ಕೋಲ್ಕತ್ತಾ, ನ 12 : ಪಿಂಕ್ ಚೆಂಡಿನಲ್ಲಿ ಚೊಚ್ಚಲ ಹೊನಲು-ಬೆಳಕು ಟೆಸ್ಟ್ ಪಂದ್ಯಾಡಲು ಭಾರತ ತಂಡದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರ ಉತ್ಸುಕತೆ ವ್ಯಕ್ತಪಡಿಸಿದ್ದಾರೆ. ಕಳೆದ ಭಾನುವಾರ ಟಿ-20 ಸರಣಿ ಮುಗಿಸಿರುವ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯ ಪೂರ್ವ ಸಿದ್ಧತೆಯಲ್ಲಿ ತೊಡಗಿವೆ. ನವೆಂಬರ್ 22 ರಿಂದ 26ರವರೆಗೆ ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯಲಿದೆ. ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರ ಅವರು ಹಗಲು ರಾತ್ರಿ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡುತ್ತಿರುವ ವಿಡಿಯೋವೊಂದನ್ನು ಬಿಸಿಸಿಐ ಶೇರ್ ಮಾಡಿದೆ. "ಹಗಲು-ರಾತ್ರಿ ಟೆಸ್ಟ್ ಪಂದ್ಯ ನಿಜಕ್ಕೂ ಆಸಕ್ತದಾಯಕವಾಗಿದೆ. ದುಲೀಪ್ ಟ್ರೋಫಿ ವೇಳೆ ಪಿಂಕ್ ಚೆಂಡಿನಲ್ಲಿ ಆಡಿದ್ದೆ ಹಾಗೂ ಈ ಚೆಂಡಿನಲ್ಲಿ ಆಡಲು ಆಸಕ್ತದಾಯಕವಾಗಿದೆ. ಇದೀಗ ನಾವು ಇದೇ ಚೆಂಡಿನಿಂದ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವುದು ಉತ್ಸುಕತೆ ತಂದಿದೆ." ಎಂದು ಚೇತೇಶ್ವರ ಪೂಜಾರ ವೀಡಿಯೋದಲ್ಲಿ ತಿಳಿಸಿದ್ದಾರೆ. "ದುಲೀಪ್ ಟ್ರೋಫಿ ವೇಳೆ ಲೈಟ್ ಬೆಳಕಿನಲ್ಲಿ ಪಿಂಕ್ ಚೆಂಡನ್ನು ಎದುರಿಸುವುದು ಚಾಲೆಂಜ್ ಆಗಿತ್ತು. ಬೆರೊಬ್ಬ ಆಟಗಾರನ ಬಳಿ ಕೇಳಿದಾಗ ಮುಷ್ಟಿ ಸ್ಪಿನ್ನರ್ಗಳನ್ನು ಎದುರಿಸುವುದು ಕಷ್ಟ ಎಂದು ಹೇಳಿದ್ದರು ಎಂದು ಪೂಜಾರ ಹೇಳಿದರು. "ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ಭಾರತಕ್ಕೆ ಯಾವುದೇ ಸಮಸ್ಯೆ ಏನಿಲ್ಲ. ಆಟಗಾರರಿಗೂ ಸೇರಿದಂತೆ ಅಭಿಮಾನಿಗಳಿಗೂ ಪಿಂಕ್ ಚೆಂಡಿನ ಪಂದ್ಯ ಉತ್ಸಾಹ ಮೂಡಿಸಿದೆ." ಎಂದು ರಹಾನೆ ತಿಳಿಸಿದರು. "ಹೊಸ ಚಾಲೆಂಜ್ ಎದುರಿಸಲು ಬಹಳ ಉತ್ಸುಕನಾಗಿದ್ದೇನೆ. ಪಂದ್ಯವಾಡುವ ವೇಳೆ ಸಹಜವಾಗಿ ಯಾವ ರೀತಿ ಆಡಬೇಕೆಂದು ಉಪಾಯ ಹೊಳೆಯುತ್ತದೆ. ಪಂದ್ಯಕ್ಕೂ ಮುನ್ನ ನಾವು ನಡೆಸುವ ಅಭ್ಯಾಸದಲ್ಲಿ ಚೆಂಡು ಹೇಗೆ ವತರ್ಿಸುತ್ತದೆ ಎಂಬ ಬಗ್ಗೆ ಅರಿವಾಗಲಿದೆ. ಪಿಂಕ್ ಚೆಂಡು ವಿಶೇಷವಾಗಿ ತಡವಾಗಿ ಸ್ವಿಂಗ್ ಆಗುತ್ತದೆ. ಆದ್ದರಿಂದ ಬ್ಯಾಟ್ಸ್ಮನ್ ಗಳು ಕೂಡ ತಡವಾಗಿ ಶಾಟ್ಗೆ ಮೊರೆ ಹೋಗುವುದು ಒಳಿತು." ಎಂದು ಉಪ ನಾಯಕ ಅಜಿಂಕ್ಯಾ ರಹಾನೆ ಸಲಹೆ ನೀಡಿದರು.