ಗಜಲ್ ಕವಿ ಶಾಂತರಸರ ಜನ್ಮ ಶತಮಾನೋತ್ಸವ ಪ್ರಯುಕ್ತ ಕವಿಗೋಷ್ಠಿ ಆಯೋಜನೆ
ಧಾರವಾಡ 05 : ಕನ್ನಡದ ಗಜಲ್ ಕವಿ ಎಂದು ಹೆಸರಾಗಿದ್ದ ದಿವಂಗತ ಶಾಂತರಸರ ಜನ್ಮ ಶತಮಾನೋತ್ಸವದ ಪ್ರಯುಕ್ತ ಧಾರವಾಡದ ಗಣಕರಂಗ ಮತ್ತು ಬೆಂಗಳೂರಿನ ಸಂಸ ಥಿಯೇಟರ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕವಿಗೋಷ್ಠಿಯನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾಹದೇಶಪಾಂಡೆ ಸಭಾಭವನದಲ್ಲಿ ದಿನಾಂಕ: 07-04-2025, ಸೋಮವಾರ ಬೆಳಿಗ್ಗೆ 9:45 ಗಂಟೆಗೆ ಆಯೋಜಿಸಲಾಗಿದೆ. ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಧಾರವಾಡದ ಹಿರಿಯ ಸಾಹಿತಿ ಡಾ.ವೈ.ಎಂ.ಭಜಂತ್ರಿಯವರು ವಹಿಸಿಕೊಳ್ಳಲಿದ್ದು, ಕವಿ ರಂಜಾನ್ ಕಿಲ್ಲೇದಾರ ಹೆಬಸೂರ ಆಶಯನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಜಲ್ ಕವಯಿತ್ರಿ ನಿರ್ಮಲಾ ಶೆಟ್ಟರ ಮತ್ತು ಜೆಎಸ್‌ಎಸ್ ಡಿಗ್ರಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ವಿ.ಜಿ.ಪೂಜಾರ ಆಗಮಿಸಲಿದ್ದಾರೆ. ಗಣಕರಂಗದ ಅಧ್ಯಕ್ಷ ಸಿದ್ಧರಾಮ ಹಿಪ್ಪರಗಿಯವರು ಗೌರವ ಉಪಸ್ಥಿತರಿರುವರು. ಕವಿಗೋಷ್ಟಿಯ ಆರಂಭಕ್ಕೆ ಯುವಸಾಹಿತಿ ರವಿ ಚಲವಾದಿ ಗೀತಗಾಯನ ನಡೆಯಲಿದೆ. ಇಪ್ಪತ್ತಕ್ಕಿಂತ ಹೆಚ್ಚು ಕವಿಗಳು ಭಾಗವಹಿಸಿ ಕವನ ವಾಚಿಸಲಿದ್ದಾರೆ. ಸದರಿ ಕವಿಗೋಷ್ಟಿ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವಿದೆಯೆಂದು ಸಿದ್ದರಾಮ ಹಿಪ್ಪರಗಿಯವರು (98451 09480) ಮಾಹಿತಿ ನೀಡಿರುವರು.