುರಗೋಡ ಮುಖ್ಯ ರಸ್ತೆ ಸುಬ್ಬಾಪೂರ ಹತ್ತಿರ ನೂತನವಾಗಿ ನಿಮರ್ಿಸಿದ ಸೇತು ಕಳಪೆ ಮಟ್ಟದ ಕಾಮಗಾರಿಯಾಗಿದೆ ಶಿಗ್ರದಲ್ಲಿ ಸರಪಡಿಸಲು ಅಧಿಕಾರಿಗಳ ಗಮನಕ್ಕೆ ತರಲಾಗುವುದು.

ಲೋಕೊಪಯೋಗಿ ಅಧಿಕಾರಿ ಬೈಲಹೊಂಗಲ ಎಮ್ ಬಿ ಗಣಾಚಾರಿ: ಸ್ಥಳಕ್ಕೆ ಹೋಗಿ ಪರೀಶಿಲನೆ ಮಾಡಿದ್ದು ಗುತ್ತಿಗೆದಾರನ ಕಾಮಗಾರಿ ಅರ್ಧವಾಗಿದೆ ಕೋಡಲೆ ತಡೆಗೋಡೆ ಹಾಗೂ ಸೇತುವೆ ಮೇಲೆ ಡಾಂಬಿರಿಕರಣ ಮಾಡಿಕೊಡಲಾಗುವುದು. ಕರವೇ ಸ್ವಾಭಿಮಾನಿ ಬನದ ಅಧ್ಯಕ್ಷ ಸಂಜಯ ಶಿವಪೂಜಿ: ಈ ಮುಖ್ಯ ರಸ್ತೆಯ ಮೂಲಕ ಬೈಲಹೂಂಗಲ ಪಟ್ಟಣಕ್ಕೆ ನೋರಾರು ವಾಹನಗಳು ಸಂಚಾರ ಮಾಡುತ್ತವೆ ಆದಷ್ಟು ಬೇಗನೆ ಅಧಿಕಾರಿಗಳು ಕಾಮಗಾರಿ ಮಾಡದೆ ಇದ್ದರೆ ರಸ್ತೆ ತಡೆದು ಪ್ರತಿಬಟನೆ ಮಾಡಲಾಗುವುದು ಎಂದರು.