ಬೆಳಗಾವಿ.ಡಿ.19: ತಾಜ್ ವೆಸ್ಟ್ ಎಂಡ್ ನಲ್ಲಿ ವಗರ್ಾವಣೆ ನಡೆಸಿ ಅಕ್ರಮ ಎಸಗಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನಸಭೆಯಲ್ಲಿಂದು ನೇರ ಸವಾಲು ಹಾಕಿದ್ದಾರೆ.
ಬರದ ಮೇಲಿನ ಚಚರ್ೆಗೆ ಉತ್ತರ ನೀಡಿದ ಸಂದರ್ಭದಲ್ಲಿ ಕುಮಾರಸ್ವಾಮಿ, ತಾವು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ವಾಸ್ತವ್ಯ ಮಾಡಿರುವ ಬಗೆಗಿನ ಟೀಕೆಗೆ ಪ್ರತಿಕ್ರಯಿಸಿ, ಯಡಿಯೂರಪ್ಪ ಕೂಡ ಮುಖ್ಯಮಂತ್ರಿಯಾಗಿದ್ದಾಗ ಒಂದೆರಡು ದಿನ ಅದೇ ಹೊಟೇಲ್ ನಲ್ಲಿದ್ದದ್ದನ್ನು ನೆನಪಿಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಫೈವ್ ಸ್ಟಾರ್ ಹೊಟೇಲ್ ನಲ್ಲಿದ್ದೆ ಎನ್ನುವುದನ್ನು ಸಾಬೀತು ಪಡಿಸಿದರೆ ತಾವೂ ಸಹ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಯುಡಿಯೂರಪ್ಪ ಪ್ರತಿ ಸವಾಲು ಹಾಕಿದರು.
ನೀವು ಮೂರು ದಿನ ಮುಖ್ಯಮಂತ್ರಿಯಾಗಿದ್ದಾಗ ವೆಸ್ಟ್ ಎಂಡ್ ನಲ್ಲೇ ಅಧಿಕಾರಿಗಳ ಸಭೆ ಕರೆದಿರುವುದು ತಮಗೆ ಗೊತ್ತಿದೆ. ತಾವು ಅಲ್ಲಿಗೆ ಹೋದಾಗ ಅಧಿಕಾರಿಗಳು ನನಗೆ ಮುಖ ತೋರಿಸದೆ ಮುಖಮುಚ್ಚಿಕೊಂಡು ಓಡಾಡುತ್ತಿದ್ದರು ಎಂದು ಕುಮಾರ ಸ್ವಾಮಿ ರೇಗಿಸಿದರು. ಅಲ್ಲದೇ ತಾವು ವಗರ್ಾವಣೆಯಲ್ಲಿ ಭ್ರಷ್ಟಾಚಾರ ನಡೆಸಿದ್ದರೆ, ಯಾರಾದರೂ ಒಬ್ಬರನ್ನು ಅಕ್ರಮವಾಗಿ ವಗರ್ಾವಣೆ ಮಾಡಿದ್ದು, ಅವ್ಯವಹಾರ ನಡೆಸಿರುವುದನ್ನು ನಿರೂಪಿಸಿದರೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ ಎಂದರು.
ನನಗೆ ಪಂಚತಾರಾ ಹೋಟೆಲ್ ನಲ್ಲಿ ತಂಗಬೇಕು ಎಂದೇನಿಲ್ಲ. ನಾನು ಬಡವರ ಗುಡಿಸಲಿನಲ್ಲೂ ವಾಸ ಮಾಡಿದ ಅನುಭವವಿದೆ. ಆದರೆ ನನ್ನ ಆರೋಗ್ಯದ ಪರಿಸ್ಥಿತಿ ಹೇಗಿದೆ ಎಂದು ನಿಮಗೆ ಗೊತ್ತಿದೆ. ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿದ್ದು, ಎಷ್ಟೋ ಸಲ ಊಟವನ್ನೂ ಮಾಡದೆ ಕೆಲಸ ಮಾಡುತ್ತಿರುತ್ತೇನೆ. ಬಡವರು ಮತ್ತು ಸಾಮಾನ್ಯರ ಕೆಲಸವನ್ನು ಹೇಗೆ ಮಾಡುತ್ತೇನೆ ಎಂದು ತಮಗೂ ಗೊತ್ತಿದೆ ಎಂದರು.
ಬೆಳಗಾವಿಯ ರೈತ ಹೆಣ್ಣುಮಗಳ ಬಗ್ಗೆ ಪದ ಬಳಕೆ ಮಾಡುವಾಗ ತಪ್ಪಾಯಿತೇನೋ ಎಂದು ಹೇಳಿದ ಕುಮಾರ ಸ್ವಾಮಿ, ಎಲ್ಲಿ ನಿದ್ದೆ ಮಾಡಿದ್ದೆ ಎಂದು ಆಕೆಗೆ ಎಂದು ಕೇಳಬೇಕಿತ್ತು. ಈ ಹೇಳಿಕೆಗೆ ನನ್ನನ್ನು ನಾಲಾಯಕ್ ಮುಖ್ಯಮಂತ್ರಿ ಎಂದು ಟೀಕಿಸುತ್ತಾರೆ. ಇಷ್ಟಕ್ಕೂ ಕಬ್ಬು ಬೆಳೆಗಾರರ ಸಮಸ್ಯೆ ಈಗ ಬಂದಿದೆಯಾ. ಅದಕ್ಕೆ ತಾವು ಕಾರಣವೇ. ಹಾಗಿದ್ದೂ ನಾನು ಆ ಹೆಣ್ಣುಮಗಳ ಬಗ್ಗೆ ಕೆಟ್ಟ ಭಾಷೆ ಬಳಸಿದ್ದೇನೆ ಎನಿಸಿದರೆ ಆ ಮಾತು ವಾಪಸ್ ಪಡೆಯಲು ಸಿದ್ದವಿದ್ದೇನೆ ಮುಖ್ಯಮಂತ್ರಿ ಕುಮಾರಸ್ವಾಮಿ ಸದನದಲ್ಲಿ ತಿಳಿಸಿದರು.